ಗ್ರಾಮದ ಕರ ವಸೂಲಿಕಾರರಿಗೆ ಸನ್ಮಾನ, ಪ್ರಶಂಸಣಾ ಪತ್ರ ವಿತರಣೆ
ರೋಣ 20: ತಾಲೂಕಿನಾದ್ಯಂತ ಡಿ.1 ರಿಂದ ಡಿ.30 ರ ವರಗೆ ಕರ ವಸೂಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಕೇವಲ 15 ದಿನಗಳಲ್ಲಿ ತಾಲೂಕಿನ 22 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 35,28,492 ಕ್ಕೂ ಅಧಿಕ ತೆರಿಗೆ ಸಂಗ್ರಹಣೆ ಮಾಡಲಾಗಿದ್ದು, ರೋಣ ತಾಲೂಕ ಪಂಚಾಯತ ತೆರಿಗೆ ವಸೂಲಿ ಅಭಿಯಾನದಲ್ಲಿ ಮಹತ್ವದ ಹೆಜ್ಜೆ ಇಟ್ಟು ಅಧಿಕಾರಿ ವರ್ಗಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ತಾಲೂಕಿನಲ್ಲಿ ತೆರಿಗೆ ವಸೂಲಿ ಪ್ರಮಾಣ ಕಡಿಮೆ ಇರುವದನ್ನು ಗುರುತಿಸಿ ಎಲ್ಲಾ ಗ್ರಾಮ ಪಂಚಾಯತಿಗೂ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಬಳಿಕ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕರ ವಸೂಲಿಕಾರರಿಗೆ ತಾಲೂಕಿನಲ್ಲಿ ಒಂದು ತಿಂಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದರು. 22 ಗ್ರಾಮ ಪಂಚಾಯತಿಯಲ್ಲಿ 15 ದಿನದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡಿದ 5 ಜನ ಕರ ವಸೂಲಿಗಾರರಿಗೆ, 1 ಲಕ್ಷಕ್ಕೂ ಹೆಚ್ಚು ಪ್ರಗತಿ ಸಾಧಿಸಿದ ಕರ ವಸೂಲಿಗಾರರಿಗೆ ಹಾಗೂ ಜಿಲ್ಲಾ ಪಂಚಾಯತ ವತಿಯಿಂದ ನಡೆಸಿದ ವಿಶೇಷ ಅಭಿಯಾನದಲ್ಲಿ ಹೆಚ್ಚು ಪ್ರಗತಿ ಮಾಡಿದ 5 ಜನ ಕರ ವಸೂಲಿಕಗಾರರಿಗೆ ತಾಲೂಕ ಪಂಚಾಯತ ಸಭಾಂಗಣದಲ್ಲಿ ಸನ್ಮಾನದ ಜೊತೆಗೆ ಪ್ರಶಂಸಣಾ ಪತ್ರ ವಿತರಣೆ ಮಾಡಲಾಯಿತು. ಈ ಅಭಿಯಾನ ದಲ್ಲಿ ಮೆಣಸಗಿ,ಹೊಸಳ್ಳಿ, ಮಲ್ಲಾಪೂರ,ಕುರಹಟ್ಟಿಗ್ರಾಮ ಪಂಚಾಯತಿಗಳು ಶೇಅ100 ಪ್ರಗತಿ ಸಾಧಿಸಿ ವಿಶೇಷ ಗಮನ ಸೆಳೆದಿವೆ. ತಾಲೂಕ ಪಂಚಾಯತ ಸಭಾಂಗಣ ದಲ್ಲಿ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ದಲ್ಲಿ ಸಹಾಯಕ ನಿರ್ಧೆಶಕ (ಪಂ ರಾ) ರೀಯಾಜ್ ಖತೀಬ್, ತಾಲೂಕ ಪಂಚಾಯತ ವ್ಯವಸ್ಥಾಪಕ ದೇವರಾಜ್. ಸಜ್ಜನಶೆಟ್ಟರ, ಸಹಾಯಕ ಲೆಕ್ಕಾಧಿಕಾರಿ, ಅನೀಲಕುಮಾರ. ಬೇವಿನಮರದ ಸೇರಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಓ, ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು ಹಾಜರಿದ್ದರು. *ತೆರಿಗೆ ವಸೂಲಿ ಅಭಿಯಾನ:* ಒಂದು ತಿಂಗಳು ಕಾಲ ತಾಲೂಕಿನಲ್ಲಿ ವಿಶೇಷ ಕರ ವಸೂಲಿ ಅಭಿಯಾನದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಪಿಡಿಒ, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಒ, ವಾಟರ್ ಮ್ಯಾನ್ ಗಳು, ಜಿಕೆಎಂ, ಸೇರಿದಂತೆ ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಂಡು ತೆರಿಗೆ ಸಂಗ್ರಹಣೆ ಮಾಡಲಾಯಿತು..
ಕರ ವಸೂಲಿ ಅಭಿಯಾನದ ವಿಶೇಷತೆ
22 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಟ 200 ಆಸ್ತಿ ಮಾಲೀಕರನ್ನು ಗುರುತಿಸಿ ಅವರಿಗೆ ನೋಟೀಸ್ ನೀಡಿ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ನೋಟೀಸು ಜಾರಿ ಮಾಡಿ ಸಂಪೂರ್ಣ ಮೊತ್ತ ಪಾವತಿಸಿಕೊಳ್ಳುವುದು. ತೆರಿಗೆ ಪಾವತಿ ಬಾಕಿ ಹೊಂದಿರುವ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರರಿಗೆ ನೋಟೀಸು ನೀಡಿ ಶೇ.100 ರಷ್ಟು ಬಾಕಿ ವಸೂಲಿ ಮಾಡಲು ಸೂಚಿಸಲಾಗಿತ್ತು. ಅದರಂತೆ ಕೇವಲ 15 ದಿನದಲ್ಲಿ ಕರ ಇಷ್ಟು ವಸೂಲಿ ಮಾಡಲಾಗಿದೆ.