ಡಾ ಮನಮೋಹನ್ ಸಿಂಗ್ ದೇಶ ಕಂಡ ಅಪ್ರತಿಮ ಆರ್ಥಿಕತಜ್ಞ
ಹೂವಿನ ಹಡಗಲಿ: 27- ಡಾ ಮನಮೋಹನ್ ಸಿಂಗ್ ರವರು ದೇಶ ಕಂಡ ಅಪ್ರತಿಮ ಆರ್ಥಿಕತಜ್ಞ ಎಂದು ಸಿಂಚನ ಪ್ರಕಾಶನದ ಸುರೇಶ ಅಂಗಡಿ ಹೇಳಿದರು.ಪಟ್ಟಣದ ವಿಜಯಮಲ್ಲಿಗೆ ಸೌಹಾರ್ದ ಸಹಕಾರಿ ಪತ್ತಿನ ಕಚೇರಿಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ರವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮನರೇಗಾ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಆಧಾರ್ ಕಾರ್ಡ್ ಜಾರಿ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಹೇಳಿದರು.ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್ ಡಾ ಮನಮೋಹನ್ ಸಿಂಗ್ ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಪ್ರಧಾನಿ ಹುದ್ದೆ ಅಲಂಕರಿಸಿದ್ದು ಅವಿಸ್ಮರಣೀಯ ಎಂದರು.ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಡಾ ಮನಮೋಹನ್ ಸಿಂಗ್ ರವರನ್ನು ಆಯ್ಕೆ ಮಾಡಿ ದೇಶದ ಬೆಳವಣಿಗೆ ಪೂರಕ ಎಂದರು.ಪತ್ರಕರ್ತ ಎಂ ದಯಾನಂದ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್, ಮುಖ್ಯ ಗುರುಗಳಾದ ವೀರೇಶ್, ವಿಜಯಮಲ್ಲಿಗೆ ಸಹಕಾರಿ ಪತ್ತಿನ ವ್ಯವಸ್ಥಾಪಕರಾದ ಎಚ್ ನಿಂಗಪ್ಪ ಇತರರು ಉಪಸ್ಥಿತರಿದ್ದರು.