ನೀಲಕಂಠೇಶ್ವರ ದೇವಸ್ಥಾನಕ್ಕೆ ರೂ.1.50 ಲಕ್ಷ ದೇಣಿಗೆ
ತಾಳಿಕೋಟಿ 08 : ಪಟ್ಟಣದ ಕುರುಹಿನಶೆಟ್ಟಿ ಸಮಾಜ ಬಾಂಧವರ ನೀಲಕಂಠೇಶ್ವರ ದೇವಸ್ಥಾನಕ್ಕೆ ಖ್ಯಾತ ಛಾಯಾಗ್ರಾಹಕರಾದ ರಾಜು ಅಲ್ಲಾಪೂರ ಇವರ ಅತ್ತೆಯವರಾದ ಶ್ರೀಮತಿ ಶಾಂತಮ್ಮ ದಾನಪ್ಪ ಬಳವಾಟ ಇವರು ರೂ.1.50 ಲಕ್ಷ ದೇಣಿಗೆ ನೀಡಿದರು. ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ತಿಕ ಇಳಿಸುವ ಕಾರ್ಯಕ್ರಮದಲ್ಲಿ ಈ ದೇಣಿಗೆ ಹಣವನ್ನು ದೇವಸ್ಥಾನ ಸಮಿತಿಗೆ ನೀಡಿದರು. ಅವರ ಈ ಆರ್ಥಿಕ ಸಹಕಾರಕ್ಕಾಗಿ ಸಮಾಜದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.