ಲೋಕದರ್ಶನ ವರದಿ
ಕಾರವಾರ(ಕೈಗಾ) 03: ಕೈಗಾದಲ್ಲಿ 700 ಮೆಗಾ ವ್ಯಾಟ್ ಸಾಮಥ್ರ್ಯದ ಎರಡು ಹೊಸ ಘಟಕಗಳ ನಿಮರ್ಾಣ ಕಾರ್ಯಕ್ಕೆ ಕೇಂದ್ರ ಸಕರ್ಾರ ಆಡಳಿತಾತ್ಮಕ ಮತ್ತು ಆಥರ್ಿಕ ಮಂಜೂರಾತಿ ನೀಡಿದ್ದು, ಪರಿಸರ ಸಂಬಂಧಿ ಅಧ್ಯಯನಗಳು ಸಹ ಮುಗಿದಿವೆ. ಕೈಗಾದ 5 ಮತ್ತು 6 ನೇ ಘಟಕಗಳ ನಿಮರ್ಾಣ ಕಾರ್ಯ 2020ರಲ್ಲಿ ಪ್ರಾರಂಭವಾಗಲಿದೆ ಎಂದು ಕೈಗಾ ಅಣುಸ್ಥಾವರ 3 ಮತ್ತು 4ನೇ ಘಟಕಗಳ ನಿದರ್ೇಶಕ ಜೆ.ಆರ್.ದೇಶಪಾಂಡೆ ಹೇಳಿದರು.
ಕೈಗಾ ಅಣುವಿದ್ಯುತ್ ಸ್ಥಾವರ ಘಟಕದ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ಘಟಕ 5 ಮತ್ತು 6ನೇ ಘಟಕಗಳು 2026ರಲ್ಲಿ ಅಣುವಿದ್ಯುತ್ ಉತ್ಪಾದನೆ ಆರಂಭಿಸಲಿವೆ. 1400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಿಂದ ದೇಶದ ಅಣುವಿದ್ಯುತ್ ಉತ್ಪಾದನೆಗೆ ಕೈಗಾ ತನ್ನದೇ ಆದ ಕೊಡುಗೆ ನೀಡಲಿದೆ. ನೂತನ ಘಟಕಗಳಿಂದ ಉತ್ಪಾದನೆಯಾದ ಅಣು ವಿದ್ಯುತ್ನಲ್ಲಿ ಕನರ್ಾಟಕಕ್ಕೆ ಶೇ.50 ರಷ್ಟು ಅಂದರೆ 700 ಮೆಗಾವ್ಯಾಟ್ ವಿದ್ಯುತ್ ದಕ್ಕಲಿದೆ. ಇದರಿಂದ ರಾಜ್ಯದ ಆಥರ್ಿಕ ಅಭಿವೃದ್ಧಿಗೆ, ಕೈಗಾರಿಕೆ ಸೇರಿದಂತೆ ವಿದ್ಯುತ್ ಬೇಡಿಕೆ ಪೂರೈಕೆಗೆ ನೆರವಾಗಲಿದೆ ಎಂದರು. ಕೈಗಾ ಘಟಕ 5 ಮತ್ತು 6 ನಿಮರ್ಾಣ ಕಾರ್ಯ ಆರಂಭವಾದಾಗ ನೇರವಾಗಿ 4000 ದಿಂದ 5000 ಜನರಿಗೆ ಹೊರಗುತ್ತಿಗೆ ಕೆಲಸ ಸಿಗಲಿದೆ. ಪರೋಕ್ಷ ಉದ್ಯೋಗ ಸೃಷ್ಟಿ ಸಹ ಆಗಲಿದೆ. ಅಲ್ಲದೇ ಸ್ಥಳೀಯ ಗುತ್ತಿಗೆದಾರರಿಗೆ ಬಹುದೊಡ್ಡ ಪ್ರಮಾಣದಲ್ಲಿ ಗುತ್ತಿಗೆ ಸಿಗಲಿವೆ. ಘಟಕ ನಿಮರ್ಾಣದ ನಂತರ 789 ಖಾಯಂ ಉದ್ಯೋಗ ಸೃಷ್ಟಿಯಾಗಲಿದೆ. ನೂತನ ಘಟಕಗಳ ನೌಕರರಿಗೆ ಹೊಸ ಟೌನ್ಶಿಪ್ ಸಹ ನಿಮರ್ಾಣವಾಗಲಿದ್ದು, ಒಟ್ಟು ಯೋಜನಾ ವೆಚ್ಚ 21000 ಕೋಟಿ ರೂ. ಆಗಿದೆ ಎಂದರು.
ಹೊಸದಾಗಿ ಭೂಮಿ ಬೇಕಿಲ್ಲ:
ಕೈಗಾದಲ್ಲಿ ಅಣುಸ್ಥಾವರ ನಿಮರ್ಿಸಲು 1987 ರಲ್ಲೇ ಯೋಜನೆ ರೂಪಗೊಂಡಾಗ 6 ಘಟಕಗಳ ಸ್ಥಾಪನೆಗೆ ಪರಿಸರ ಅನುಮತಿ ಪಡೆಯಲಾಗಿತ್ತು. ಕೈಗಾ ಬಳಿ ಅಣುಸ್ಥಾವರದಲ್ಲಿ 220 ಮೆಗಾ ವ್ಯಾಟ್ ಸಾಮಥ್ರ್ಯದ ಆರು ಘಟಕ ಸ್ಥಾಪಿಸಲು ಮೊದಲು ಯೋಜಿಸಲಾಗಿತ್ತು. ಸಕರ್ಾರ 1665 ಹೆಕ್ಟೇರ್ ಭೂಮಿಯನ್ನು ಆಗಲೇ ನೀಡಲಾಗಿತ್ತು. 829 ಹೆಕ್ಟೇರ್ ಭೂಮಿ ಕದ್ರಾ ಅಣೆಕಟ್ಟಿನ ಹಿನ್ನೀರ ವ್ಯಾಪ್ತಿಯಲ್ಲಿ ಇದೆ. ಉಳಿದ 836 ಹೆಕ್ಟೇರ್ ನಲ್ಲಿ 665 ಹೆಕ್ಟೇರ್ ಅರಣ್ಯ ಭೂಮಿಯಾಗಿದೆ. ಇದರಲ್ಲಿ ಕೇವಲ 120 ಹೆಕ್ಟೇರ್ ಭೂಮಿಯನ್ನು ಕೈಗಾ ಅಣುಸ್ಥಾವರದ ಆರು ಘಟಕಗಳ ನಿಮರ್ಾಣಕ್ಕೆ ಮೀಸಲಿಡಲಾಗಿತ್ತು. 1988 ರಲ್ಲಿ ಸ್ಥಾವರ ಸ್ಥಾಪನೆಗೆ ಸಕರ್ಾರದ ಆದೇಶ ಪತ್ರ ಸಹ ಹೊರಡಿಸಲಾಗಿತ್ತು. ಕೈಗಾ ಘಟಕ 1-4 ಗಳ ನಿಮರ್ಾಣಕ್ಕೆ 65.91 ಹೆಕ್ಟೇರ್ ಭೂಮಿ ಬಳಸಲಾಗಿದೆ. ಘಟಕ 5-6 ಸ್ಥಾಪನೆಗೆ ಬೇಕಾದ 54.09 ಹೆಕ್ಟೇರ್ ಭೂಮಿ ನಮ್ಮ ಬಳಿ ಇದ್ದು, ಹೆಚ್ಚುವರಿ ಭೂಮಿ ಬೇಕಾಗಿಲ್ಲ. ಯಾವುದೇ ಭೂಮಿಯನ್ನು ಹೆಚ್ವುವರಿಯಾಗಿ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದರು. ನಿರಾಶ್ರಿತರ ಸಮಸ್ಯೆಯೂ ಇಲ್ಲ. ಮೊದಲ 4 ಘಟಕಗಳ ಸ್ಥಾಪನೆಯಾದಾಗ ನಿರಾಶ್ರಿತರಾದ 96 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಪ್ರತಿ ಕುಟುಂಬದ ಒಬ್ಬರಿಗೆ ನೌಕರಿ ಸಹ ನೀಡಲಾಗಿದೆ ಎಂದು ನಿದರ್ೇಶಕ ಜೆ.ಆರ್.ದೇಶಪಾಂಡೆ ವಿವರಿಸಿದರು.
ಪ್ರಸ್ತುತ 1 ರಿಂದ 4 ನೇ ಘಟಕಗಳಲ್ಲಿ ಕನರ್ಾಟಕದವರೇ ಶೇ.16 ರಷ್ಟು ನೌಕರರಿದ್ದಾರೆ. ಶೇ.38 ಉತ್ತರ ಕನ್ನಡ ಜಿಲ್ಲೆಯ ನೌಕರರಿದ್ದಾರೆ. ನಿಮರ್ಾಣ ಹಂತದಲ್ಲಿ ಶೇ.90 ರಷ್ಟು ಕಾಮಗಾರಿ ಗುತ್ತಿಗೆಗಳು ಸ್ಥಳೀಯರಿಗೆ ದೊರೆತಿವೆ. ಘಟಕ 5 ಮತ್ತು 6 ನಿಮರ್ಾಣದ ವೇಳೆ ಸಹ ಇದೇ ಪದ್ಧತಿ ಮುಂದುವರಿಯುವ ಲಕ್ಷಣಗಳಿವೆ. ದೇಶದ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿಯಿಂದ ಜನರು ಸಹಕರಿಸಬೇಕು ಎಂದು ಕೈಗಾ ಸ್ಥಾವರ ಕೇಂದ್ರ ನಿದರ್ೇಶಕರು ಮನವಿ ಮಾಡಿದರು.
ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ತುಂಬಾ ದಿನ ನಡೆಯುವ ಲಕ್ಷಣಗಳಿಲ್ಲ. ಗುಣ ಮಟ್ಟದ ಕಲ್ಲಿದ್ದಲು ದೊರೆಯುತ್ತಿಲ್ಲ. ಜಲ ವಿದ್ಯುತ್ ಘಟಕಗಳು ಮಳೆಯಾಶ್ರಿತವಾಗಿವೆ. ಹಾಗಾಗಿ ಭಾರತದಲ್ಲಿ ಅಣುವಿದ್ಯುತ್ ಮಾತ್ರ ಪಯರ್ಾಯ ಸಾಧ್ಯತೆಯಾಗಿದೆ. ಪರಿಸರ ಸ್ನೇಹಿ ಅಣುವಿದ್ಯುತ್ ಉತ್ಪಾದನೆ ದೇಶದಲ್ಲಿ ನಡೆದಿದೆ. ದೇಶದಲ್ಲಿ ಹತ್ತು ಹೊರ ರಿಯಾಕ್ಟರ್ ನಿಮರ್ಾಣಕ್ಕೆ ಕೇಂದ್ರ ಸಕರ್ಾರ ಅನುಮತಿಸಿದೆ. ಈಗ ದೇಶದಲ್ಲಿ 6789 ಮೆಗಾ ವ್ಯಾಟ್ ಅಣುವಿದ್ಯುತ್ ಉತ್ಪಾದನೆ ಆಗುತ್ತಿದೆ. 2024-25ರ ವೇಳೆಗೆ 12980 ಮೆಗಾ ವ್ಯಾಟ್ ಅಣು ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಇದರಲ್ಲಿ ಕೈಗಾದ 700 ಮೆಗಾ ವ್ಯಾಟ್ ಸಾಮಥ್ರ್ಯದ ಘಟಕಗಳು ಸೇರಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಘಟಕ 1 ಮತ್ತು 2ರ ನಿದರ್ೇಶಕ ಜಿ.ಪಿ.ರೆಡ್ಡಿ , ಕನಸ್ಟ್ರಕ್ಷನ್ ಎಂಜಿನಿಯರ್ ಪಿ.ಮೋಹನ್,ಟಿ,ಪ್ರೇಮಕುಮಾರ್ ಇದ್ದರು.