ಜೀನ್ಸ್‌ ಗಾಮೆಂರ್ಟ್ ಕಾರ್ಖಾನೆಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ

Dr. Nagalakshmi Choudhary, President of the State Women's Commission, visited the Jeans Gament fact

ಜೀನ್ಸ್‌ ಗಾಮೆಂರ್ಟ್ ಕಾರ್ಖಾನೆಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ

ಬಳ್ಳಾರಿ 13:ಬಳ್ಳಾರಿ-ಬೆಂಗಳೂರು ರಸ್ತೆಯ ಫೋಲಾಕ್ ಜೀನ್ಸ್‌ ಗಾಮೆಂರ್ಟ್ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಶುಕ್ರವಾರ ಭೇಟಿ ನೀಡಿ ಅಲ್ಲಿನ ಮಹಿಳಾ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. 

ನಿಗಧಿತ ವೇಳೆಗೆ ವೇತನ, ಪಿಎಫ್ ಸೌಲಭ್ಯ ಜಮೆಯಾಗುತ್ತಿದೆಯೇ ಎಂದು ಮಹಿಳಾ ಕಾರ್ಮಿಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸಬೇಕು. ಸಕಾಲದಲ್ಲಿ ಅವರಿಗೆ ವೇತನ ಮತ್ತು ಪಿಎಫ್ ಪಾವತಿಸಬೇಕು ಎಂದು ಕಾರ್ಖಾನೆಯ ಮಾಲೀಕರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್‌.ಕೆ.ಹೆಚ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾಂತೇಶ ಸೇರಿದಂತೆ ಕಾರ್ಖಾನೆಯ ಮಾಲೀಕರು, ಮಹಿಳಾ ಕಾರ್ಮಿಕರು ಹಾಗೂ ಇತರರು ಇದ್ದರು.