ಕಾರವಾರ ಜಿಲ್ಲೆ ವಿಭಜನೆ ಅರ್ಥಹೀನ : ಮಾಜಿ ಶಾಸಕ ಸುನೀಲ್ ಹೆಗಡೆ ಅಭಿಮತ
ಕಾರವಾರ 29: ಕಾರವಾರ ಜಿಲ್ಲೆ ವಿಭಜನೆ ಅರ್ಥಹೀನ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಅಭಿಪ್ರಾಯಪಟ್ಟರು.ಕಾರವಾರದ ಪತ್ರಿಕಾ ಭವನದಲ್ಲಿ ಬುಧುವಾರ ಸುದ್ದಿಗಾರರ ಜೊತೆ ಮಾತನಾಡಿದರು.ಶಿರಸಿ ಕಡೆ ಬಿಜೆಪಿ ಪದಾಧಿಕಾರಿ ಜಿಲ್ಲಾ ವಿಭಜನೆಗೆ ಮಾಡುತ್ತಿರುವ ಪ್ರಯತ್ನ ಪಕ್ಷದ ಅಜೆಂಡಾ ಅಲ್ಲ ಎಂದರು. ಬೆಳಗಾವಿ ಜಿಲ್ಲೆ ಉತ್ತರ ಕನ್ನಡ ಕ್ಕಿಂತ ದೊಡ್ಡದು. ಅಲ್ಲಿ ಜಿಲ್ಲೆ ವಿಭಜನೆ ಆಗಿಲ್ಲ. ಆದರೆ ಅಭಿವೃದ್ಧಿಯಾಗಿದೆ.
ನಮಗೆ ಬೇಕಿರುವುದು ಅಭಿವೃದ್ಧಿ, ವಿಭಜನೆ ಅಲ್ಲ ಎಂದರು. ಶಿರಸಿ ಜಿಲ್ಲೆ ಮಾಡಿದರೆ ನಮಗೆ ಏನು ಉಪಯೋಗ ಇಲ್ಲ. ನಮಗೆ ಕಾರವಾರ ಜಿಲ್ಲೆ ಅನುಕೂಲ ಎಂದರು. ಹಾಗೆ ವಿಭಜನೆ ಮಾಡುವುದಾದರೆ, ಮೂರು ಜಿಲ್ಲೆಯಾಗಿ ಉತ್ತರ ಕನ್ನಡ ವಿಭಜನೆ ಆಗಲಿ. ಹಳಿಯಾಳವನ್ನು ಸಹ ಜಿಲ್ಲೆ ಮಾಡಲಿ ಎಂದರು. ರಾಜಕಾರಣಿಗಳಿಗೆ 25 ವರ್ಷದ ಮುನ್ನೋಟ ಇರಬೇಕು. ಅದು ಹಿಂದಿನವರಿಗೂ ಇರಲಿಲ್ಲ. ಈಗಿನ ಉಸ್ತುವಾರಿ ಸಚಿವರಿಗೂ ಇಲ್ಲ. ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಯಾವ ತಾಲೂಕಿನ ಅವಶ್ಯಕತೆ ಏನು, ಸಮಸ್ಯೆ ಏನು ಎಂದು ತಿಳಿದು ಅಭಿವೃದ್ಧಿ ಮಾಡಬೇಕು ಎಂದರು. ಗೆದ್ದ ಮೇಲೆ ಪಕ್ಷ ಮರೆತು ಅಭಿವೃದ್ಧಿ ಮಾಡಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಅಭಿಪ್ರಾಯಪಟ್ಟರು. ರಾಜಕಾರಣಿ ಆಗುವವರಿಗೆ ಹಿನ್ನೆಲೆ ಮುಖ್ಯ. ಯಾವುದೋ ದಂಧೆಯಲ್ಲಿ ಇದ್ದವರು ರಾಜಕಾರಣಕ್ಕೆ ಬಂದರೆ, ಬೇಗ ಪ್ರಚಾರ ಪಡೆಯಲು ಮಾಡಬಾರದ್ದು ಮಾಡುತ್ತಾರೆ ಎಂದರು.