ಸಂತ್ರಸ್ಥರಿಗೆ ಆಹಾರ ಸಾಮಗ್ರಿ ವಿತರಣೆ

ಲೋಕದರ್ಶನ ವರದಿ

ಗಜೇಂದ್ರಗಡ 10: ಉತ್ತರ ಕರ್ನಾಟಕ ಕದ ಗದಗ ಜಿಲ್ಲೆಯ ರೋಣ ಗಜೇಂದ್ರಗಡ ತಾಲೂಕಿನ ನಿಡಗುಂದಿ, ರಾಜೂರ, ಕಾಲಕಾಲೇಶ್ವರ, ಕೊಡಗಾನೂರ ಸೇರಿದಂತೆ ಇಂದು ಹೊಳೆಆಲೂರ, ಹೊಳೆ ಮಣ್ಣೂರು ಗ್ರಾಮದ ನೆರೆಯ ಸಂತ್ರಸ್ತರಿಗೆ ಗ್ರಾಮದಿಂದ ರೊಟ್ಟಿ ದವಸ ಧಾನ್ಯಗಳನ್ನು ಸಂಗ್ರಹಿಸಲಾಯಿತು.

ನಿಡಗುಂದಿ ಗ್ರಾಮದ ಪ್ರಮುಖರಾದ ಚೇತನ ಅಣಗೌಡ್ರು ಮಾತನಾಡುತ್ತಾ ಉತ್ತರ ಕನರ್ಾಟಕದಂತಹ ಪರಿಸ್ಥಿತಿ ಇನ್ನೂ ಮುಂದಿನ ದಿನಗಳಲ್ಲಿ ಯಾರಿಗೂ ಇರಬಾರದು. ಅವರು ನಿಡಗುಂದಿ ಗ್ರಾಮದ ಪ್ರತಿ ಮನೆ-ಮನೆಗೆ ರೊಟ್ಟಿ ದವಸ ಧಾನ್ಯಗಳನ್ನು ಸಂಗ್ರಯಿಸುವ ಸಂದರ್ಭದಲ್ಲಿ ತಮ್ಮ ಅಳಲನ್ನು ತೊಡಗಿಕೊಂಡರು.

ರಾಜೂರ ಗ್ರಾಮದ ನಿವಾಸಿ ಶಿವಕುಮಾರ ಜಾಧವ ಮಾತನಾಡುತ್ತಾ ಉತ್ತರ ಕರ್ನಾಟಕದ ಕೆಲ ಜಿಲ್ಲೆಯ ತಾಲೂಕುಗಳು ಸಂಪೂರ್ಣವಾಗಿ ನೀರಿನಿಂದ ತುಂಬಿ ತುಳುಕುತ್ತಿದ್ದ ಪರಿಸ್ಥಿತಿಯನ್ನು ನಾನು ನನ್ನ ಕಣ್ಣಾರೆ ನೋಡಿ ಮನಸ್ಸಿಗೆ ತಡೆದುಕೊಳ್ಳಲು ಆಗದೆ ಇರುವ ಕಾರಣ ಇಂದು ರಾಜೂರ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ನನ್ನ ಕೈಲಾದ ಸಹಾಯಕ್ಕೆ ಮುಂದಾಗಿದ್ದೆನೆ ತಾವುಗಳು ಕೂಡಾ ತಮ್ಮ ಕೈಲಾದ ಸಹಾಯಕ್ಕೆ ಮುಂದಾಗಿ ಎಂದು ಗ್ರಾಮದ ಜನತೆಯಲ್ಲಿ ಕೇಳಿಕೊಂಡರು.

ಪಟ್ಟಣದ ಸರ್ಕಾರಿ  ಪದವಿ ಪೂರ್ವ ಕಾಲೇಜು ಎನ್ ಎಸ್ ಎಸ್ ಘಟಕದ ವತಿಯಿಂದ ಸೂಮಾರು 10657 ರೂ ಗಳನ್ನು ಸಂಗ್ರಹ ಮಾಡಲಾಯಿತು.

ಕಾಲೇಜಿನ ವಿದ್ಯಾಥರ್ಿ ರವಿ ಹಾದಿಮನಿ ಮಾತನಾಡಿ ರಾಜ್ಯದ ಹಲವಡೆ ಪ್ರವಾಹ ಪರಿಸ್ಥಿಯನ್ನ ಜನರು ಸಂಪೂರ್ಣವಾಗಿ ಅಥರ್ೈಸಿಕೊಂಡು ಇಂತಹ ಸಮಸ್ಯಗಳಿಗೆ ನಾವುಗಳು ಸಹಾಯ ನಿಡಲು ಮುಂದಾಗದಿದ್ದರೆ ಯಾರು ಮುಂದಾಗುತ್ತಾರೆ ಎಂದು ಹಣ ಸಂಗ್ರಹ ಮಾಡುವ ಸಂದರ್ಭದಲ್ಲಿ ಜನರು ತಮ್ಮ ಅಳಲನ್ನು ತೊಡಿಕೊಂಡರು ಎಂದು ವಿವರಿಸಿದರು.

ಸಂದರ್ಭದಲ್ಲಿ ಪರಪ್ಪ ಅಣಗೌಡ್ರು, ಮಲ್ಲನಗೌಡ ಪಾಟೀಲ, ಪ್ರಕಾಶ ಸೂಡಿ, ಪ್ರಕಾಶ ಪಾಟೀಲ, ಶರಣಪ್ಪ ಮೇಟಿ, ರಮೇಶ ಅಣಗೌಡ್ರು, ವಿರೇಶ ಗಡಾದ, ಶಿವು ಹುಡೇದ, ಮಹ್ಮದ್ ಮುಜಾವರ, ಅನ್ನದಾನೇಶ್ವರ ಕೀನ್ನಾಳ, ರವಿ ಹಾದಿಮನಿ, ಅರುಣ ಚಳಗೇರಿ, ದೊಡ್ಡೇಶ ಬಳಗೇರ, ಶರಣಪ್ಪ ಅಂಗಡಿ, ಕಾಲೇಜಿನ ಪ್ರಾಚಾರ್ಯ ಬಿ.ಬಿ. ಗುರಿಕಾರ  ಉಪನ್ಯಾಸಕರು ರಮೇಶ ಮರಾಠಿ, ಸರಸ್ವತಿ ದೊಡ್ಡಮನಿ, ಬಸಪ್ಪ ಜೇ ಮುಲ್ಕಿಗೌಡ್ರು, ಮಂಜುನಾಥ ಯರಗೇರಿ ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವಗರ್ಾ, ಕಿರಣ ಶಂಕ್ರಿ, ಮುತ್ತಣ್ಣ ನರಿಯವರ, ಕಿರಣ ನರಿಯವರ, ಯಲ್ಲಪ್ಪ, ಮಂಜುನಾಥ ಜಾಲಿ, ಪ್ರಜ್ವಲ್ ಯರಕಲ್ಲ, ಶ್ಯಾಮೀದ್ ಬಳ್ಳಾರಿ, ಕಾವೇರಿ ಶೀಲವೇರಿ, ಗೌತಮಿ ಸಂಚಾಲಿ, ಅಂಬಿಕಾ ನಂದನಜವಳೆಕಾರ, ಸ್ನೇಹಾ ಮಾನೆ, ಪ್ರೀತಿ ಮಿಸ್ಕಿನ್, ರಮೇಶ ಹಲಗಿ, ಸಚಿನ್ ಕಾಳೆ, ಶರಣು ಪೂಜಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.