ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸುಲು ಡಾ.ಶ್ರೀನಿವಾಸ ಕರೆ

ಲೋಕದರ್ಶನ ವರದಿ

ಕಂಪ್ಲಿ 06: ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸುವ ಮೂಲಕ ಕ್ಯಾನ್ಸರ್ ರೋಗ ತಡೆಗಟ್ಟಲು ಸಾಧ್ಯವಿದೆ ಎಂದು ಇಲ್ಲಿನ ಸಕರ್ಾರಿ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ.ಶ್ರೀನಿವಾಸ ಹೇಳಿದರು. 

    ಅವರು ಮಂಗಳವಾರ ಇಲ್ಲಿನ ಸಕರ್ಾರಿ ಆಸ್ಪತ್ರೆ ಆವರಣದಲ್ಲಿ, ಕ್ಯಾನ್ಸರ್ ರೋಗಗಳ ತಡೆಗಟ್ಟುವಿಕೆ, 2019ರ ಸ್ಪಶರ್್ ಕುಷ್ಠರೋಗ ಅರಿವು ಆಂದೋಲನ ಹಾಗೂ ಜಂತು ಹುಳು ನಿವಾರಣೆ ದಿನಾಚರಣೆ ಕುರಿತ ಜಾಗೃತಿ ಜಾಥಕ್ಕೆ ಚಾಲನೆ ನೀಡಿ,ತಂಬಾಕುಬಳಕೆಯಿಂದ ಯುವ ಜನತೆ ದೂರವಾಗಬೇಕು.ಯೋಗ, ಧ್ಯಾನ, ಪ್ರಾಣಾಯಾಮ,  ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಕ್ಯಾನ್ಸರ್ ರೋಗಿಗಳು  ವೈದ್ಯರ ಸಂಪರ್ಕ.ಸಲಹೆ ಹಾಗೂ ಚಿಕಿತ್ಸೆ ಪಡೆಯುವ ಮೂಲಕ ಕ್ಯಾನ್ಸರ್ ರೋಗದ ತೀವ್ರತೆಯನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು. 

    ಆಯುಷ್ ವೈದ್ಯ ಡಾ.ಮಲ್ಲೇಶಪ್ಪ ಮಾತನಾಡಿ, ಭಾರತವನ್ನು ಕುಷ್ಠ ಮುಕ್ತ ದೇಶವನ್ನಾಗಿಸಲು ಸರ್ವರೂ ಕೈಜೋಡಿಸಿ ಸಹಕರಿಸಬೇಕು. ಶಾಪ ಅಥವಾ ಪೂರ್ವಜನ್ಮದ ಕರ್ಮದಿಂದ ಕುಷ್ಠ ರೋಗ ಬರುತ್ತದೆ ಎನ್ನುವ ತಪ್ಪು ತಿಳುವಳಿಕೆಯಿಂದ ಹೊರಬರಬೇಕಾಗಿದೆ. ದೇಹದ ಯಾವುದೇ ಭಾಗದ ಮೇಲೆ ಸ್ಪರ್ಶಜ್ಞಾನವಿಲ್ಲದ ಬಿಳಿ ತಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಂಡು ಬಂದಲ್ಲಿ ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು. 

     ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ ಮಾತನಾಡಿ, ಮಕ್ಕಳ ಅಂಗಾಂಗಗಳ ಸ್ವಚ್ಚತೆ ಕಾಪಾಡುವುದರಿಂದ ಜಂತು ಹುಳು ರೋಗ ಭಾದೆಯಿಂದ ಮಕ್ಕಳನ್ನು ಪಾರು ಮಾಡಬಹುದಾಗಿದೆ. ಆಹಾರ ಸೇವನೆಗೆ ಮೊದಲು ಕೈಬಾಯಿಗಳನ್ನು ಸ್ವಚ್ಚಗೊಳಿಸಬೇಕಾಗಿದೆ.  ಸಮತೋಲನ ಆಹಾರ ಸೇವನೆಯಿಂದ ಮಕ್ಕಳನ್ನು ನಾನಾ ರೋಗಗಳಿಂದ ತಡೆಗಟ್ಟಬಹುದಾಗಿದೆ. ಜಂತು ಹುಳು ರೋಗ ನಿಯಂತ್ರಣಕ್ಕೆ ಮಕ್ಕಳಿಗೆ ಔಷಧಿ ಕೊಡಿಸುವಲ್ಲಿ ಪೋಷಕರು ಜಾಗೃತಿ ತೋರಬೇಕು ಎಂದುಹೇಳಿದರು. 

     ಜಾಗೃತಿ ಜಾಥ ಸಕರ್ಾರಿ ಆಸ್ಪತ್ರೆಯಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿ ಪುನಃ ಆಸ್ಪತ್ರೆಯಲ್ಲಿ ಸಮಾರೋಪಗೊಂಡಿತು. ಜಾಥದಲ್ಲಿ ಷಾ.ಮಿಯಾಚಂದ್ ಹೈಸ್ಕೂಲ್ ಮಕ್ಕಳು ಘೋಷಣೆ ಕೂಗುತ್ತ, ಫಲಕಗಳನ್ನು ಹಿಡಿದು ಪಾಲ್ಗೊಂಡಿದ್ದರು. 

   ಜಾಗೃತಿ ಜಾಥದಲ್ಲಿ ಎನ್ಸಿಡಿ ಸಮಾಲೋಚಕ ಡಿ.ಎಂ.ಮಹ್ಮದ್, ಎನ್ಸಿಡಿಯ ಡಿ.ದೇವಣ್ಣ, ಚಂದ್ರಶೇಖರ್, ಶೃತಿ, ಉಪ ಪ್ರಾಚಾರ್ಯ ಎಸ್.ಜಿ.ಚಿತ್ರಗಾರ್, ನ್ಯಾಮನಾಯ್ಕ ಸೇರಿ ಅನೇಕರು ಪಾಲ್ಗೊಂಡಿದ್ದರು.