ಚಾಲಕರಿಗೆ ಶಿಸ್ತು, ಸಮಯ ಪಾಲನೆ ಮುಖ್ಯ: ಮಲ್ಲೇಶಪ್ಪ.ವೈ

Discipline and punctuality are important for drivers: Malleshappa.Y

ಚಾಲಕರಿಗೆ ಶಿಸ್ತು, ಸಮಯ ಪಾಲನೆ ಮುಖ್ಯ: ಮಲ್ಲೇಶಪ್ಪ.ವೈ

ಬಳ್ಳಾರಿ 23: ನಗರದಲ್ಲಿ ವಾಹನ ಚಾಲಕ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಶಿಸ್ತು-ಸಂಯಮ ಮುಖ್ಯ ಎಂದು ಬಳ್ಳಾರಿ ಜಿಲ್ಲಾ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ.ವೈ ಹೇಳಿದರು.    ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಭಾನುವಾರ ಏರಿ​‍್ಡಸಿದ್ದ ಬಳ್ಳಾರಿ ಜಿಲ್ಲಾ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ 2024 ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಚಾಲಕರು ಮುಖ್ಯವಾಗಿ ಸಮಯ ನಿರ್ವಹಣೆ ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿಷ್ಠೆಯೇ ಚಾಲಕರನ್ನು ಕಾಪಾಡುತ್ತದೆ ಎಂದು ತಿಳಿಸಿದ ಅವರು, ಸಂಘದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.   ಸಭೆಯಲ್ಲಿ ಸಂಘದ ವಾರ್ಷಿಕ ಖರ್ಚು-ವೆಚ್ಚಗಳ ಮಾಹಿತಿ ಮಂಡಿಸಲಾಯಿತು. ಇದೇ ವೇಳೆ ಸಂಘದ ಸದಸ್ಯರಿಂದ ಅಭಿಪ್ರಾಯ ಮತ್ತು ಅನಿಸಿಕೆ ಪಡೆಯಲಾಯಿತು.   ಈ ಸಂದರ್ಭದಲ್ಲಿ ಜಿಲ್ಲಾ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಗೌರವ ಅಧ್ಯಕ್ಷ ವೆಂಕಟರೆಡ್ಡಿ, ಉಪಾಧ್ಯಕ್ಷ ಪರಶುರಾಮ್, ಖಜಾಂಚಿ ಶಿವು, ಕಾರ್ಯಾಧ್ಯಕ್ಷ ಆಂಥೋನಿ ಪಾಲ್ ಹಾಗೂ ಸಲಹೆಗಾರರಾದ ಸಂತೋಷ್ ಕುಮಾರ್, ಹಂಪಯ್ಯ, ಸದಸ್ಯರಾದ ಸಮನ್, ನಾಗರಾಜ್‌.ಎಂ., ಭಾಷಾ, ಖಲೀಲ್ ಭಾಷಾ, ಪವನ್ ಹಾಜರಿದ್ದರು.