ಮುಂಡರಗಿಯ ವಿಜಯ ಕ್ಲಿನಿಕ್ ವೈಧ್ಯಾಧಿಕಾರಿ ಡಾ.ವಿಜಯಕುಮಾರ ಗಿಂಡಿಮಠ ಇವರು ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಲಸಿಕೆ ಕಾರ್ಯಕ್ರಮ
ಮುಂಡರಗಿ 22 : ಪಟ್ಟಣದ ವಿಜಯ ಕ್ಲಿನಿಕ್‌ನಲ್ಲಿ ಸುಮುಖ ಅಸೋಸಿಯೇಟ್ಸ್ ಹಾಗೂ ಡಾ.ವಿಜಯ್‌ಕುಮಾರ ಗಿಂಡಿಮಠ ಇವರ ವತಿಯಿಂದ 5 ಸಾವಿರ ವರ್ಷಗಳ ಇತಿಹಾಸವಿರುವ ಸ್ವರ್ಣಬಿಂದು ಪ್ರಾಶನ ಆಯುರ್ವೇದಿಕ್ ಲಸಿಕೆ ಕಾರ್ಯಕ್ರಮ ಜರುಗಿತು.
ಈ ವೇಳೆ ಡಾವಣಗೇರಿಯ ಸುಮುಖ ಅಸೋಸಿಯೇಟ್ಸ್ ವತಿಯಿಂದ ಹುಟ್ಟಿದ ಮಗುವಿನಿಂದ 16 ವರ್ಷದ ಮಕ್ಕಳಿಗೆ ನೀಡುತ್ತಿರುವ ಆಯುರ್ವೇದಿಕ್ ಓಷದಿಯನ್ನು ಮುಂಡರಗಿಯ ವಿಜಯ ಕ್ಲಿನಿಕ್ ವೈಧ್ಯಾಧಿಕಾರಿ ಡಾ.ವಿಜಯಕುಮಾರ ಗಿಂಡಿಮಠ ಇವರಿಂದ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಲಸಿಕೆಯನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕ್ಲಿನಿಕ್‌ನಲ್ಲಿ ಸುಮುಖ ಅಸೋಸಿಯೇಟ್ಸ್ ವತಿಯಿಂದ ಪ್ರತಿ ತಿಂಗಳ ಪವಿತ್ರ ಪುಷ್ಯ ನಕ್ಷತ್ರದಂದು ಬೆಳಿಗ್ಗೆ 10:30 ರಿಂದ ಮದ್ಯಾಹ್ನ 3 ಗಂಟೆಯವರೆಗೆ ಕಡಿಮೆ ಅತ್ಯಂತ ರಿಯಾಯಿತಿ ಧರದಲ್ಲಿ ಹುಟ್ಟಿದ ಮಗುವಿನಿಂದ 16 ವರ್ಷದ ಮಕ್ಕಳಿಗೆ ಆಯುರ್ವೇದಿಕ್ ಲಸಿಕೆಯನ್ನು ನೀಡಲಾಗುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಹಾಗೂ ಪ್ರತಿ ಭಾನುವಾರದಂದು ಮೂಲವ್ಯಾದಿ, ಭಗಂದರ, ಪಿಶರ್, ಪೈಮೊಸಿಸ್, ಕೊಬ್ಬಿನ ಗಡ್ಡೆಗಳು, ಕೀವಿನ ಗಡ್ಡೆ, ಸಿಸ್ಟ್, ಕಿವಿಯ ಮೇಲಿನ ಗಡ್ಡೆಗಳು, ಮೂಗಿನ ಒಳಗಡೆ ಮಾಂಸ ಬೆಳೆದಿರುವುದು, ಇನ್ನೂ ಮುಂತಾದುವುಗಳಿಗೆ ಓಷಧ ಚಿಕಿತ್ಸೆ, ಕ್ಷಾರಕರ್ಮ ಚಿಕಿತ್ಸೆ, ಕ್ಷಾರಸೂತ್ರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು ಎಂದು ಸುಮುಖ ಅಸೋಸಿಯೇಟ್ಸ್ ಮುಖ್ಯಸ್ಥ ಶಶಿಧರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರವೀಣ, ಗೌರೀಶ ಹಾಗೂ ಸುಮುಖ ಅಸೋಸಿಯೇಟ್ಸ್ ಸಿಬ್ಬಂದಿಗಳು ಇದ್ದರು.