ಮಾಶಾಸನ ಸದಸ್ಯರಿಗೆ ವಾತ್ಸಲ್ಯ ಕಿಟ್ ವಿತರಣೆ
ಗದಗ 16 : ತಾಲೂಕಿನ ಹರ್ತಿ ವಲಯದ ಮಲ್ಲಸಮುದ್ರ ಕಾರ್ಯಕ್ಷೇತ್ರದ ಮಾಶಾಸನ ಸದಸ್ಯರಾದ ಪಾರ್ವತೆವ್ವ ಮದ್ಯೋರ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕರಿಗೆ ನೀಡಲಾಗುವದ ವಾತ್ಸಲ್ಯ ಕಿಟ್ ವಿತರಿಸಲಾಯಿತು.
ಯಾರು ಇಲ್ಲದಿದ್ದರೂ ನಾವು ನಿಮ್ಮ ಜೊತೆ ಇರುತ್ತೆವೆಂದು ಹೇಮಾವತಿ ಆಮ್ಮನವರು ಮಾತೃ ಹೃದಯದಿಂದ ಮೂಡಿ ಬಂದ ಕಾರ್ಯಕ್ರಮವೇ ವಾತ್ಸಲ್ಯ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಪಾತ್ರೆಗಳು, ಬಟ್ಟೆಗಳು ಹಾಗೂ ಹೊದಿಕೆಗಳನ್ನು ವಿತರಣೆಯನ್ನು ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ ರವರು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯ ಬಸವರಾಜ ಪೂಜಾರಿ, ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ಬಸಾಪುರ ಹಾಗೂ ಸಂಘದ ಸದಸ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿ ಗಂಗಮ್ಮ, ಮೇಲ್ವಿಚಾರಕಾರದ ಶಾಂತಮೂರ್ತಿ ಮತ್ತು ಸೇವಾಪ್ರತಿನಿಧಿಯಾದ ಗೀತಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.