ಧಾರವಾಡ 27: ಇಂದಿನ ಯುವಪೀಳಿಗೆ ಹಲವಾರು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಇದು ಸಮಾಜಕ್ಕೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದ್ದು, ಯುವಕರು ಇಂತಹ ಕ್ರೀಡಾಕೂಟಕ್ಕೆ ಆಸಕ್ತಿಯಿಂದ ಭಾಗವಹಿಸುವದರಿಂದ ಸದೃಢ ಶರೀರ ಹಾಗೂ ಮನಸ್ಸನ್ನು ಹೊಂದಬಹುದಾಗಿದೆ ಎಂದು ಕೆ.ಜಿ.ನಾಡಗೀರ ದೈಹಿಕ ಮಹಾವಿದ್ಯಾಲಯದ ನಿದರ್ೇಶಕ ಡಾ: ಆನಂದ ನಾಡಗೀರ ಯುವಕರಿಗೆ ಸಲಹೆ ನೀಡಿದರು.
ನಗರದ ಫ್ರೆಂಡ್ಸ್ ಸೋಶಿಯಲ್ ಕ್ಲಬ್ ಪೊಲೀಸ್ ಹೆಡ್ ಕ್ವಾಟರ್ಸ್ ಮೈದಾನದಲ್ಲಿ ದಿ. 24ರಿಂದ 26ರವರೆಗೆ ಆಯೋಜಿಸಿದ್ದ ಧಾರವಾಡ ಚಾಂಪಿಯನ್ಸ್ ಟ್ರೋಫಿ ಹಾರ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ವಿಜೇತ ಕೆ.ಸಿ.ಡಿ. ಎಲೆವನ್ ತಂಡಕ್ಕೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೆ.ಇ.ಬೋಡರ್ಿನ ನಿವೃತ್ತ ಶಿಕ್ಷಕ ಮಲ್ಲಿಕಾಜರ್ುನ ಎಂ. ಚಿಕ್ಕಮಠ ರವರು ಮಾತನಾಡಿ ಪಂದ್ಯಾವಳಿಯ ಸಂಘಟಿಸಿದ ಸಂಘಟಿಕರ ಶ್ರಮ ಸಾರ್ಥಕವಾಗಬೇಕಾದರೆ ಪಂದ್ಯಾವಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಯಶಸ್ವಿಯಾಗಿ ಮುಗಿದಾಗ ಮಾತ್ರ ಆಗುತ್ತದೆ. ಅಂತಹ ಯಾವುದೇ ಘಟನೆಗಳು ಈ ಪಂದ್ಯಾವಳಿಯಲ್ಲಿ ನಡೆಯದೇ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ ಪ್ರೆಂಡ್ಸ್ ಸೋಶಿಯಲ್ ಕ್ಲಬ್ನ ಸಂಘಟಿಕರಿಗೆ ಕೃತಜ್ಞತೆಗಳನ್ನು ಹೇಳುವದರೊಂದಿಗೆ ಭಾಗವಹಿಸಿದ ಎಲ್ಲ ತಂಡಗಳ ಆಟಗಾರರ ಸಹಕಾರವನ್ನು ಕೊಂಡಾಡಿದರು.
3 ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಧಾರವಾಡ ದ ಒಟ್ಟು 14 ತಂಡಗಳು ಭಾಗವಹಿಸಿದ್ದವು. ದಿ. 24ರಂದು ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಧಾರವಾಡ ಸಂಚಾರಿ ಪೋಲೀಸ್ ಇನ್ಸ್ಪೆಕ್ಟರ ಮುರುಗೇಶ ಚನ್ನಣ್ಣವರ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.
ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಧಾರವಾಡ ರಾಯಲ್ಸ್ ತಂಡವು ಗೆಲ್ಲಲು ಕೆ.ಸಿ.ಡಿ ತಂಡಕ್ಕೆ 64 ರನ್ ಗಳ ಗುರಿಯನ್ನು ನೀಡಿತು. ಗುರಿಯನ್ನು ಬೆನ್ನತ್ತಿದ ಕೆ.ಸಿ.ಡಿ. ಎಲೆವನ್ ತಂಡವು ಇನ್ನೂ ಒಂದು ಓವ್ಹರ್ ಬಾಕಿ ಇರುವಾಗಲೇ ಗೆಲುವು ಸಾಧಿಸಿ ಧಾರವಾಡ ಚಾಂಪಿಯನ್ಸ್ ಟ್ರೋಫಿ-2018 ನ್ನು ತನ್ನ ಮುಡಿಗೇರಿಸಿಕೊಂಡಿರು. ಇದರೊಂದಿಗೆ ಕೆ.ಸಿ.ಡಿ. ಎಲೆವನ್ ತಂಡವು 2018 ನೇ ಧಾರವಾಡ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯಾವಳಿಯಲ್ಲಿ ಅತ್ಯುತ್ತಮ ಬ್ಯಾಟ್ಸಮನ್ ಆಗಿ ಕೆ.ಸಿ.ಡಿ. ತಂಡದ ಸ್ಯಾಂಡಿ ಯವರು ಪಡೆದುಕೊಂಡರು. ಅತ್ಯುತ್ತಮ ಬೌಲರ್ ಆಗಿ ರಾಯಲ್ಸ್ ತಂಡದ ಪ್ರಕಾಶ ಅವರು ಪಡೆದುಕೊಂಡರು. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಕೆ.ಸಿ.ಡಿ. ತಂಡದ ರಾಮು ಅವರು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಫ್ರೆಂಡ್ಸ್ ಸೋಶಿಯಲ್ ಕ್ಲಬ್ನ ಅಧ್ಯಕ್ಷ ಮಲ್ಲಿಕಾಜರ್ುನ ಸೊಲಗಿ ಸ್ವಾಗತಿಸಿ ಪಂದ್ಯಾವಳಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್ನ ಉಪಾಧ್ಯಕ್ಷರಾದ ವಿನೋದ ಕುಸುಗಲ್ಲ, ಸಂಘಟನಾ ಕಾರ್ಯದಶರ್ಿ ಗಜಾನನ ಮುಶಣ್ಣವರ, ಸಲೀಮ ಮಿಶ್ರೀಕೋಟಿ, ಅಜೀತಕುಮಾರ ಬೋಗಾರ, ಶಿವಣ್ಣ ಕವಳಿ, ಸಯ್ಯದ ಬನ್ನಿಮಟ್ಟಿ, ಪುನೀತ ಅಂಗಡಿ, ವೀರಯ್ಯ ಮಹಾಂತಯ್ಯನವರ, ಮುನೀರ ತಾಂಬೋಳಿ, ಬಾಬಣ್ಣ ಚನಬಸನಗೌಡರ, ಭಗವಾನಸಿಂಗ್ ರಜಪೂತ, ಗೋಪಾಲ ರಜಪೂತ, ದಶರಥ ರಜಪೂತ, ಶಬ್ಬೀರ ಚಟ್ನೀವಾಲೆ, ಪ್ರದೀಪ ಕುಂದಗೋಳ, ಶಿವರಾಜ ಉಗಲಾಟ, ಮಂಜುನಾಥ ಗಬ್ಬೂರ, ಬಸವರಾಜ ಮೊರಬ, ಪವನ ಪೋಳ, ಮುಸ್ತಾಕ ಮುಜಾವರ, ಕಿರಣ ಕುಂದಗೋಳ, ಸಾಗರ ರಾಮದುರ್ಗ, ಮುಂತಾದವರು ಉಪಸ್ಥಿತರಿದ್ದರು.
ಕ್ಲಬ್ನ ಪ್ರಧಾನ ಕಾರ್ಯದಶರ್ಿ ಪ್ರಕಾಶ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.