ಡಾ. ವೀರಣ್ಣ ರಾಜೂರರಿಗೆ ಸನ್ಮಾನ

ಲೋಕದರ್ಶನ ವರದಿ

ಹುಬ್ಬಳ್ಳಿ 27: ಕನರ್ಾಟಕ ವಿಶ್ವವಿದ್ಯಾಲಯದ ನಿವೃತ್ ಪ್ರಾಧ್ಯಾಪಕ, ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ, ಬಸವೋತ್ತರಯುಗದ ವಚನಕಾರರ ಕುರಿತು ಸುದೀರ್ಘವಾಗಿ ಸಂಶೋಧನೆ ನಡೆಸಿದವರಲ್ಲಿ ಅಗ್ರಗಣ್ಯರಾದ ಡಾ. ವೀರಣ್ಣ ರಾಜೂರ ಅವರು ಧಾರವಾಡ ಮುರುಘಾಮಠದ ಪ್ರಸಾದ ನಿಲಯ ಶತಮಾನೋತ್ಸವ ಸವಿ ನೆನಪಿಗಾಗಿ ಹೊರ ತಂದ ಒಂದು ನೂರಾ ಹನ್ನೊಂದು ಗ್ರಂಥಗಳ ಸಂಪಾದನೆಯ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಕಾಗಿ ಡಾ. ವೀರಣ್ಣ ರಾಜೂರ ಅವರಿಗೆ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ, ಗ್ರಂಥ ನೀಡಿ ಗೌರವಿಸಿ, ಅಭಿನಂದನೆಗಳನ್ನು ಸಲ್ಲಿಸಲಾಯಿತು. ಬಸವ ಕೇಂದ್ರದ ಅಧ್ಯಕ್ಷ, ಕನರ್ಾಟಕ ವಿಶ್ವವಿದ್ಯಾಲಯದ ನಿವೃತ್ ಪ್ರಾಧ್ಯಾಪಕ ಡಾ. ಬಿ.ವಿ.ಶಿರೂರ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕನರ್ಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಬಸವ ಕೇಂದ್ರದ ಎಂ.ವಿ.ಗೊಂಗಡಶೆಟ್ಟಿ,  ಪ್ರೊ. ಜಿ.ಬಿ.ಹಳ್ಳಾಳ, ಪ್ರೊ ಎಸ್.ಸಿ.ಇಂಡಿ, ಸುರೇಶ ಪರಮಶೆಟ್ಟಿ, ಎಸ್.ಎ.ಕೋರಿ, ಬಸವರಾಜ ಲಿಂಗಶೆಟ್ಟರ, ಪ್ರೊ ಎಸ್.ಎಂ.ಸಾತ್ಮಾರ, ಪ್ರೊ.ಎಸ್.ಎಸ್.ಹಲರ್ಾಪೂರ, ಶಂಕರ ಕೋಳಿವಾಡ, ಕೆ.ಎಸ್.ಇನಾಮತಿ,  ಮುಂತಾದವರು ಇದ್ದರು.