ದಾಯ ತೆರಿಗೆ ಬಗ್ಗೆ ನೌಕರರಲ್ಲಿ ಯಾವುದೇ ಭಯಬೇಡ : ಜಿಲ್ಲಾಧಿಕಾರಿ ಎಂ. ಕನಗವಲ್ಲಿ


ಕೊಪ್ಪಳ 20: ಎಲ್ಲಾ ಸಕರ್ಾರಿ ನೌಕರರು ಕಡ್ಡಾಯವಾಗಿ ಆದಾಯ ತೆರಿಗೆ ರಿಟರ್ನ ಸಲ್ಲಿಸಬೇಕಾಗಿದ್ದು, ಆದಾಯ ತೆರಿಗೆಯಿಂದಾಗಿ ನೌಕರರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.  

ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ಕೊಪ್ಪಳ ಹಾಗೂ ಆದಾಯ ತೆರಿಗೆ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಎಲ್ಲಾ ರಾಜ್ಯ ಸಕರ್ಾರಿ ನೌಕರರಿಗೆ ಆದಾಯ ತೆರಿಗೆ ಕುರಿತಂತೆ ಜಿಲ್ಲಾಢಳಿತ ಭವನದ ಅಡಿಟೋರಿಯಂ ಹಾಲ್ನಲ್ಲಿ ಶುಕ್ರವಾರದಂದು ಆಯೋಜಿಸಲಾದ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ದೇಶದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೂ ಹಣಕಾಸಿನ ಅಗತ್ಯವಿರುತ್ತದೆ.  ಇದನ್ನು ಭರಿಸಲು ತೆರಿಗೆ ಹಣವೇ ಪ್ರಮುಖ ಮೂಲವಾಗಿರುತ್ತದೆ.  ಹೀಗಾಗಿ ದೇಶದ ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಯೊಬ್ಬರದೂ ಪಾತ್ರವಿರುತ್ತದೆ.  ಆದಾಯ ತೆರಿಗೆ ಇಲಾಖೆ ಎಂದಾಕ್ಷಣ ಯಾರೂ ಭಯಪಡುವ ಅಗತ್ಯವಿಲ್ಲ.  ಆದಾಯ ತೆರಿಗೆ ಇಲಾಖೆಯ ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಕಾರ್ಯಗಾರವು ಉಪಯುಕ್ತವಾಗಿದೆ.  2017-18ನೇ ಸಾಲಿನ ಎಲ್ಲಾ ಸಕರ್ಾರಿ ನೌಕರರು ಕಡ್ಡಾಯವಾಗಿ ಆದಾಯ ತೆರಿಗೆ ರಿಟರ್ನ ಸಲ್ಲಿಸಬೇಕಾಗಿದ್ದು, ಜು. 31 ರೊಳಗೆ ರಿಟರ್ನ ಸಲ್ಲಿಸದಿದ್ದರೆ ದಂಡವನ್ನು ಪಾವತಿಸಬೇಕಾಗಿರುತ್ತದೆ.  ಆದ್ದರಿಂದ ತೆರಿಗೆಯ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸಕರ್ಾರಿ ನೌಕರರ ಸಂಘ ಕೊಪ್ಪಳ ಹಾಗೂ ಆದಾಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಲಾದ ಮಾಹಿತಿ ಕಾರ್ಯಗಾರದಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಎಲ್ಲಾ ಸಕರ್ಾರಿ ನೌಕರರು ತಮ್ಮ ಆದಾಯ ತೆರಿಗೆಯ ರಿಟರ್ನನ್ನು ಪಾವತಿಸಿ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.  

ಆದಾಯ ತೆರಿಗೆ ಇಲಾಖೆ ಅಧಿಕಾರಿ ಕೆ. ಲೋಕೇಶ್ ಅವರು ಮಾತನಾಡಿ, ಆದಾಯ ತೆರಿಗೆ ಪಾವತಿ ಮಾಡುವುದನ್ನು ಯಾರೂ ಕೂಡ ಹೊರೆ ಎಂದು ಭಾವಿಸಬಾರದು.  ಆದಾಯ ತೆರಿಗೆ ಪಾವತಿಯಿಂದ, ದೇಶದ ಅಭಿವೃದ್ಧಿಯಲ್ಲಿ ತಮ್ಮದೂ ಒಂದು ಕೊಡುಗೆ ಇದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.  ಇಲಾಖೆಯು ದೇಶದ ಅಭಿವೃದ್ಧಿ ದೃಷ್ಟಿಯಿಂದ ತೆರಿಗೆ ಸಂಗ್ರಹ ಸೋರಿಕೆಯನ್ನು ತಡೆಗಟ್ಟಲು ನಿಯಮಗಳನ್ನು ಜಾರಿಗೊಳಿಸುತ್ತಿದೆ.  ಎಲ್ಲಾ ಸಕರ್ಾರಿ ನೌಕರರು ಕಡ್ಡಾಯವಾಗಿ ಆದಾಯ ತೆರಿಗೆ ರಿಟರ್ನ ಸಲ್ಲಿಸಬೇಕು.  ಸಕರ್ಾರಿ ನೌಕರರ ಆದಾಯವು 2.5 ಲಕ್ಷ ವಿದ್ದರೆ ಯಾವುದೇ ತೆರಿಗೆ ಇಲ್ಲ.  ಆದಾಯವು 2.5 ಲಕ್ಷಕ್ಕಿಂತ ಹೆಚ್ಚು ರೂ. 5 ಲಕ್ಷಗಳ ವರೆಗೆ ಇದ್ದರೆ ಅಂತಹ ನೌಕರರು ಶೇ.5% ರಷ್ಟು ತೆರಿಗೆ ಪಾವತಿಸಬೇಕು.  5 ರಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ.20% ರಷ್ಟು ಹಾಗೂ 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಸಕರ್ಾರಿ ನೌಕರರು ಶೇ.30% ರಷ್ಟು ತೆರಿಗೆಯನ್ನು ಪಾವತಿಸಬೇಕಾಗಿದ್ದು, ಎಲ್ಲಾ ಸಕರ್ಾರಿ ನೌಕರರು ಜು. 31 ರೊಳಗಾಗಿ ಆದಾಯ ತೆರಿಗೆ ರಿಟರ್ನಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.  ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಿದ್ದಲ್ಲಿ, ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಭೇಟಿ ನೀಡಬಹು ಎಂದು ಮಾಹಿತಿ ನೀಡಿದರು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಅವರು ವಹಿಸಿದ್ದರು.  ಆದಾಯ ತೆರಿಗೆ ಇಲಾಖೆಯ ಎಸ್.ಹೆಚ್. ಗುರುನಾಥ, ಪಾಂಡುರಂಗ, ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವಪ್ಪ ಜೋಗಿ, ಎಸ್.ಎಸ್. ನಾಯಕ, ಶರಣೆಗೌಡರ, ವೆಂಕಟೇಶಗೌಡ, ಪ್ರಭು ಕಿಡದಾಳ, ಭೀರಪ್ಪ ಅಂಡಗಿ ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮೆಹಬೂಬ್ ಮಠದ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.  ನಂತರ ಜಿಲ್ಲೆಯ ಎಲ್ಲಾ ಸಕರ್ಾರಿ ನೌಕರರಿಗೆ ಆದಾಯ ತೆರಿಗೆ ಮಾಹಿತಿ ಕಾರ್ಯಗಾರವು ಜರುಗಿತು.  ಸುಮಾರು 700 ಕ್ಕೂ ಅಧಿಕ ಸಂಖ್ಯೆಯಲ್ಲಿ ಸಕರ್ಾರಿ ನೌಕರರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.      

ಸ್ವಚ್ಛತೆ ಮತ್ತು ಆರೋಗ್ಯ ಕುರಿತಂತೆ ಕೀನ್ಯಾ ದೇಶದಲ್ಲಿ ಇತ್ತಿಚೇಗೆ ಜರುಗಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಯಶಸ್ವಿ ಶೌಚಾಲಯ ನಿಮರ್ಾಣ ಹಾಗೂ ಸ್ವಚ್ಛತೆಯ ಕ್ರಾಂತಿ ಕುರಿತು ವಿಶೇಷ ಉಪನ್ಯಾಸ ನೀಡಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಭಾರತ ದೇಶದ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಕಾರ್ಯಗಾರದಲ್ಲಿ ಸನ್ಮಾನಿಸಲಾಯಿತು.