ಲೋಕದರ್ಶನ ವರದಿ
ಮಹಾಲಿಂಗಪುರ 27: ಸಾರಿಗೆ ಇಲಾಖೆಯ,ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ ಜಮಖಂಡಿ ಇಲಾಖೆಯ ವತಿಯಿಂದ "ವಾಯು ಮಾಲಿನ್ಯ ನಿಯಂತ್ರಣ ಜಾಗ್ರತಿ" ಮಾಸಾಚರಣೆಯನ್ನು ಸ್ಠಳಿಯ ಒಕ್ಕಲುತನ ಹುಟ್ಟುವಳಿ ವ್ಯಾಪಾರ ಕೇಂದ್ರದಲ್ಲಿ ನಡೆಸಲಾಯಿತು.
ಹಿರಿಯ ಮೋಟಾರು ವಾಹನ ತನಿಕಾಧಿಕಾರಿ ಎಸ್.ಆರ್.ಮರಿಲಿಂಗನ್ನವರ್.ಈ ಸಂಧರ್ಬದಲ್ಲಿ ಸುಮಾರು 2000 ಇಸ್ವಿ ಇಂದ ವಾಯು ಮಾಲಿನ್ಯ ಜಾಗ್ರತಿ ಅಭಿಯಾನ ಆರಂಭಗೊಂಡಿದೆ. ನಮ್ಮ ಇಲಾಖೆ ವತಿಯಿಂದ ಪ್ರತಿವರ್ಷವೂ ಸಾರ್ವಜನಿಕರಿಗೆ ಸದರಿ ವಿಷಯದ ಬಗ್ಗೆ ತಿಳುವಳಿಕೆಯನ್ನು ನೀಡಲು ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
ಹೊಗೆಯಿಂದ ಕ್ಯಾನ್ಸರ್, ಅಸ್ತಮಾ, ಟಿಬಿ,ಚರ್ಮ ರೋಗ,ದ್ರ ಸ್ಟಿ ಹೀನತೆ ಹೀಗೆ ಹಲವಾರು ರೋಗಗಳಿಂದ ಬಳಲಬೇಕಾಗುತ್ತದೆ,ಆದ್ದರಿಂದ ನಾವುಗಳು ನಮ್ಮ ವಾಹನಗಳನ್ನು ನಿಗದಿತ ಸಮಯದಲ್ಲಿಯೆ ಸವರ್ಿಸ್ಸಿಂಗ ಮಾಡಿಸುವದರಿಂದ ನಮ್ಮ ವಾಹನ ಸಮಸ್ಥಿತಿಯಲ್ಲಿರುತ್ತದೆ ಅಲ್ಲದೆ ನಿಮಗೆ ಆಥರ್ಿಕವಾಗಿ ಉಳಿತಾಯವು ಆಗುತ್ತದೆ. ಕಲಬೆರಕೆ ಪೆಟ್ರೋಲ್, ಡಿಜೇಲ್, ಬಳಸಬಾರದು ಇದರಿಂದ ಎಂಜಿನ್ ಕೆಟ್ಟು, ಬರುವ ಹೊಗೆಯಿಂದ ಪರಿಸರಕ್ಕೆ ಹಾಗೂ ಜೀವ ಸಂಕೂಲಕ್ಕೆ ಅಪಾಯಕಾರಿ ಎಂದರು.
ತರಬೇತಿಗೆ ಬಂದ ರೈತರಿಗೆ ನೀವೂ ಸಹ ಹೊಲ ಗದ್ದೆಗಳಲ್ಲಿ ಕಬ್ಬಿನ ತ್ಯಾಜ್ಯಗಳಿಗೆ ಬೆಂಕಿ ಹಾಕದೆ ಹಾಗೆಯೇ ಕೊಳೆಯಲು ಬಿಟ್ಟು ಸಾವಯವ ಗೊಬ್ಬರ ತಯಾರಿಸಿ
ಪರಿಸರ ಸ್ನೇಹಿ ಬೆಳೆ ಬೆಳೆಯುವುದರಿಂದ ಪರಿಸರದ ಕಾಳಜಿ ವಹಿಸಿದಂತಾಗುತ್ತದೆ. ಅಲ್ಲದೆ ಈ ಆಧುನಿಕ ಕಾಲದಲ್ಲಿ ಅನೇಕ ಹೊಗೆ ರಹಿತ ಒಲೆಗಳು ಬಂದಿರುವದಿಂದ ಇದರ ಸದುಪಯೋಗ ಪಡೆದುಕ್ಕೊಳ್ಳಲು ಸೇರಿದ ತರಬೇತುದಾರರಿಗೆ ಹಾಗು ವಾಹನ ಮಾಲಿಕರಿಗೆ,ತರಬೇತಿ ನೀಡುವ ಶಾಲಾ ಸಿಬ್ಬಂದಿಗೆ,ಶಾಲಾ ವಿಧ್ಯಾಥರ್ಿಗಳಿಗೆ, ಸಾರ್ವಜನಿಕರಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ರಾಜು ಪರಿಕರ್, ಲಕ್ಶ್ಮಣ್ ಮದರಖಂಡಿ, ಗ್ರಹರಕ್ಶಕ ದಳ ಸಿಬ್ಬಂದಿ, ಎಲ್.ಎನ್.ನಗಾಚರ್ಿ,ಎಮ್.ಜೆ.ಮಠದ, ನಾಗರಾಜ್ ಬಡಿಗೇರ್, ಎಸ್ಸ್.ಬಿ.ಕುರಿ, ಶಂಕರ್ ಮುಗಳಖೋಡ್, ಕೆ.ಎಸ್ಸ್.ನುಚ್ಚಿ, ಗಣೇಶ, ಸಿದ್ರಾಮ್ ಇನ್ನೂ ಹಲವರಿದ್ದರು.