ಗದಗ 13: ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಗದಗ ಜಿಲ್ಲೆ ನೆರೆ ಸಂತ್ರಸ್ತರ ಸೇರಿದಂತೆ ಅವರ ನೆರವಿಗಾಗಿ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಜಿ ಪಲ್ಲೇದ 1 ಲಕ್ಷ ರೂಗಳನ್ನು ಹಾಗೂ ವೈದ್ಯರಾದ ಡಾ. ಎನ್.ಬಿ. ಪಾಟೀಲ್ ಅವರು 50,001 ರೂಗಳನ್ನು ದೇಣಿಗೆ ನೀಡಿದ್ದಾರೆ. ಎಸ್.ಜಿ ಪಲ್ಲೇದ ಅವರಿಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಚೆಕ್ಗಳನ್ನು ನೀಡಿದರು.