ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡವರ ಪಾಲಿನ ಊರುಗೋಲು - ದಯಾಶೀಲ

Dharamsthala Village Development Scheme is a crutch for the poor - Dayasheel

 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡವರ ಪಾಲಿನ ಊರುಗೋಲು - ದಯಾಶೀಲ 

ಬೆಳಗಾವಿ, 11; ತಾಲೂಕಿನ ಬೆಳಗುಂದಿ ವಲಯದ ಬೆಳಗುಂದಿ ಕಾರ್ಯಕ್ಷೇತ್ರ ದಲ್ಲಿ ಮಾಸಾಶನ ಫಲಾನುಭವಿ ಮಲಮ್ಮ ಅವರ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ರವರು ಯೋಜನೆಯ ಮೂಲಕ ನಿರ್ಮಿಸಿ ಕೊಡಲಾದ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿ ಮಾತನಾಡಿದರು. ಈ ಕಾರ್ಯಕ್ರಮವು ಅಸಹಾಯಕರಿಗೆ, ನಿರ್ಗತಿಕರಿಗೆ ಸೂರು ಒದಗಿಸುವ ಕಾರ್ಯಕ್ರಮವಾಗಿದೆ. ಬಸ್ ಸ್ಟ್ಯಾಂಡ್, ದೇವಸ್ಥಾನ ಗಳಲ್ಲಿ ಮಲಗುವ ಮಾಶಾಸನ ಫಲಾನುಭವಿಗಳಿಗೆ ಮನೆಯನ್ನು ನಿರ್ಮಿಸಿ ಕೊಡುವ ವಿನೂತನ ಯೋಜನೆಯಾಗಿದೆ. ಮಾಶಾಸನ ಕಾರ್ಯಕ್ರಮದ ಮೂಲಕ ಸುಮಾರು 21000 ನಿರ್ಗತಿಕರಿಗೆ ಯೋಜನೆಯ ಮೂಲಕ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತಿದೆ. ವೃದ್ಧರು, ಅನಾರೋಗ್ಯ ಪೀಡಿತರುಗಳಿಗೆ ಒಂದು ಹೊತ್ತಿನ ಊಟಕ್ಕೆ, ಓಷದೋಪಚಾರಕ್ಕೆ ಸಹಾಯವಾಗಿದೆ. ಮಕ್ಕಳಿದ್ದು ತಂದೆ ತಾಯಿಯನ್ನು ನೋಡದ ಇಂದಿನ ಕಾಲದಲ್ಲಿ ನಮ್ಮ ಯೋಜನೆಯು ಬಡವರಿಗೆ ಊರುಗೋಲಾಗಿ ಸಹಾಯ ಮಾಡುತ್ತಿದೆ. ಊರಿನ ಹಿರಿಯರು ,ಗಣ್ಯರು ಜನಪ್ರತಿನಿಧಿಗಳ ಸಹಕಾರದೊಂದಿಗೆ ಮಲ್ಲಮ್ಮ ರವರಿಗೆ ಸ್ವಂತ ಮನೆಯ ಕನಸು ಸಾಕಾರಗೊಂಡಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಊರಿನ ಪಂಚ ಕಮೀಟಿ ಅಧ್ಯಕ್ಷರಾದ ದಯಾನಂದ ಗೌಡ, ಬೆಳಗಾವಿ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಹೇಮಾ ಹದ್ಗಲ್, ಒಕ್ಕೂಟ ಅಧ್ಯಕ್ಷರಾದ ಪೂಜಾ ರವರು ಉಪಸ್ಥಿತರಿದ್ದರು. ಯೋಜನಾಧಿಕಾರಿಗಳಾದ ನಾಗರಾಜ ಹದ್ಲಿ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ಸೇವಾಪ್ರತಿನಿಧಿಗಳಾದ ಸುಧಾ ಮತ್ತು ಕವಿತಾ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.