ಧಾರವಾಡ ಕಟ್ಟಡ ಕುಸಿತ ಪ್ರಕರಣ ನಿಷ್ಪಕ್ಷಪಾತ ತನಿಖೆ

ಧಾರವಾಡ 20: ಕುಮಾರೇಶ್ವರ ನಗರದದಲ್ಲಿ ಮಂಗಳವಾರ ಮಧ್ಯಾಹ್ನ ನಿಮರ್ಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡ ಕುಸಿತಗೊಂಡು ಹಲವಾರು ಜನ ಗಾಯಗೊಂಡು, ಮೂವರು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟದ ಸಂಗತಿಯಾಗಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಗಾಯಾಳುಗಳಿಗೆ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕನರ್ಾಟಕ ಯೋಜನೆಗಳಡಿಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವ್ಹಿ. ದೇಶಪಾಂಡೆ ಹೇಳಿದರು. 

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾಯರ್ಾಚರಣೆ ಪರಿಶೀಲಿಸಿದ ಸಚಿವರು ನಂತರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ಮಂಗಳವಾರ ಕಟ್ಟಡ ಕುಸಿತ ಪ್ರಕರಣದ ಮಾಹಿತಿ ದೊರೆತ ತಕ್ಷಣವೇ ಸ್ಥಳೀಯ ಪೊಲೀಸರು, ಜಿಲ್ಲಾಡಳಿತ, ಅಗ್ನಿಶಾಮಕ ಮತ್ತು ತುತರ್ು ಸೇವೆಗಳ ಅಧಿಕಾರಿ, ಸಿಬ್ಬಂದಿವರ್ಗ ಕಾಯರ್ಾಚರಣೆ ಆರಂಭಿಸಿವೆ.

       ಸಂಜೆ ಹೊತ್ತಿಗೆ 45 ಜನರ ಎಸ್ಡಿಆರ್ಎಫ್ ತಂಡ, ಐವರು ಎನ್ಡಿಆರ್ಎಫ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪರಿಹಾರ ಕೆಲಸ ಚುರುಕುಗೊಳಿಸಿ ಬೆಳಗಿನ ಜಾವದವರೆಗೆ ಸುಮಾರು 54 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.  ಇಂದು ಬೆಳಿಗ್ಗೆ ಘಾಜಿಯಾಬಾದ್ನಿಂದ 73 ಜನರನ್ನೊಳಗೊಂಡ ಪರಿಣಿತ ಎನ್ಡಿಆರ್ಎಫ್ ತಂಡ ಆಗಮಿಸಿದ್ದು, ಕಾಯರ್ಾಚರಣೆಯು ಮುಂದುವರೆದಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ಯುವಕರು, ಕಟ್ಟಡ ಕಾಮರ್ಿಕರು ಸ್ವಯಂ ಪ್ರೇರಿತರಾಗಿ ಪರಿಹಾರ ಕಾಯರ್ಾಚರಣೆಗೆ ಕೈಜೋಡಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ.  ಜಿಲ್ಲಾಧಿಕಾರಿಗಳು, ಪೊಲೀಸರು ತ್ವರಿತವಾಗಿ ಸ್ಪಂದಿಸಿ ಪರಿಹಾರ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು. 

    ನಿಷ್ಪಕ್ಷಪಾತ ತನಿಖೆ ನಿದರ್ಾಕ್ಷಿಣ್ಯ ಕ್ರಮ : ಕಟ್ಟಡಕ್ಕೆ ಪರವಾನಿಗೆ ನೀಡುವ ಹಂತ, ತಾಂತ್ರಿಕ ದೋಷ ಅಥವಾ ಯಾವುದೇ ಲೋಪಗಳಿದ್ದರೂ ಕೂಡಾ ತಜ್ಞರನ್ನೊಳಗೊಂಡ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ನಿದರ್ಾಕ್ಷಿಣ್ಯವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಈಗ ಅವಶೇಷಗಳಡಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸುವುದು ಮತ್ತು ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸುವುದು ಮೊದಲ ಆದ್ಯತೆಯಾಗಿದೆ ಎಂದು ಸಚಿವ ಆರ್.ವ್ಹಿ. ದೇಶಪಾಂಡೆ ಹೇಳಿದರು.