ಜಿಲ್ಲಾ. ಕ.ಸಾ.ಪ, ಕಾಯರ್ಾಲಯ ಉದ್ಘಾಟನೆ ಸಮ್ಮೇಳನದ ಯಶಸ್ವಿಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ: ದೇವರಡ್ಡಿ

ಲೋಕದರ್ಶನ ವರದಿ

ತಾಳಿಕೋಟೆ 14:ಐತಿಹಾಸಿಕ ಹಿನ್ನೇಲೆಯನ್ನು ಹೊಂದಿರುವ ತಾಳಿಕೋಟೆ ಪಟ್ಟಣದಲ್ಲಿ ಇದೇ ದಿ. 28, 29 ರಂದು ಎರಡು ದಿನಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಸಂಚಾಲಕ ಚಂದ್ರಶೇಖರ ದೇವರಡ್ಡಿ ನುಡಿದರು. 

ರವಿವಾರರಂದು ಸ್ಥಳೀಯ ಪೋಲೀಸ್ಠಾಣೆಯ ಹತ್ತಿರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ದ ಕಾಯರ್ಾಲಯವನ್ನು ಉದ್ಘಾಟಿಸಿ ಕನ್ನಢಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಿದ್ದ ಕನ್ನಡದ ಜ್ಞಾನಬಂಢಾರವನ್ನು ಇಡೀ ಜಿಲ್ಲೆಯಾದ್ಯಂತ ಹರಿಸುವ ಸೌಭಾಗ್ಯ ತಾಳಿಕೋಟೆ ಪಟ್ಟಣಕ್ಕೆ ಒದಗಿಬಂದಿದೆ ಐತಿಹಾಸಿಕ ಪಟ್ಟಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಇತಿಹಾಸ ಪುಟ ಸೇರಬೇಕಿದೆ ಈ ಹಿಂದೆ ತಾಳಿಕೋಟೆಯಲ್ಲಿ ನಡೆದ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಜಿಲ್ಲಾ ಮಟ್ಟದ ಸಂಭ್ರಮದಂತೆ ನಡೆದಿದೆ ಈ ಸಮ್ಮೇಳನವು ರಾಜ್ಯಮಟ್ಟದ ಸಮ್ಮೇಳನದಂತೆ ಬಿಂಬಿಸಲು ಎಲ್ಲರೂ ಸಂಘಟಿಕರಾಗಿ ಕೆಲಸ ಕಾರ್ಯದಲ್ಲಿ ತೊಡಗಬೇಕೆಂದರು.

ಅತಿಥಿ ಶಿಕ್ಷಕ ಎ.ಆರ್.ಡೋಣಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕನ್ನಡದ ಗಿರಿಮೆ ಹೆಚ್ಚಿಸಲು ಈ ಭಾಗದ ಜನರ ಪಾತ್ರ ಬಹುದೊಡ್ಡದಿದೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಶಿಕ್ಷಕರ ಬಳಗದಿಂದ ಎಲ್ಲರಿಂತಿಯಿಂದಲೂ ಸಹಾಯ ಸಹಕಾರ ನೀಡುವದರ ಜೊತಗೆ ಒಗ್ಗಟ್ಟಿನಿಂದ ಕನ್ನಡದ ತೇರನ್ನು ಎಳೆಯುತ್ತೇವೆಂದರು. ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವದು ಅತೀ ಸಂತೋಷದಾಯಕ ವಿಷಯವಾಗಿದೆ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಭವನ ಕಟ್ಟಲು ಈಗಾಗಲೇ ಪರಿಷತ್ಗೆ ಜಾಗೆ ಲಭ್ಯವಿದೆ ಮುಂದಿನ ದಿನಗಳಲ್ಲಿ ಕಟ್ಟಡವನ್ನು ಕಟ್ಟಲು ಸಕರ್ಾರದ ಸಹಾಯದ ಜೊತೆಗೆ ಎಲ್ಲರೂ ಕೈಜೋಡಿಸಲು ಮುಂದಾಗುತ್ತೇವೆಂದರು.

ಕಸಾಪ ನಿಕಟಪೂರ್ವ ವಲಯ ಅಧ್ಯಕ್ಷರಾದ ಶಾಂತಾಬಾಯಿ ನೂಲಕರ ಅವರು ಮಾತನಾಡಿ 3 ವರ್ಷಗಳ ಹಿಂದೆ ಪಟ್ಟಣದಲ್ಲಿ ನಡೆದ ತಾಲೂಕಾ ಮಟ್ಟದ ಸಮ್ಮೇಳನದ ಯಶಸ್ವಿಗೆ ಮಾಧ್ಯಮದ ಪ್ರಚಾರ ಸ್ಪುಷ್ಠಿ ನೀಡಿತು ಅದರಂತೆ ಈ ಭಾರಿ ಜರುಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಮಾಧ್ಯಮದ ಸ್ನೇಹಿತರು ಸಹಕರಿಸಬೇಕೆಂದರು. ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ವಲಯ ಅಧ್ಯಕ್ಷೆ ಸುಮಂಗಲಾ ಕೊಳೂರ ಮಾತನಾಡಿ ಸಮ್ಮೇಳನದ ಯಶಸ್ವಿ ಕುರಿತಂತೆ ಒಂದೊಂದು ತಂಡಕ್ಕೆ ಒಂದೊಂದು ಕಾರ್ಯಕೆಲಸಗಳನ್ನು ನೀಡಲು ಕೆಲವು ಸಮಿತಿಗಳನ್ನು ರಚಿಸಲಾಗಿದೆ ಇನ್ನೂ ಕೆಲವು ಸಮಿತಿಗಳನ್ನು ಎಲ್ಲರ ಸಲಹೆ ಮೇರೆಗೆ ರಚಿಸಲಾಗುವದು ಯುವಕರ ತಂಡಗಳಿಗೆ ಯಾವ ಕೇಲಸ ನೀಡಿದರೆ ಸೂಕ್ತವಾಗುತ್ತದೆ ಎಂದು ಚಚರ್ಿಸಲಾಗುವದು ಯುವಕರು ಹಿರಿಯರು ಒಮ್ಮತದಿಂದ ಸಂಕೋಚಿತ ಭಾವನೆ ಇಲ್ಲದೇ ಸಲಹೆ ಸೂಚನೆಗಳನ್ನು ನೀಡಬೇಕು ಶ್ರೀಕಾಂತ ಪತ್ತಾರ ಅವರು ಸಂಪನ್ಮೂಲ ಕೃಡಿಕರಣ, ಆಗು ಹೋಗುವ ಖಚರ್ುವೆಚ್ಚಗಳ ಬಗ್ಗೆ ವಿವರಿಸಿದರು. 

ಈ ಸಮಯದಲ್ಲಿ ಕಸಾಪ ಕಾಯರ್ಾಧ್ಯಕ್ಷ ದತ್ತು ಹೆಬಸೂರ, ಕೋಶಾಧ್ಯಕ್ಷ ಪ್ರಭುಗೌಡ ಮದರಕಲ್ಲ, ಅಶೋಕ ಬಳಗಾನೂರ, ಕಾಶಿನಾಥ ಮುರಾಳ, ಎಂ.ಎಸ್.ಸರಶೇಟ್ಟಿ, ಮಹಾದೇವಿ ಹಿಪ್ಪರಗಿ, ಸಂಗೀತಾ ಬಳಗಾನೂರ, ಸುನಂದಾ ನೀರಲಗಿ, ಮಹಾನಂದಾ ತಿಳಗೂಳ, ಲತಾ ಪ್ರಥಮಶೆಟ್ಟಿ, ದೀನಕರ ಜೋಶಿ, ಚನಮಲ್ಲು ಕತ್ತಿ, ತಮ್ಮಣ್ಣ ದೇಶಪಾಂಡೆ, ಶೇಷಾಚಲ ಹವಾಲ್ದಾರ, ಚನಬಸ್ಸು ದೇಸಾಯಿ, ಮೊದಲಾದವರು ಉಪಸ್ಥಿತರಿದ್ದರು. ಅಶೋಕ ಹೊಸಗೌಡರ ಸ್ವಾಗತಿಸಿದರು. ಪ್ರೋ.ಅನೀಲಕುಮಾರ ಆಲ್ಯಾಳ ನಿರೂಪಿಸಿದರು. ಶಿಕ್ಷಕಿ ರೇಣುಕಾ ಕಲ್ಬುಗರ್ಿ ವಂದಿಸಿದರು