ಅಧಿಕಾರಿಗಳೇ ಕಣೆ್ತೆರೆದು ನೋಡುವಿರಾ ಈ ಸೌಲಭ್ಯ ವಂಚಿತ ಸರ್ಕಾರಿ ಪ್ರೌಢ ಶಾಲೆಯನ್ನು

ಶಶಿಧರ ಶಿರಸಂಗಿ

ಶಿರಹಟ್ಟಿ 26: ಈಗಿನ ಕಾಲದಲ್ಲಿ ಸಕರ್ಾರಿ ಶಾಲೆ ಎಂದಾಕ್ಷಣ ಕೆಲವು ವಿಧ್ಯಾಥರ್ಿಗಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಆದರೆ ಇಲ್ಲೊಂದು ಸಕರ್ಾರಿ ಪ್ರೌಢ ಶಾಲೆಯಿದೆ, ಇದು ಖಾಸಗಿ ಶಾಲೆಗಳನ್ನು ಮೀರಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಮಕ್ಕಳ ಭವಿಷ್ಯ ನಿಮರ್ಾಣ ಮಾಡಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದ ಇಲ್ಲಿಯ ಮಕ್ಕಳ ಸಂಖ್ಯೆಯು ವರ್ಷದಿಂದಾ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತದೆ. 

ಆ ಶಾಲೆ ಯಾವುದು ಅಂತೀರಾ? ಇದುವೆ ಶಿರಹಟ್ಟಿ ಪಟ್ಟಣದಲ್ಲಿರು ಮೇಗೇರಿ ಓಣಿಯಲ್ಲಿರುವ ಸಿಸಿ ನೂರಶೆಟ್ಟರ ಸಕರ್ಾರಿ ಪ್ರೌಢ ಶಾಲೆ. ಈ ಶಾಲೆಯಲ್ಲಿ ತಮ್ಮ ಮಕ್ಕಳ ಪ್ರವೇಶಕ್ಕಾಗಿ ನಾನಾ ಗ್ರಾಮಗಳಿಂದ ಪಾಲಕರು ದೌಡಾಯಿಸುತ್ತಿದ್ದಾರೆ. 

ಮಾದರಿ ಪ್ರೌಢ ಶಾಲೆ ಎಂಬ ಹೆಗ್ಗಳಿಕೆ: 2006 ರಿಂದ ಪ್ರಾರಂಭವಾಗಿರುವ ಈ ಪ್ರೌಢ ಶಾಲೆ ಪ್ರಾರಂಭದಿಂದಲೇ ತರಗತಿಗೆ ಅನುಗುಣವಾಗಿ ಇರಬೇಕಾದ ಮಕ್ಕಳ ಸಂಖ್ಯೆಗಿಂತ ಅಧಿಕ ಮಕ್ಕಳ ಪ್ರವೇಶಾತಿಯನ್ನು ಹೊಂದುತ್ತಾ ಬಂದಿದ್ದು, ಸಧ್ಯದ ಮಕ್ಕಳ ಸಂಖ್ಯೆಯು ಸುಮಾರು 8 ನೇ ತರಗತಿಯಲ್ಲಿ 167, 9 ನೇ ತರಗತಿಯಲ್ಲಿ 145 ಹಾಗೂ 10 ನೇ ತರಗತಿಯಲ್ಲಿ 105 ಇದ್ದು ಒಟ್ಟಾಗಿ ಅಂದ್ರೆ ಸುಮಾರು 417ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಪಡೆದ ಪ್ರೌಢ ಶಾಲೆ ಇದಾಗಿದೆ.

ಅತ್ಯಂತ ಕಡಿಮೆ ರಜೆ ಪಡೆಯುವ ಮಕ್ಕಳ ಸ್ನೇಹಿ ಬೋಧಕ ಸಿಬ್ಬಂದಿ ಮುಖ್ಯ ಗುರುಗಳು ಸಹ ಶಿಕ್ಷಕರೊಂದಿಗೆ ಹಾಗೂ ಶಾಲಾ ಆಡಳಿತ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಗುಣಮಟ್ಟದ ಶಿಕ್ಷಣ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಉತ್ತಮ ಭವಿಷ್ಯತ್ತಿಗಾಗಿ ಶ್ರಮಿಸುವ ಇಲ್ಲಿನ ಶಿಕ್ಷಕ ವರ್ಗದವರು ತಮಗೆ ಇರಬೇಕಾದ ರಜೆಗಳನ್ನೂ ಉಪಯೋಗಿಸದೇ ಸೇವೆ ಸಲ್ಲಿಸುತ್ತಿರುವುದು ಶಿಕ್ಷಕರ ಹಾಗೂ ಮಕ್ಕಳ ನಡುವಿನ ಸಂಭಂಧದ ಕೊಂಡಿಯಾಗಿದೆ. ಸಕರ್ಾರಿ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಾಗಬೇಕೆಂದರೆ ಸದು ಸುಮ್ಮನೇ ಅಲ್ಲ. ಖಾಸಗೀ ಶಾಲೆಗಳಿಗೆ ಪಾಲಕರು ಲಕ್ಷಾಂತರ ಹಣವನ್ನು ಖಚರ್ು ಮಾಡಿ ಮಕ್ಕಳನ್ನು ಗುಣಮಟ್ಟದ ಶಿಕ್ಷಣಕ್ಕಾಗಿ ದಾಖಲಿಸುತ್ತಾರೆ ಆದರೂ ಪಾಲಕರ ಇಚ್ಚೆಯನುಸಾರವಾಗಿ ಮಕ್ಕಳು ಗುರಿ ಮುಟ್ಟುವದಕ್ಕಾಗಲ್ಲ. ಅಂತಹ ಪರಿಸ್ಥಿತಿಯಲ್ಲಿ ಖಾಸಗೀ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳನ್ನು ಪಾಲಕರು ಖಾಸಗಿ ಶಾಲೆಗಳಿಂದ ಈ ಸಿಸಿ ನೂರಶೆಟ್ಟರ ಸಕರ್ಾರಿ ಪ್ರೌಢ ಶಾಲೆಗೆ ವಗರ್ಾವಣೆಗೊಂಡು ಈ ಪ್ರೌಢ ಶಾಲೆಗೆ ಉಚಿತ ಪ್ರವೇಶ ಮಾಡಿಸುತ್ತಿದ್ದಾರೆಂದರೆ ಅದಕ್ಕೆ ಕಾರಣ ಇಲ್ಲಿನ ಶಿಕ್ಷಕ ವರ್ಗವೇ ಕಾರಣ. ಏಕೆಂದರೆ ಈ ಪ್ರೌಢ ಶಾಲೆ ಪ್ರತೀ ವರ್ಷ 100ಕ್ಕೆ 90ಕ್ಕೂ ಹೆಚ್ಚು ಫಲಿತಾಂಶವನ್ನು ಪಡೆಯುತ್ತಾ ಬಂದಿದ್ದು ನೋಡಿದರೆ ಇಲ್ಲಿನ ಶಿಕ್ಷಕರ ಗುಣಮಟ್ಟದ ಶಿಕ್ಷಣವೇ ಕಾರಣವಾಗಿದೆ. ಪ್ರತಿಯೊಂದು ಶಿಕ್ಷಕ ಸಿಬ್ಬಂದಿ ಮಕ್ಕಳ ಮನೋಭಾವನೆಗೆ ಅನುಸಾರವಾಗಿ ಅವರ ಮನಸ್ಸಿನಾಳದಲ್ಲಿ ಬೆರೆತು ಶಿಕ್ಷಣ ನೀಡುವುದೇ ಇಲ್ಲಿನ ವಿಶೇಷವಾಗಿದೆ.

ಮಕ್ಕಳ ಅನುಪಾತಕ್ಕೆ ತಕ್ಕಂತೆ ಇಲ್ಲಿ ಶಿಕ್ಷಕರಿಲ್ಲ: ಒಂದು ತರಗತಿಗೆ ಅಬ್ಬಬ್ಬಾ ಅಂದರೆ 40 ಮಕ್ಕಳು ಇಲ್ಲವೇ 45 ಮಕ್ಕಳನ್ನು ಮಾತ್ರ ಪ್ರವೇಶ ತೆಗೆದುಕೊಳ್ಳಬಹುದು, ಆದರೆ ಇಲ್ಲಿ ಹಾಗಲ್ಲ ಒಂದೊಂದು ತರಗತಿ ಅಂದರೆ 8ನೇ ತರಗತಿಯಲ್ಲಿ 167, 9ನೇ ತರಗತಿಯಲ್ಲಿ 145 ಹಾಗೂ 10 ನೇ ತರಗತಿಯಲ್ಲಿ 105 ಮಕ್ಕಳು ಪ್ರವೇಶ ಪಡೆದಿದ್ದಾರೆ. ಒಂದೊಂದು ತರಗತಿಯನ್ನು ಕಣ್ಣಾಡಿಸಿ ನೋಡಿದರೆ ಇದೇನು ಶಾಲೆನಾ ಇಲ್ಲ ಕುರಿಗಳನ್ನು ತುಂಬಿದ ಕುರಿ ದಡ್ಡೀನಾ ಎನ್ನು ರೀತಿಯಲ್ಲಿ ಮಕ್ಕಳು ಒಂದೊಂದು ಡೆಸ್ಕಿಗೊಂದರಂತೆ 4-5 ಮಕ್ಕಳು ಕುಳಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ.

ಕೊಠಡಿಗಳೂ ಇಲ್ಲ: ಈ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಅಂದರೆ 40 ಮಕ್ಕಳಿಗೊಬ್ಬ ಶಿಕ್ಷಕರಿರಬೇಕು, ಆದರೆ ಇಲ್ಲಿ 145 ಮಕ್ಕಳಿಗೆ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ ಒಟ್ಟು 10 ರಿಂದ 12 ಶಿಕ್ಷಕ ವರ್ಗದ ಅವಶ್ಯಕತೆ ಇರುವ ಈ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಸಿಬ್ಬಂದಿ ಕೇವಲ 6 ಜನ ಶಿಕ್ಷಕರು ಮಾತ್ರ. ಹಾಗಿದ್ದರೆ ಇಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರ ಪರಿಸ್ಥಿತಿ ಹೇಗಿರಬಹುದು ಅಂತಾ ಸ್ವಲ್ಪ ವಿಚಾರ ಮಾಡುವ ಸಂಗತಿ. ಮಕ್ಕಳ ಅನುಪಾತಕ್ಕೆ ತಕ್ಕಂತೆ ಈ ಶಾಲೆಗೆ ಸುಮಾರು 10 ಕೊಠಡಿಗಳ ಅವಶ್ಯಕತೆಯುದ್ದು, ಈಗಿನ ಕೊಠಡಿಗಳ ಸಂಖ್ಯೆಯೂ ಕೇವಲ 05 ಮಾತ್ರ. ಶಾಲೆಯಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಮಾಡಲು ಒಂದು ದೊಡ್ಡದಾದ ಕಾರ್ಯಕ್ರಮ ಗ್ಯಾಲರಿ ಕೊಠಡಿಯಿಲ್ಲ. ಮಕ್ಕಳು ಬಿರು ಬಿಸಿಲಿನಲ್ಲಿಯೇ ಕುಳಿತು ಕಾರ್ಯಕ್ರಮಗಳನ್ನು ಮಾಡಬೇಕಾದ ಪರಿಸ್ಥಿತಿ ಇಲ್ಲಿನ ಮಕ್ಕಳಿಗಿದೆ.

ಇಕ್ಕಟ್ಟಾದ ಪ್ರವೇಶ ದ್ವಾರ: ಈ ಶಾಲೆಯ ಮಕ್ಕಳು ಶಾಲೆಗೆ ಒಳಗೆ ಪ್ರವೇಶಿಸಬೇಕೆಂದರೆ ಸಾಲಾಗಿ ಬರುವುದು ಹಾಗೂ ಸಾಲಾಗಿ ಮನೆಗೆ ತೆರಳುವ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಶಾಲೆಯ ಒಳಗೆ ವಾಹನಗಳ ಮೂಲಕ  ಏನಾದರೂ ಪರಿಕರಗಳನ್ನು ಸಾಗಿಸಬೇಕೆಂದರೆ ಶಾಲೆಯ ಹೊರಗಿನ ದೂರದ ರಸ್ತೆಯಲ್ಲಿಯೇ ನಿಲ್ಲಿಸಿ ಅಲ್ಲಿಂದ ಹೊರುವ ಸ್ಥಿತಿ ನಿಮರ್ಾಣವಾಗಿದೆ. 

ಕಂಪೌಂಡ್ ಇಲ್ಲದೇ ಭಯದಲ್ಲಿ ಕಲಿಯುತ್ತಿರುವ ಮಕ್ಕಳು: ಈ ಪ್ರೌಢ ಶಾಲೆ ಸುಮಾರು 4 ಎಕರೆ ಪ್ರದೇಶದಲ್ಲಿದ್ದು ಪಶ್ಚಿಮ ಹಾಗೂ ಪೂರ್ವಕ್ಕೆ ಮಾತ್ರ ಕಂಪೌಂಡ್ ಗೋಡೆ ಹೊಂದಿದ್ದು, ಉತ್ತರಕ್ಕೆ ಕಂಪೌಂಡ್ ಗೋಡೆಯ ಅವಶ್ಯಕತೆಯಿದ್ದು ಈ ತೆರೆದ ಪ್ರದೇಶ ಸಾಕಷ್ಟು ಮುಳ್ಳು ಕಂಟೆಗಳನ್ನು ಹೊಂದಿದ್ದರಿಂದ ಇಲ್ಲಿನ ಮಕ್ಕಳು ಸುರಕ್ಷತೆಯಿಲ್ಲದೇ ಪಾಠ ಕಲಿಯಬೇಕಿದೆ.  

ಇಷ್ಟೆಲ್ಲಾ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಪ್ರೌಢ ಶಾಲೆಗೆ ಯಾವಾಗ ದೊರಕುವುದು ಇವೆಲ್ಲ ಸೌಕರ್ಯಗಳು? ಯಾವಾಗ ಪ್ರಾರಂಭವಾಗುವುದು ಹೆಚ್ಚಿನ ಕೊಠಡಿಗಳ ಕಾಮಗಾರಿ, ಯಾವಾಗ ದೊರಕುವುದು ಹೆಚ್ಚುವರಿ ಶಿಕ್ಷಕರ ಮಂಜೂರಾತಿ, ಯಾವಾಗ ನಿಲ್ಲುವುದು ಕಂಪೌಂಡ ಗೋಡೆ? ಬರಿ ಯಾವಾಗ ಸಿಗುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದ್ದು, ಇದಕ್ಕೆ ಸಂಭಂದಿಸಿದ ಅಧಿಕಾರಿಗಳು ಈಗಲಾದರೂ ಕಣ್ತೆರೆದು ನೋಡುವರಾ ಈ ನಮ್ಮ ಪ್ರೌಢ ಶಾಲೆಯನ್ನು? ಎನ್ನು ಪ್ರಶ್ನೆ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಕಾಡುತ್ತಿದೆ.