ಅನುದಾನ ಹಂಚಿಕೆ, ಅಭಿವೃದ್ಧಿ ಸಂಗತಿಯಲ್ಲಿ ತಾರತಮ್ಯ

Discrimination in grant allocation and development

ಅನುದಾನ ಹಂಚಿಕೆ, ಅಭಿವೃದ್ಧಿ ಸಂಗತಿಯಲ್ಲಿ ತಾರತಮ್ಯ 

ಬೀಳಗಿ 13: ನಾಡ ರಕ್ಷಣೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ಚನ್ನಮ್ಮನ ಹೆಸರಿನಲ್ಲಿ ಸರ್ಕಾರವು ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಿದೆ. ಆದರೆ, ಅನುದಾನ ಹಂಚಿಕೆ, ಅಭಿವೃದ್ಧಿ ಸಂಗತಿಯಲ್ಲಿ ತಾರತಮ್ಯ ಮಾಡುತ್ತಿದೆ. ಎಂಬ ಕೂಗು ಉಕ ಭಾಗದ ಜನಸಾಮಾನ್ಯರಲ್ಲಿ ಸಹಜವಾಗಿ ಬರುತ್ತಿದೆ ಎಂದು ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಚ್‌.ಆರ್‌.ನಿರಾಣಿ ಒತ್ತಾಯಿಸಿದರು. ಭಾರತದ ​‍್ರ​‍್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡಿಗರ ತಾಯಿ ಹಾಗೂ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ ವೀರ ಮಹಿಳೆ ಮತ್ತು ಚೆನ್ನಮ್ಮನಿಂದಾಗಿ ಕಿತ್ತೂರು ಪ್ರಸಿದ್ಧವಾಗಿರುವುದು ಗಮನಾರ್ಹ ಆದರೆ ಸರಕಾರವು ಸದರಿ ಪ್ರಾಧಿಕಾರಕ್ಕೆ ಅನುದಾನ ನೀಡದೇ ಇರುವುದು ನೋವಿನ ಸಂಗತಿಯಾಗಿದೆ ಎಂದ ಅವರು, ರಾಜ್ಯದ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳಿಗೆ ಭರಪೂರ ಅನುದಾನ ನೀಡಿ ಅಭಿವೃದ್ಧಿ ಪಡಿಸುತ್ತಿರುವುದು ಸ್ವಾಗತಾರ್ಹ ಆದರೆ ಕಿತ್ತೂರು ಕರ್ನಾಟಕದ ಕಿತ್ತೂರು ಪ್ರಾಧಿಕಾರದ ಕುರಿತು ಸರಕಾರ ಯಾವ ಕಾರಣಕ್ಕೆ ಉದಾಸೀನತೆ ತೋರುತ್ತಿದೆ ? ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು 2008ರಲ್ಲಿ 17 ವರ್ಷಗಳಲ್ಲಿ ಕೇವಲ 43.75 ಕೋಟಿ ರೂ. ಅನುದಾನವನ್ನು ಸರಕಾರ ನೀಡಿದೆ. ಪ್ರಾಧಿಕಾರ ರಚನೆ ಮಾಡಿ 7 ಹುದ್ದೆಗೆ ಮಂಜೂರಾತಿ ನೀಡಿದ್ದರೂ ಸಹ ಇಲ್ಲಿಯವರೆಗೆ ಯಾವ ಹುದ್ದೆಯನ್ನು ಸಹ ನೇಮಕ ಮಾಡಿಲ್ಲ. ಕಚೇರಿಯೂ ಇಲ್ಲ ಇತಿಹಾಸ ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಲೂ ಮೀನಾಮೇಷ ಎಣಿಸಲಾಗುತ್ತಿದೆ. ಪ್ರತಿ ವರ್ಷ ಕಿತ್ತೂರು ಉತ್ಸವದಲ್ಲಿ ಭಾಗವಹಿಸುವ ಮಾನ್ಯ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಕಿತ್ತೂರು ಕೋಟೆ ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವಾಗಿಸುವ ಭರವಸೆ ನೀಡುತ್ತಾರೆ. ಆದರೆ, ಆದ್ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಅದನ್ನು ಗಮನಿಸಿದರೆ ರಾಣಿ ಚನ್ನಮ್ಮ ಹಾಗೂ ಕಿತ್ತೂರು ಕೇವಲ ಭಾಷಣದ ವಸ್ತುವೇ ? ಎಂಬ ಭಾವನೆ ಮೂಡುವಂತಾಗಿದೆ. ಮಾತು ಮಾತಿಗೂ ಚನ್ನಮ್ಮನ ಸ್ಮರಿಸುವ ಜಿಲ್ಲೆಯ ರಾಜಕಾರಣಿಗಳು, ಅನುದಾನ ತಾರತಮ್ಯ ಧೋರಣೆ ಬಗ್ಗೆ ಮಾತನಾಡದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ ಆದ್ದರಿಂದ ಈ ಕೂಡಲೇ ಸರಕಾರವು ಸದರಿ ಪ್ರಾಧಿಕಾರಿಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಪಡಿಸುವಂತೆ ಸರಕಾರವನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದ್ದಾರೆ.