ಇಂದು ಕುಕನೂರಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಜನ್ಮದಿನಾಚರಣೆ

Dr. Kukanur today. BR Ambedkar Birthday Celebration

ಇಂದು ಕುಕನೂರಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್ ಜನ್ಮದಿನಾಚರಣೆ

ಕುಕನೂರು 18: ತಾಲೂಕಾಡಳಿತದಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್‌.ಅಂಬೇಡ್ಕರ್ ರವರ 134 ನೇ ಜನ್ಮದಿನಾಚರಣೆ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಜನ್ಮ ದಿನಾಚರಣೆಯನ್ನು ದಿ.19ರಂದು ಆಚರಿಸಲಾಗುವುದು.    

ಭಾವಚಿತ್ರ ಮೆರವಣಿಗೆ ಬೆಳಗ್ಗೆ 9 ಗಂಟೆಗೆ ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದದಿಂದ ಭಾವಚಿತ್ರ ಮೆರವಣಿಗೆ ಪ್ರಾರಂಭವಾಗುತ್ತದೆ. ನಂತರ ಬೆಳಗ್ಗೆ 11ಗಂಟೆಗೆ ಅಂಬೇಡ್ಕರ್ ವೃತ್ತದ ಪಕ್ಕದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಹಾಜರಿರಲು ಕೋರಿದೆ. ಇರ್ವರ ಮಹನೀಯ ನಾಯಕರ ಜಯಂತಿಗೆ ಕುಕನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು, ವಿವಿಧ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು,  ಮಾಧ್ಯಮದ ಸ್ನೇಹಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲುತಹಶೀಲ್ದಾರ್ ಎಚ್‌. ಪ್ರಾಣೇಶ, ಯಲಬುರ್ಗಾ  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ತಾಲೂಕ ಪಂಚಾಯತಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದಾರ್ ಪಾಟೀಲ್, ತಾಲೂಕ ಪಂಚಾಯತ ಕಾರ್ಯನಿರ್ವಾಹ ಅಧಿಕಾರಿ ರವೀಂದ್ರ ಬಾಗಲಕೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.