ಗ್ರಾಮದ ಕರ ವಸೂಲಿಕಾರರಿಗೆ ಸನ್ಮಾನದ ಜೊತೆಗೆ ಪ್ರಶಂಸಣಾ ಪತ್ರ ವಿತರಣೆ

Distribution of letter of appreciation along with honor to village debt collectors

ಗ್ರಾಮದ ಕರ ವಸೂಲಿಕಾರರಿಗೆ ಸನ್ಮಾನದ ಜೊತೆಗೆ ಪ್ರಶಂಸಣಾ ಪತ್ರ ವಿತರಣೆ

 ರೋಣ 18  : ತಾಲೂಕಿನಾದ್ಯಂತ ಡಿ.1 ರಿಂದ ಡಿ.30 ರ ವರಗೆ ಕರ ವಸೂಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಕೇವಲ 15 ದಿನಗಳಲ್ಲಿ ತಾಲೂಕಿನ 22 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 35,28,492 ಕ್ಕೂ ಅಧಿಕ ತೆರಿಗೆ ಸಂಗ್ರಹಣೆ ಮಾಡಲಾಗಿದ್ದು, ರೋಣ ತಾಲೂಕ ಪಂಚಾಯತ ತೆರಿಗೆ ವಸೂಲಿ ಅಭಿಯಾನದಲ್ಲಿ ಮಹತ್ವದ ಹೆಜ್ಜೆ ಇಟ್ಟು ಅಧಿಕಾರಿ ವರ್ಗಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ ತಾಲೂಕಿನಲ್ಲಿ ತೆರಿಗೆ ವಸೂಲಿ ಪ್ರಮಾಣ ಕಡಿಮೆ ಇರುವದನ್ನು ಗುರುತಿಸಿ ಎಲ್ಲಾ ಗ್ರಾಮ ಪಂಚಾಯತಿಗೂ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಬಳಿಕ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕರ ವಸೂಲಿಕಾರರಿಗೆ ತಾಲೂಕಿನಲ್ಲಿ ಒಂದು ತಿಂಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದರು. 22 ಗ್ರಾಮ ಪಂಚಾಯತಿ ಅಲ್ಲಿ 15 ದಿನದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡಿದ 5 ಜನ ಕರ ವಸೂಲಿಗಾರರಿಗೆ, 1ಲಕ್ಷಕ್ಕೂ ಹೆಚ್ಚು ಪ್ರಗತಿ ಸಾಧಿಸಿದ ಕರ ವಸೂಲಿಕಗಾರರಿಗೆ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ನಡೆಸಿದ ವಿಶೇಷ ಅಭಿಯಾನದಲ್ಲಿ ಹೆಚ್ಚು ಪ್ರಗತಿ ಮಾಡಿದ 5 ಜನ ಕರ ವಸೂಲಿಕಗಾರರಿಗೆ ತಾಲೂಕ ಪಂಚಾಯತ ಸಭಾಂಗಣದಲ್ಲಿ ಸನ್ಮಾನದ ಜೊತೆಗೆ ಪ್ರಶಂಸಣಾ ಪತ್ರ ವಿತರಣೆ ಮಾಡಲಾಯಿತು. ಈ ಅಭಿಯಾನ ದಲ್ಲಿ ಮೆಣಸಗಿ,ಹೊಸಳ್ಳಿ, ಮಲ್ಲಾಪೂರ,ಕುರಹಟ್ಟಿಗ್ರಾಮ ಪಂಚಾಯತಿಗಳು ಶೇಅ100 ಪ್ರಗತಿ ಸಾಧಿಸಿ ವಿಶೇಷ ಗಮನ ಸೆಳೆದಿವೆ.ತಾಲೂಕ ಪಂಚಾಯತ ಸಭಾಂಗಣ ದಲ್ಲಿ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ದಲ್ಲಿ ಸಹಾಯಕ ನಿರ್ಧೆಶಕರಾದ (ಪಂ ರಾ) ರೀಯಾಜ್ ಖತೀಬ್, ತಾಲೂಕ ಪಂಚಾಯತ ವ್ಯವಸ್ಥಾಪಕರಾದ, ದೇವರಾಜ್‌. ಸಜ್ಜನಶೆಟ್ಟರ, ಸಹಾಯಕ ಲೆಕ್ಕಾಧಿಕಾರಿ, ಅನೀಲಕುಮಾರ. ಬೇವಿನಮರದ ಸೇರಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಓ, ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು ಹಾಜರಿದ್ದರು... *ತೆರಿಗೆ ವಸೂಲಿ ಅಭಿಯಾನ:* ಒಂದು ತಿಂಗಳು ಕಾಲ ತಾಲೂಕಿನಲ್ಲಿ ವಿಶೇಷ ಕರ ವಸೂಲಿ ಅಭಿಯಾನದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಪಿಡಿಒ, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಒ, ವಾಟರ್ ಮ್ಯಾನ್ ಗಳು, ಜಿಕೆಎಂ, ಸೇರಿದಂತೆ ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಂಡು ತೆರಿಗೆ ಸಂಗ್ರಹಣೆ ಮಾಡಲಾಯಿತು.. *ಕರ ವಸೂಲಿ ಅಭಿಯಾನದ ವಿಶೇಷತೆ:* 22 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಟ 200 ಆಸ್ತಿ ಮಾಲೀಕರನ್ನು ಗುರುತಿಸಿ ಅವರಿಗೆ ನೋಟೀಸ್ ನೀಡಿ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ನೋಟೀಸು ಜಾರಿ ಮಾಡಿ ಸಂಪೂರ್ಣ ಮೊತ್ತ ಪಾವತಿಸಿಕೊಳ್ಳುವುದು. ತೆರಿಗೆ ಪಾವತಿ ಬಾಕಿ ಹೊಂದಿರುವ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರರಿಗೆ ನೋಟೀಸು ನೀಡಿ ಶೇ.100 ರಷ್ಟು ಬಾಕಿ ವಸೂಲಿ ಮಾಡಲು ಸೂಚಿಸಲಾಗಿತ್ತು. ಅದರಂತೆ ಕೇವಲ 15 ದಿನದಲ್ಲಿ ಕರ ಇಷ್ಟು ವಸೂಲಿ ಮಾಡಲಾಗಿದೆ. *ಕ್ರ.ಸಂ. ಗ್ರಾ.ಪಂ. ಹೆಸರು 15 ದಿನದ ತೆರಿಗೆ ಸಂಗ್ರಹಣೆ (ರೂ.ಗಳಲ್ಲಿ)* 1 ಹೊಳೆಆಲೂರ - 6961882 ಕುರಹಟ್ಟಿ - 2733563 ಕೊತಬಾಳ - 2468784 ಮೆಣಸಗಿ - 1966225 ಮಲ್ಲಾಪೂರ - 1851046 ಹಿರೇಹಾಳ 1775117 ಅಸೂಟಿ - 1672538 ಜಕ್ಕಲಿ - 1636279 ಚಿಕ್ಕಮಣ್ಣೂರ - 14464410 ಹೊಳೆಮಣ್ಣೂರ - 14348011 ಅಬ್ಬಿಗೇರಿ - 13724012 ಹುಲ್ಲೂರ - 12932013 ಕುರಡಗಿ - 12576814 ಬೆಳವಣಕಿ - 12555815 ಯಾವಗಲ್ - 12485916 ಹುನಗುಂಡಿ - 11067417 ಸವಡಿ - 10031618 ಡ.ಸ.ಹಡಗಲಿ - 7087719 ಅಮರಗೋಳ - 7073720 ಹೊಸಳ್ಳಿ - 5384121 ಕೌಜಗೇರಿ - 5123422 ಮಾಡಲಗೇರಿ - 33405 *ಒಟ್ಟು 35,28,492 ರೂಗಳು* *ಕೊಟ್*  ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಒಂದು ತಿಂಗಳ ಕಾಲ ಕರ ವಸೂಲಿ ಅಭಿಯಾನ ಹಮ್ಮಿಕೊಳ್ಳಲು ಸೂಚನೆ ನೀಡಿದ್ದರು, ಅದರಂತೆ ಗ್ರಾಮದ  ಅಡಳಿತ ಮಂಡಳಿ ಜೊತೆಗೆ ಚರ್ಚಿಸಿ ತೆರಿಗೆ ವಸೂಲಿ ಮಾಡಲು ಕರ ವಸೂಲಿಕಾರರ ಜೊತೆಗೂಡಿ ನಾವು ಕೆಲಸ ಮಾಡಿದ್ದೇವೆ, ಅದರಂತೆ ಕರ ವಸೂಲಿಕಾರರು ಉತ್ತಮ ಕೆಲಸ ಮಾಡಿದ ಕಾರಣ ನಮ್ಮ ಗ್ರಾಮ ಪಂಚಾಯತಿ ಮೊದಲ ಸ್ಥಾನ ಪಡೆದಿದ್ದು ಖುಷಿಯ ವಿಚಾರ *ಬಸವರಾಜ ಗಿರಿತಮ್ಮನ್ನವರ* , ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹೊಳೆ ಆಲೂರ *ಕೊಟ್* : ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಲಹೆ ಸೂಚನೆ ಮೇರೆಗೆ ನಾನು ಗ್ರಾಮ ಪಂಚಾಯತಿ ಅಲ್ಲಿ ತೆರಿಗೆ ವಸೂಲಿ ಮಾಡಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಿಬ್ಬಂದಿಗಳ ಜೊತೆಗೆ ಚರ್ಚಿಸಿ ತಿಂಗಳ ಕಾಲ ಅಭಿಯಾನ ಹಮ್ಮಿಕೊಂಡಿದ್ದೇವೆ, ಆದರೆ 15 ದಿನದಲ್ಲಿ ಇಷ್ಟು ತೆರಗೆ ಸಂಗ್ರಹ ವಾಗಿದ್ದು ಉತ್ತಮ ಬೆಳವಣಿಗೆ ಮುಂದಿನ 15 ದಿನಗಳಲ್ಲಿ ಇನ್ನು ಹೆಚ್ಚಿನ ತೆರಿಗೆ ವಸೂಲಿ ಮಾಡಲು ಸೂಚನೆ ನೀಡಿದ್ದೇವೆ.. *ಚಂದ್ರಶೇಖರ ಬಿ ಕಂದಕೂರ,*  ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ರೋಣ