ಹಳೆ ನೆಲ್ಲುಡಿ ಗ್ರಾಮದಲ್ಲಿ ಶ್ರದ್ಧೆಯ ಕಾಶೀಂಸಾಹೇಬ್ ಉರುಸ್ ಆಚರಣೆ
ಕಂಪ್ಲಿ 30: ತಾಲೂಕಿನ ನೆಲ್ಲುಡಿ ಗ್ರಾಪಂಯ ಹಳೆ ನೆಲ್ಲುಡಿ ಗ್ರಾಮದಲ್ಲಿ ಕಾಶೀಂಸಾಹೇಬ್ ದರ್ಗಾದಲ್ಲಿ ಹಜರತ್ ಕಾಶೀಂಸಾಹೇಬ್ ದಾದರವರ 93ನೇ ವರ್ಷದ ಉರುಸ್ ಮುಭಾರಕ್ ನಿಮಿತ್ಯ ಗಂಧ, ಉರುಸ್, ಜಿಯಾರತ್ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಇಲ್ಲಿನ ದರ್ಗಾದಲ್ಲಿ ಈ ವರ್ಷವು ಸಹ ಕಾಶೀಂಸಾಹೇಬ್ ಕಮಿಟಿಯಿಂದ ಭಕ್ತರ ಸಹಯೋಗದಲ್ಲಿ ನಾನಾ ಕಾರ್ಯಕ್ರಮಗಳು ನೆರವೇರಿದವು. ಡಿ.29ರಂದು ಗಂಧ ಜರುಗಿತು. ಸೋಮವಾರದಂದು ಉರುಸ್ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಉರುಸ್ ನಿಮಿತ್ಯ ಸಾಕಷ್ಟು ಭಕ್ತರು ದರ್ಗಾಕ್ಕೆ ಆಗಮಿಸಿ, ನೈವೇದ್ಯ, ಕಾಯಿ, ಉದ್ದಿನಕಡ್ಡಿ ಅರ್ಿಸಿ, ಕಾಶೀಂಸಾಹೇಬ್ ಅವರ ಕೃಪೆಗೆ ಪಾತ್ರರಾದರು.
ಡಿ.31ರಂದು ಗ್ರಾಮದ ಹೊನ್ನೂರಸ್ವಾಮಿ ದರ್ಗಾದಿಂದ ಗಂಧವನ್ನು ಅತಿ ವಿಜೃಂಭಣೆಯಿಂದ ಪ್ರಾರಂಭಿಸಿ, ನಂತರ ದರ್ಗಾಕ್ಕೆ ಆಗಮಿಸಲಾಗುತ್ತದೆ. ನಂತರ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಉರುಸ್ ಹಿನ್ನಲೆ ಶಾಸಕ ಜೆ.ಎನ್.ಗಣೇಶ್ ಅವರು ದರ್ಗಾಕ್ಕೆ ಭೇಟಿ ನೀಡಿ, ದೇವರ ಕೃಪೆಗೆ ಪಾತ್ರರಾದರು. ಹಾಗೂ ನೆಲ್ಲುಡಿ, ಎಮ್ಮಿಗನೂರು, ಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸಿ, ದರ್ಗಾದ ಕಾಶೀಂಸಾಹೇಬ್ ಆಶೀರ್ವಾದ ಪಡೆದರು. ದರ್ಗಾದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಕಾಶೀಂಸಾಹೇಬ್ ಕಟಿಮಿಯವರು ಇದ್ದರು.