ವಿಜ್ಞಾನ ದೇಶದ ಬೆಳವಣಿಗೆಗೆ ಸಹಕಾರಿ ಡಾ ಪ್ರಮೋದ್ ಪಾಟೀಲ್
ಹೂವಿನ ಹಡಗಲಿ 03 : ವಿಜ್ಞಾನ ತಂತ್ರಜ್ಞಾನ ದೇಶದ ಬೆಳವಣಿಗೆಗೆ ಪೂರಕ ಎಂದ ಯುವ ವಿಜ್ಞಾನಿ ಡಾ ಪ್ರಮೋದ್ ಪಾಟೀಲ್ ಹೇಳಿದರು.ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ ದೇಶದ ಮೊದಲ ಶಿಕ್ಷಕಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಜಯಂತಿ ಆಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ವಿಜ್ಞಾನ ತಂತ್ರಜ್ಞಾನ ಮುಂದೆ" ಕುರಿತು ಮಾಹಿತಿ ನೀಡಿದರು.ಜನರ ನಿತ್ಯದ ಬದುಕಿನಲ್ಲಿ ವಿಜ್ಞಾನ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅನೇಕ ಆವಿಷ್ಕಾರಗಳು ಸಂಶೋಧನೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ.ವಿದ್ಯಾರ್ಥಿಗಳು ವಿಜ್ಞಾನವನ್ನು ಬಹಳ ಆಸಕ್ತಿಯಿಂದ ಕಲಿಯಬೇಕು ಎಂದು ಹೇಳಿದರು.ನ್ಯಾನೋ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಸಂಶೋಧನೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ವಿಪುಲವಾಗಿ ಜನರನ್ನು ತಲುಪುವ ನೀರೀಕ್ಷೆಯಿದೆ ಎಂದರು.ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯಾಪಕ ಬೆಳವಣಿಗೆ ಆಗುತ್ತಿವೆ. ರಕ್ಷಣೆ, ಶಿಕ್ಷಣ, ವೈದ್ಯಕೀಯ, ಕೃಷಿ,ನೀರಾವರಿ,ಮೊದಲಾದ ರಂಗಗಳಲ್ಲಿ ವಿಜ್ಞಾನದ ಅನ್ವಯಗಳನ್ನು ಬಳಸಲಾಗುತ್ತದೆ ಎಂದರು.ನೆದರ್ಲೆಂಡ್ ನ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.ಮುಖ್ಯ ಗುರು ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ದ್ವಾರಕೀಶ್ ರೆಡ್ಡಿ ಎಸ್ ಗೀತಾ ಪಿ ಎಂ ಮಾತನಾಡಿದರು.ನೆದರ್ಲೆಂಡ್ ನಲ್ಲಿ ಸಾಧನೆಗೈದ ಸಾಧಕ ವಿದ್ಯಾರ್ಥಿಗೆ ಶಾಲೆಯ ವತಿಯಿಂದ ಗೌರವಿಸಲಾಯಿತು.ಶಿಕ್ಷಕರಾದ ವೈ ಜಯಮ್ಮ ಬಸಪ್ಪ ಕೆಆನಂದ್ ಜಿ ಸ್ವಾಮಿನಾಥ ರಾಮಸ್ವಾಮಿ ಲಂಬಾಣಿ ಗಿಡ್ಡಾನಾಯ್ಕ್ ಪ್ರತಿಮಾ ಎನ್ ಗೀತಾ ಪಿ ಎಂ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಸಂತೋಷ ಕುಮಾರ್ ಎಸ್ ಇತರರು ಉಪಸ್ಥಿತರಿದ್ದರು.