ನಾಟಕ ಜೀವನೋತ್ಸಾಹವನ್ನು ಮೂಡಿಸುತ್ತದೆ
ಹೂವಿನಹಡಗಲಿ 28: ಕನ್ನಡ ನಾಟಕ ಪರಂಪರೆಗೆ ರಾಜ್ಯದ ನಾಟಕ ರಚನಾಕಾರರು ಹೊಸ ಬಗೆಯ ರೂಪವನ್ನು ಕೊಟ್ಟಿದ್ದಾರೆ, ನಾಟಕವು ಜೀವನೋತ್ಸಾಹವನ್ನು ಮೂಡಿಸುವ ಕಲೆಯಾಗಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಾರಯ್ಯ ಎಂ ಹೇಳಿದರು. ಪಟ್ಟಣ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಕನ್ನಡ ನಾಟಕ ಸಾಹಿತ್ಯ ಪರಂಪರೆ ವಿಷಯದ ಕುರಿತು ಮಾತನಾಡಿನಾಟಕ ಅಭಿನಯ ಕಲೆಯಾದರೂ ಅದರಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದೆ ಜತೆಗೆ ರಂಗಭೂಮಿಯತ್ತ ಯುವಕ, ಯುವತಿಯರು ಆಕರ್ಷಿತರಾಗಬೇಕಿದೆ. ಜೀವನೋತ್ಸಾಹ ಹಾಗೂ ಸಂಸ್ಕೃತಿಯನ್ನು ಬೆಸೆಯುವ ಸೊಬಗು ರಂಗಭೂಮಿಗೆ ಎಂದರು.ಪ್ರಭಾರಿ ಪ್ರಾಚಾರ್ಯ ಡಾ.ವೈ.ಚಂದ್ರಬಾಬು ಮಾತನಾಡಿ, ಇತ್ತೀಚಿನ ದಿನಗಳಲ್ಲಿನ ಯುವ ಸಮೂಹ ಮೊಬೈಲ್ಗಳ ಬಳಕೆಯಿಂದ ದೇಶಿಯ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ನಾಟಕ ನೋಡುವುದರಿಂದ ಹಾಗೂ ನಾಟಕಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ಹಾಗೂ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು. ಸಹಾಯಕ ಪ್ರಾಧ್ಯಾಪಕಿ ಉಮಾದೇವಿ, ಐಕ್ಯೂಎಸಿ ಸಂಯೋಜಕಿ ಮಹಿಮಾ ಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಶರಣಪ್ಪ, ಮಾಬುಸಾಬ್, ಅನ್ನದಾನಪ್ಪ, ಮಧುಸೂದನ ಕೆ, ಬಸವರಾಜ ಪಿ ಹಾಗೂ ವಿದ್ಯಾರ್ಥಿಗಳು ಇತರರಿದ್ದರು.