ಶಾಲೆಗೂ ಚರಂಡಿ ನೀರಿನ ಪ್ರವೇಶ

ಲೋಕದರ್ಶನ ವರದಿ

ಗಜೇಂದ್ರಗಡ 26: ಸಮೀಪದ ಇಟಗಿ ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ 2&3 ವಾಡರ್ಿನ ಚರಂಡಿ ನೀರು ಪ್ರವೇಶಿಸಿ ಶಾಲಾ ಮೈದಾನ ಮತ್ತು ಕೊಠಡಿಗಳು ದುನರ್ಾತ ಲೇಪನಗೊಂಡಿವೆ ಶಾಲಾ ವಾತಾವರಣವೆಂದರೆ ಹೂದೊಟದ ಮಾದರಿ ಕಂಗೊಳಿಸಬೇಕು ಆದರೆ ಇಲ್ಲಿನ ಶಾಲೆ ಮಕ್ಕಳಿಗೆ ರೋಗ-ರುಜನಗಳ ತಾಣವಾಗುತ್ತಿದೆ. 

ಕಳೆದ ಐದಾರು ವರ್ಷಗಳಿಂದ ಮಳೆಗಾಲ ಬಂತೆಂದರೆ ಸಾಕು ಹರ್ಷದ ಹೊನಲು ರೈತರಿಗೆ- ದುಃಖದ ಮಡಲು ಮಕ್ಕಳಿಗೆ ಮಳೆಗಾಲ ಮುಗಿಯುವವರೆಗೂ ಯಾಕರ ಸಾಲಿಗೆ ಬಂದಿದ್ದೆವೆ ಎಂಬ ಭಾವನೆ ಮಕ್ಕಳಿಗೆ ಮೂಡಿದಾಗ ಉತ್ತಮ ಕಲಿಕೆ ಹೇಗೆ ಸಾಧ್ಯ ಮಕ್ಕಳು ಪ್ರಶಾಂತ ಮತ್ತು ನೆಮ್ಮದಿಯ ಸ್ಥಳದಲ್ಲಿ ಕುಳಿತಾಗ ಮಾತ್ರ ಪಾಠ, ಪ್ರವಚನಗಳನ್ನು ಆಲಿಸಲು ಸಾಧ್ಯ ಇಂತಹ ಚರಂಡಿ ನೀರು ಹೊಕ್ಕ ದುನರ್ಾತದ ಮಧ್ಯ ಶಿಕ್ಷಕರಾದರು ಹೇಗೆ ಪಾಠ ಮಾಡಲು ಸಾಧ್ಯ ಎಂಬುವುದನ್ನು ಅರಿತು ಶಿಕ್ಷಣಕೇಂದ್ರಕ್ಕೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕಾದ ಗ್ರಾಮ ಪಂಚಾಯತಿ ಕಣ್ಣು ಮುಚ್ಚಿ ಕುಳಿತರೆ ಊರಿನ ಕಂದಮ್ಮಗಳ ಗತಿ ಏನು? ಮಳೆಯಾದಾಗ ಚರಂಡಿ ನೀರು ಮತ್ತು ಊರಿನ ಕಲ್ಮಶ ಶಾಲೆಗೆ ನುಗ್ಗದಂತೆ ಕ್ರಮ ಕೈಗೊಂಡು ಸುವೆವಸ್ಥೆ ಕಲ್ಪಿಸಬೇಕು.

ಶಿಕ್ಷಣ ಅಧಿಕಾರಿಗಳು ಕೂಡಾ ಈ ರೀತಿಯ ಸಮಸ್ಯೆಗೆ ಸ್ಪಂದಿಸುವಂತಹ ಕ್ರಮಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಯುವ ಮುಖಂಡ ಮಲ್ಲಪ್ಪ ಕುರಿ ಎಚ್ಚರಿಸಿದ್ದಾರೆ.


ಅಧಿಕಾರಿಗಳೇ ಕಣೆ್ತೆರೆದು ನೋಡುವಿರಾ ಈ ಸೌಲಭ್ಯ ವಂಚಿತ ಸಕರ್ಾರಿ ಪ್ರೌಢ ಶಾಲೆಯನ್ನು