ರಂಗಾಯಣದ ನೂತನ ನಿರ್ದೇಶಕರಾಗಿ ಝಕೀರ ನದಾಫ ಅಧಿಕಾರ ಸ್ವೀಕಾರ
Zakir Nadaf takes charge as new director of Rangayana
ಲೋಕದರ್ಶನ ವರದಿ
ಧಾರವಾಡ: ಎಪ್ರೀಲ್ 27 ರಂದು ರಂಗನಿರ್ದೇಶಕರಾದ ಝಕೀರ ನದಾಫ ಅವರು ಧಾರವಾಡ ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರವನ್ನು ಸ್ವೀಕರಿಸಿದರು. ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ನಿರ್ದೇಶಕರಿಗೆ ಪುಸ್ತಕ ಹಾಗೂ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರು, ರಂಗಾಯಣ ರೆಪರ್ಟರಿ ಕಲಾವಿದರು, ಸಿಬ್ಬಂದಿಗಳು ಹಾಗೂ ರಂಗಭೂಮಿ ಕಲಾವಿದರು ಸೇರಿದಂತೆ ಅವರ ಆಪ್ತ ಬಳಗದವರು ಉಪಸ್ಥಿತರಿದ್ದರು.
ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನವರಾದ ಇವರು ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. 1978ರಲ್ಲಿ ರಂಗಭೂಮಿಯನ್ನು ಪ್ರವೇಶಿಸಿದರು. ಸಂಗೀತದಲ್ಲಿ ಆಸಕ್ತಿ ಹೊಂದಿದ ಇವರು 150ಕ್ಕೂ ಹೆಚ್ಚು ಭಕ್ತಿ ಗೀತೆಗಳು ಧ್ವನಿಸುರುಳಿಗಳಿಗೆ ಸಾಹಿತ್ಯ ರಚನೆ, ರಾಗ ಸಂಯೋಜನೆ ಹಾಗೂ ಗಾಯನ ಮಾಡಿದ್ದಾರೆ. ಮುಠ್ಠಾಳಗುಂಡಾ, ಉಂಡಾಡಿ ಗುಂಡಾ ಸಂಪತ್ತು ಕಂಡಾ, ಗುಂಡಾ ಭಂಡನಲ್ಲ ಪ್ರಚಂಡಾ ಸೇರಿದಂತೆ 07 ವೃತ್ತಿರಂಗ ಶೈಲಿಯ ನಾಟಕಗಳನ್ನು ರಚಿಸಿ ನಿರ್ದೇಶಿಸಿ ನಟಿಸಿದ್ದಾರೆ. ಬದುಕು ಬಂಗಾರವಾಯಿತು, ಮನೆಗೆ ತಕ್ಕ ಮಗ, ಬಂಗಾರದ ಲಿಂಗ, ಕಲಿತ ಕಳ್ಳ ಸೇರಿದಂತೆ 08 ವೃತ್ತಿರಂಗದ ನಾಟಕಗಳಲ್ಲಿ ನಟಿಸಿದ್ದಾರೆ. ಹಸ್ತಾಂತರ, ಬಿಳುಪಿನ ಹೆಣ, ಮಣ್ಣು, ಕಲ್ಲೂರ ವಾಡೆದಾಗ, ಬೀರವ್ವನ ಬಾಳೆಹಣ್ಣು ಸೇರಿದಂತೆ 22 ಹವ್ಯಾಸಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. 12 ಹವ್ಯಾಸಿ ನಾಟಕಗಳನ್ನು ಹಾಗೂ 10 ಹವ್ಯಾಸಿ ನಾಟಕಗಳಲ್ಲಿ ನಟಿಸಿದ್ದಾರೆ. ದಾರಿಯ ವೈಕುಂಠಕೆ, ಗುಲಾಮನ ಸ್ವಾತಂತ್ರ್ಯ ಯಾತ್ರೆ, ಗಾಂಧಿಯ ಅಂತಿಮ ದಿನಗಳು, ಉದ್ಭವ, ಮೃಚ್ಛಕಟ್ಟಿಕ ನಾಟಕಗಳಿಗೆ ಸಂಗೀತ ನೀಡಿದ್ದಾರೆ.
1993 ರಿಂದ 2003 ರವರೆಗೆ ರಂಗಸಂಪದದಲ್ಲಿ ನಟನಾಗಿ, 1997 ರಿಂದ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಸಂಸ್ಥಾಪನ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದಾರೆ. ದೂರದರ್ಶನದಲ್ಲಿ ಮಿಂಚು ಹಾಗೂ ವಾಸಾಂಶಿ ಜೀರ್ಣಾನಿ ನಾಟಕಗಳಲ್ಲಿ ಹಾಗೂ ಸಂಗವ್ವನ ಕಥೆ ಕಿರು ಚಲನಚಿತ್ರದಲ್ಲಿ ಅಭಿನಯಿದ್ದಾರೆ. ಆಕಾಶವಾಣಿಯಲ್ಲಿ ಮೆಟ್ಟಲಲೇರುವ ಗಡಿಬಿಡಿಯಲ್ಲಿ ಮರೆತವರು, ಕಿತ್ತೂರು ಚೆನ್ನಮ್ಮ, ಗತಿ, ನಮ್ದು ಹಳೆ ಕಥಿ, ಬಾಸಿಂಗ ಬಲ ನಾಟಕಗಳ ನಿರ್ದೇಶನ ಮಾಡಿದ್ದಾರೆ.
2019ರ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ, ಬೆಳಗಾವಿಯ ರಂಗಸಂಪದ ದಿಂದ 2019ರ ರಂಗಸಖ ಪ್ರಶಸ್ತಿ, ಬೆಂಗಳೂರಿನ ಬೀದಿ ನಾಟಕ ಅಕಾಡೆಮಿಯಿಂದ 2020ರ ಸಿಜಿಕೆ ನಾಟಕ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರಿಂದ 2011ರ ರಂಗಗೌರವ, ಬೆಳಗಾವಿಯ ರಂಗ ಸೃಷ್ಟಿ ಇವರಿಂದ 2024ರ ರಂಗಸಮ್ಮಾನ, ಯುವ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಇವರಿಂದ 2024ರ ಬೆಳಗಾವಿ ರತ್ನ ಪ್ರಶಸ್ತಿ, ಡಾಕ್ಟರ್ ಬಿಎಸ್ ಗವಿಮಠ ಪ್ರತಿಷ್ಠಾನ ಬೆಳಗಾವಿ ಇವರಿಂದ 2025ರ ರಂಗ ಚೇತನ ಪ್ರಶಸ್ತಿ, ಧಾರವಾಡದ ಅಭಿನಯ ಭಾರತಿ ಇವರಿಂದ 2025ರ ಅಭಿನಯ ಭಾರತಿ ರಂಗ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 