ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಉಪಹಾರ ವಿತರಣೆ

ಲೋಕದರ್ಶನ ವರದಿ

ಗದಗ 18: ಜಿಲ್ಲೆಯಲ್ಲಿ ಜಾರಿಯಲ್ಲಿರುವ  ಲಾಕ್ಡೌನ್ ಸಂದರ್ಭದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ಗೌರವ ಸಲ್ಲಿಸುವ ಸಲುವಾಗಿ ನಗರದ ದುಗರ್ಾದೇವಿ ಕೋ ಆಪ್ ಕ್ರೇಡಿಟ್ ಸೊಸಾಯಿಟಿಯಿಂದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಉಪಹಾರವನ್ನು ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಪಾಟೀಲ ಅವರು ವಿತರಿಸಿದರು. 

 ಈ ಸಂದರ್ಭದಲ್ಲಿ  ಉದ್ಯಮಿ ರಮೇಶ ಅಬ್ಬಿಗೇರಿ, ಪೊಲೀಸ್ ಇಲಾಖೆಯ ವಿನಾಯಿಕಮಠ ಹಾಗೂ ಸಿಬ್ಬಂದಿಗಳು ಹಾಗೂ ಸಂಸ್ಥೆಯ ನಿದರ್ೇಶಕ ಆನಂದ ಮುಂಡರಗಿ, ಲಕ್ಷ್ಮೀಬಾಯಿ ಬೇದ್ರೆ, ಶೋಭಾ ಉಮಚಗಿ, ವ್ಯವಸ್ಥಾಪಕ ಬಸವರಾಜ ಕೋರಿ,  ಸಿಬ್ಬಂದಿಗಳಾದ ಕವಿತಾ ಮಂಗಳೂರ, ವಿಜಯಲಕ್ಷ್ಮೀ ಹೂಗಾರ, ಪಲ್ಲವಿ ಚಿತ್ರಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.