ಧಾರವಾಡ: ವಿಶ್ವ ಬೈಪೋಲಾರ್ ದಿನಾಚರಣೆ

ಧಾರವಾಡ 30: "ಅರಿವನ್ನು ಮೂಡಿಸಿ, ಕಳಂಕವನ್ನು ಹೊಡೆದು ಹಾಕಿ ನಿಮ್ಮ ಉತ್ಸಾಹವನ್ನು ಹಂಚಿಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಡಿಮ್ಹಾನ್ಸ್ ಸಂಸ್ಥೆಯ ಹೊಸ ಸಭಾಂಗಣದಲ್ಲಿಂದು "ವಿಶ್ವ ಬೈಪೋಲಾರ್ ದಿನ" ಆಚರಿಸಲಾಯಿತು. 

ಸಂಸ್ಥೆಯ ನಿದರ್ೆಶಕರಾದ ಡಾ. ಮಹೇಶ್ ದೇಸಾಯಿ ಇವರು ಸಸಿಗೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಮೂಢ ನಂಬಿಕೆಗಳಿಗೆ ಮೋಸ ಹೋಗದೇ ಮಾನಸಿಕ ತಜ್ಞರಿಂದ ಬೈಪೋಲಾರ್ ಅಫೆಕ್ಟಿವ್ ಖಾಯಿಲೆಗೆ ಚಿಕಿತ್ಸೆ ಪಡೆಯಬೇಕು ಎಂದರು. ನಂತರ, ಮನೋರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಕಾಯಿಲೆಯ ಕುರಿತಾಗಿ ಚಚರ್ಿಸಿ ಸೂಕ್ತ ಚಿಕಿತ್ಸೆಯೊಂದಿಗೆ ಸಮಾಜದಲ್ಲಿ ಸಂತೋಷವಾಗಿ ಜೀವನವನ್ನು ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.

      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮನೋರೋಗ ವಿಭಾಗದ ಪ್ರಾಧ್ಯಾಪಕ ಪ್ರೊ.ಡಾ. ರಾಮಪ್ರಸಾದ್ ಮಾತನಾಡಿ, ಬೈಪೋಲಾರ್ ಅಫೆಕ್ಟಿವ್ ಕಾಯಿಲೆ (ಃಠಿಠಟಚಿಡಿ ಂಜಿಜಿಜಛಿಣತಜ ಆಠಡಿಜಜಡಿ-ಃಕಂಆ) ಬರಲು ಮಿದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳು ಕಾರಣವಾಗಿವೆ. ಸರಿಯಾದ ಚಿಕಿತ್ಸೆ ಮತ್ತು ಔಷಧೋಪಚಾರವನ್ನು ನಿಯಮಿತವಾಗಿ ಪಡೆದು ಪರಿಹರಿಸಿಕೊಳ್ಳಬಹುದು.

ಮನೋರೋಗ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ರಾಘವೇಂದ್ರ ನಾಯಕ್ ಅವರು ರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಕಾಯಿಲೆಯ ಕುರಿತಾಗಿ ಸಂವಾದವನ್ನು ನಡೆಸಿಕೊಟ್ಟರು. 

  ಮನೋವೈದ್ಯಕೀಯ ಸಮಾಜಕಾರ್ಯಕತರ್ೆ ಶ್ರೀದೇವಿ ಬಿರಾದಾರ್ "ವಿಶ್ವ ಬೈಪೋಲಾರ್ ದಿನ" ದ ಘೋಷಣೆ ಕುರಿತಾಗಿ ಸ್ವರಚಿತ ಕವನವನ್ನು ವಾಚಿಸಿದರು. ಡಿಮ್ಹಾನ್ಸ್ ಸಂಸ್ಥೆಯ ನಸರ್ಿಂಗ್ ವಿಭಾಗದ ಪ್ರಶಿಕ್ಷಣಾಥರ್ಿಗಳು ಬೈಪೋಲಾರ್ ಕಾಯಿಲೆ ಕುರಿತು ಕಿರು ನಾಟಕವನ್ನು ಪ್ರಸ್ತುತಪಡಿಸಿದರು.   

ಮನೋರೋಗ ವಿಭಾಗದ ಬೋಧಕ ಸಿಬ್ಬಂದಿಗಳಾದ ಡಾ.ರಂಗನಾಥ ಕುಲಕಣರ್ಿ, ಡಾ.ಆದಿತ್ಯ ಪಾಂಡುರಂಗಿ, ಡಾ.ಸ್ವಪ್ನಾ ಪಾಂಡುರಂಗಿ, ಡಾ.ಮಹೇಶ್, ಡಾ.ತೇಜಸ್ವಿ, ಡಾ.ಆಯಿಷಾ, ಡಾ.ವಾಯ್.ಎಲ್. ಕಲಕುಟಕರ್ ಮತ್ತು ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಶೋಭಾದೇವಿ ಆರ್.ಪಾಟೀಲ್, ನಸರ್ಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಆರ್. ಶ್ರೀವಾಣಿ, ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ವಿಜಯ ಪ್ರಸಾದ್, ಎಲ್ಲಾ ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ನಸರ್ಿಂಗ್ ವಿದ್ಯಾಥರ್ಿಗಳು ಮತ್ತು ಸಮಾಜಕಾರ್ಯ ಪ್ರಶಿಕ್ಷಣಾಥರ್ಿಗಳು  ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು. ವೈದ್ಯಾಧಿಕಾರಿ ಡಾ.ಮುಸದ್ದಿಕಾ ಖಾನಮ್ ನಿರೂಪಿಸಿದರು. ಶ್ರೀದೇವಿ ಬಿರಾದಾರ್ ಪ್ರಾಥರ್ಿಸಿದರು.