ಆರೆವರ್ಕ, ಹೊಲಿಗೆ ತರಭೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

Distribution of certificates to students who have completed the six-year, sewing training

ಆರೆವರ್ಕ, ಹೊಲಿಗೆ ತರಭೇತಿ ಮುಗಿಸಿದ  ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ  

  ಮುಂಡಗೋಡ  08: ಲೊಯೋಲ ವಿಕಾಸ ಕೇಂದ್ರ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಜೀವನೋಪಾಯ ಯೋಜನೆ ಅಡಿಯಲ್ಲಿ ಆರೆವರ್ಕ, ಹೊಲಿಗೆ ತರಭೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.   ಫಾ.ಮೆಲ್ವಿನ್ ಲೊಬೊ ಎಸ್‌.ಜೆ.ಮುಖ್ಯಸ್ಥರು. ಲೊಯೋಲ ಸಮೂಹ ಸಂಸ್ಥೆಗಳು ಮುಂಡಗೋಡ ಇವರು ಮಾತನಾಡುತ್ತ ಬಡ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಇ ತರಭೇತಿ ತುಂಬಾ ಸಹಾಯವಾಗಿದೆ ನಿವೇ ನಿಂತು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಿರಿ ಹಾಗೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಿರಿ ನಿಮ್ಮಲ್ಲಿ ಕಲೆ, ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಮಶೀನ್‌ಗಳನ್ನು ತೆಗೆದುಕೊಂಡು ಬಟ್ಟೆಗಳನ್ನು ಹೊಲಿಯಬೇಕು ಸ್ವಾವಲಂಬಿಯಾಗಿ ಬೆಳೆಯಿರಿ ಎಂಬ ಮಾತನ್ನು ಹೇಳಿದರು. ಲೊಯೋಲ ವಿಕಾಸ ಕೇಂದ್ರದ ನಿರ್ದೆಶಕರಾದ ಫಾ.ಅನಿಲ್ ಡಿಸೋಜ ರವರು ಎಲ್ಲರೂ ಜೀವನದಲ್ಲಿ ಕನಸನ್ನು ಕಾಣಬೇಕು ಆ ಕನಸು ನನಸು ಮಾಡಲು ಹಠಸಾಧಿಸಿ ಗುರಿಸಾಧನೆ ಮಾಡಬೇಕು ಗುರಿಯ ಸ್ಪಷ್ಟತೆ ಇದ್ದರೆ ನಾವೂ ಎನಾದರೂ ಸಾಧಿಸಬಹುದು ಅವಕಾಶಗಳು ಹಲವಾರು ಇರುತ್ತವೆ ಅವನ್ನು ನಾವೇ ಹುಡುಕಿಕೊಂಡು ಹೊಗಬೇಕು ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವದಿಲ್ಲಾ ಯುವಕ ಯುವತಿಯರಿಗೆ ವಿವಿದ ಅವಕಾಶಗಳಿದ್ದು ಎಲ್ಲವನ್ನು ಬಳಸಿಕೊಳ್ಳಿ ಎಂದು ತಿಳಿಸಿದರು.   ನಕ್ಲೂಬಾಯಿ ಕೊಕರೆ ತಾಲೂಕ ಸಂಯೋಜಕರು ಅಭಿವೃದ್ದಿ ಆಕಾಂಕ್ಷಿ ಕಾರ್ಯಕ್ರಮ ಮುಂಡಗೋಡ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ  ನಾಯಕತ್ವ,ಧೈರ್ಯ,ಒಳ್ಳೆಯ ಕಲೆ ಮೂಡುತ್ತದೆ.ಜ್ಞಾನ ಅನೂಭವ ಮೂಡುತ್ತದೆ.ಮಶೀನ್‌ನಲ್ಲಿ ಬಟ್ಟೆ ಮಾಡುವದರ ಬಗ್ಗೆ ಬೇಡಿಕೆ ಕುರಿತು ಸರ್ಕಾರದಿಂದ ಸಿಗುವ ಲಾಭ ಪಡೆದುಕೊಳ್ಳುವ ಕುರಿತು ಕಿವಿಮಾತನ್ನು ಹೇಳಿದರು.    

       ಯುವತಿಯರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಯುವತಿಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಪ್ರಥಮ ಶೃತಿ ಶೇಟ್ ದ್ವಿತಿಯ ಅಮೃತ್‌ಗೌಳಿ, ತೃತೀಯ ಪೂಜಾ ಕಮ್ಮಾರ ಹಾಗೂ ಭಾಗವಹಿಸಿದ ಎಲ್ಲ ಯುವತಿಯರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. 2023-24 ಸಾಲಿನಲ್ಲಿ ಹೊಲಿಗೆ ತರಭೇತಿ ಮುಗಿಸಿದ 16,ಹಾಗೂ ಆರೆವರ್ಕ ತರಭೇತಿ ಮುಗಿಸಿದ 16 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.   ಈ ಕಾರ್ಯಕ್ರಮದಲ್ಲಿ   ವಿನಾಯಕ ಸುಣಗಾರ  ಶಿಧರ್ ಕರಿಯಣ್ಣನವರ ಶ್ರೀಮತಿ ದೀವ್ಯಾ ಶಾಸ್ತ್ರಿ ಕಾರ್ಯಕ್ರಮದ ನಿರೂಪಣೆ ಸವಿತಾ ರಾಚೋಟ್ ಸ್ವಾಗತ ಶಕುಂತಲಾ ಕುಂಬಾರ.  ಮಂಗಳಾ ಮೊರೆ ಮುಂಡಗೋಡ ವಲಯ ಸಂಯೋಜಕರು  ಹಾಗೂ ಉಪಸ್ಥಿತರಿದ್ದರು.