ಡಾ.ಕವಿತಾ ಮಿಶ್ರಾ ಅವರಿಗೆ ಶ್ರೇಷ್ಠ ಕೃಷಿ ಸೇವಾ ಗೌರವ ಪ್ರಶಸ್ತಿ ಪ್ರದಾನ
ಧಾರವಾಡ 24: ರೈತರಿಗೆ ಋತು ಆಧಾರಿತ ಕೃಷಿ ಪದ್ಧತಿ ವರದಾನವಾಗಿದೆ. ಕೃಷಿಕರು ತಮ್ಮ ಕಸುಬನ್ನುಉದ್ಯಮವನ್ನಾಗಿಸಬೇಕುಎಂದು ಕವಿತಾಳದ ಪ್ರಗತಿಪರ ಕೃಷಿ ತಜ್ಞೆ ಡಾ.ಕವಿತಾ ಮಿಶ್ರಾ ಅಭಿಪ್ರಾಯ ಪಟ್ಟರು
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬೆಲ್ಲದ ಕೃಷಿ ಮತ್ತು ಶಿಕ್ಷಣ ಪ್ರತಿಷ್ಠಾನ, ಧಾರವಾಡದತ್ತಿಉದ್ಘಾಟನೆ ಮತ್ತು ಶ್ರೇಷ್ಠ ಕೃಷಿ ಸೇವಾ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ರೈತರುಋತುಮಾನಕ್ಕೆತಕ್ಕಂತೆ ಹಣ್ಣುಗಳನ್ನು ಹಾಗೂ ವಿವಿಧರೀತಿಯ ಮಿಶ್ರ ಬೆಳೆಗಳನ್ನು ಬೆಳೆಯಬೇಕು.ಕೇವಲ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುರಿಸಿದರೆ ಹೆಚ್ಚಿನಆದಾಯ ನೀರೀಕ್ಷಿಸಲು ಸಾಧ್ಯವಿಲ್ಲ. ದೀರ್ಘಾವಧಿಯಅರಣ್ಯ ಕೃಷಿ, ಪಶು ಸಂಗೋಪನೆ ಹಾಗೂ ಉಪ ಕಸುಬುಗಳನ್ನು ಕೈಕೊಂಡರೆರೈತರಿಗೆ ನಿರಂತರಆದಾಯ ಬರುತ್ತದೆ.ರೈತರುಇಂದುಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು. ದೀರ್ಘಾವಧಿಯ ಶ್ರೀಗಂಧದ ಮರಗಳನ್ನು ಬೆಳೆಯುವುದರಿಂದ ರೈತರು ಹೆಚ್ಚಿನಆದಾಯ ಪಡೆಯಲು ಸಾಧ್ಯ. ಶ್ರೀಗಂಧಕ್ಕೆ ಇಂದು ವ್ಯಾಪಕ ಬೇಡಿಕೆಇರುವುದರಿಂದ ಸರಕಾರ ಮುಕ್ತ ಅವಕಾಶ ನೀಡಿದೆ
ರಾಯಚೂರು ಬಿಸಿಲಿನ ನಾಡುಆಗಿದ್ದು, ಮಳೆ ಪ್ರಮಾಣಕಡಿಮೆ. ಹೀಗಾಗಿ ನೀರಿನ ಸಮಸ್ಯೆಇದೆ.ಲಭ್ಯವಾದಅಲ್ಪ ಪ್ರಮಾಣದ ನೀರನ್ನೆಲ್ಲ ಮಿತವ್ಯಯವಾಗಿ ಉಪಯೋಗಿಸಿ ಸುಮಾರು 8 ಎಕರೆ ಹೊಲದಲ್ಲಿಎರಡೂವರೆ ಸಾವಿರ ಶ್ರೀಗಂಧ, ತೇಗ, ವಿವಿಧಜಾತಿಯ ಹಣ್ಣು ಹಾಗೂ ಧಾನ್ಯಗಳನ್ನು ನಾನು ಬೆಳೆಯುತ್ತಿದ್ದೇನೆ. ರೈತರು ಮಣ್ಣಿನೊಂದಿಗೆ ಮಣ್ಣಾಗಿದುಡಿದರೆ ಭೂತಾಯಿ ನಮ್ಮನ್ನು ಕೈ ಹಿಡಿಯುತ್ತಾಳೆ.ನಮ್ಮ ಬಣ್ಣ ಭೂಮಿಗೆಕೊಟ್ಟು, ಭೂಮಿಯ ಬಣ್ಣ ನಾವು ಪಡೆದಾಗ ಭೂಮಿ ನಮ್ಮನೆಂದೂಕೈಬಿಡುವುದಿಲ್ಲ. ಭೂಮಿಗಿರುವಷ್ಟು ಬೆಲೆ ಯಾವುದಕ್ಕೂಇರಲು ಸಾಧ್ಯವಿಲ್ಲ. ಅದೊಂದುದೊಡ್ಡ ಶಕ್ತಿ.ಇಂದು ಅನೇಕ ಎಂಎನ್‌ಸಿ ಕಂಪನಿ ನೌಕರರುಒತ್ತಡದಿಂದ ಹೊರಬರಲುಕೃಷಿಯತ್ತ ಬರುತ್ತಿದ್ದಾರೆ.ತವರಿನಲ್ಲಿ ನನಗೆ ಈ ಪ್ರಶಸ್ತಿ ಹೆಚ್ಚು ಗೌರವತಂದಿದೆ.ರೈತರುಇಂದುಕೋಟಿಯಲ್ಲಿ ಮಾತನಾಡುವಂತಾಗಬೇಕೆಂದರು.
ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭುದತ್ತಿ ಉದ್ಘಾಟಿಸಿ ಮತ್ತು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪ್ರಗತಿಪರ ಕೃಷಿಕ ಮಹಿಳೆಗೆ ಈ ಪ್ರಶಸ್ತಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ಕೊಟ್ಟಿದ್ದುಇಡೀ ಸ್ತ್ರೀ ಕುಲಕ್ಕೆ ಸಂತಸತಂದಿದೆ. ಕವಿತಾ ಮಿಶ್ರಾ ಕೃಷಿ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದ್ದಾರೆ.ಅವರನ್ನು ಮತ್ತುಇವರಿಗೆ ಸಹಕಾರ ನೀಡಿದಕವಿತಾಅವರ ಪತಿಯನ್ನು ಜಿಲ್ಲಾಡಳಿತ ಪರವಾಗಿಅಭಿನಂದಿಸುತ್ತೇವೆಎಂದರು.
ವೇದಿಕೆಯಲ್ಲಿದ್ದದತ್ತಿದಾನಿ ಚಂದ್ರಕಾಂತ ಬೆಲ್ಲದದತ್ತಿಆಶಯಕುರಿತು ಮಾತನಾಡಿದರು.ಮಾನ್ಯ ಶಾಸಕರಾದಅರವಿಂದಚಂದ್ರಕಾಂತ ಬೆಲ್ಲದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶತುರಮರಿ ಉಪಸ್ಥಿತರಿದ್ದರು
ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಡಾ. ಪಿ. ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ, ಕೃಷಿ ಕ್ಷೇತ್ರದಲ್ಲಿಯ ಅವಕಾಶ ಕುರಿತು ಮಾತನಾಡಿದರು.ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ ಶೈಲಜಾಅಮರಶೆಟ್ಟಿ ಪರಿಚಯಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ಪ್ರಶಸ್ತಿ ಫಲಕ ವಾಚಿಸಿದರು. ಶಂಕರ ಕುಂಬಿ ನಿರೂಪಿಸಿದರು.ಗುರು ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಪ್ರಶಾಂತ ಮತ್ತು ಮಹೇಶ ಬೆಲ್ಲದ, ಡಾ.ಗೌರಿ ಬೆಲ್ಲದ, ರಾಜೇಂದ್ರ ಸಾವಳಗಿ, ಶಂಕರಲಿಂಗ ಶಿವಳ್ಳಿ, ಕೆ.ಎಚ್.ನಾಯಕ, ಎಂ.ಎಂ.ಚಿಕ್ಕಮಠ, ಎಸ್.ಜಿ. ಪಾಟೀಲ, ಸಿ.ಜಿ. ಹಿರೇಮಠ, ಸುರೇಶ ಹಾಲಭಾವಿ, ಡಾ.ಪಾರ್ವತಿ ಹಾಲಭಾವಿ, ಅಗ್ನಿಹೋತ್ರಿ ಹಾಗೂ ಬೆಲ್ಲದ ಪರಿವಾರದವರುಇದ್ದರು.