ಧರ್ಮದ ತಳಹಾದಿ ಮೇಲೆ ನಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ : ಮುಪ್ಪಿನ ಬಸವಲಿಂಗ ಮಹಾಸ್ವಾಮಿ
ಕಂಪ್ಲಿ 22: ವೀರಶೈವ ಲಿಂಗಾಯತ ಧರ್ಮಕ್ಕೆ ತನ್ನದೇ ತತ್ವ ಸಿದ್ಧಾಂತಗಳಿಗೆ. ಪ್ರತಿಯೊಬ್ಬರೂ ಧರ್ಮದ ತಳಹಾದಿ ಮೇಲೆ ನಡೆದಾಗ ಮಾತ್ರ ಸಮಾಜದ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಕೊಟ್ಟೂರು ಮಹಾಸ್ವಾಮಿ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿ ಹೇಳಿದರು. ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲಾ ಆವರಣದಲ್ಲಿ ಬುಧವಾರ ನಡೆದ ಕಂಪ್ಲಿ ಕ್ಷೇತ್ರದಲ್ಲಿ ಸಹಕಾರ ಸಂಘ, ಎಪಿಎಂಸಿ, ಬಿಡಿಸಿಸಿ, ಕೃಷಿಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಇತರೆ ಚುನಾವಣೆಗಳಲ್ಲಿ ಆಯ್ಕೆಗೊಂಡ ಸದಸ್ಯರಿಗೆ ಸನ್ಮಾನದ ಗೌರವ ಹಾಗೂ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಅವರ ಜನ್ಮದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಸಮಾಜವು ಅಭಿವೃದ್ಧಿ ಹೊಂದಬೇಕಾದರೆ, ಮುಖ್ಯವಾಗಿ ಶಿಕ್ಷಣ ಹೊಂದಬೇಕು. ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಿದಾಗ ಮಾತ್ರ, ಮಕ್ಕಳು ದೇಶದ ಉತ್ತಮ ನಾಗರೀಕರಾಗಿ ಬೆಳೆಯಲು ಸಾಧ್ಯ ಎಂದರು. ನಂತರ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಮಾತನಾಡಿ, ಕಂಪ್ಲಿ ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಅವಶ್ಯಕತೆ ಇದ್ದು, ಇದರಿಂದ ಸರ್ಕಾರದಿಂದ 2 ವರೆ ಎಕರೆ ಜಮೀನು ಅನುಮೋದನೆ ಮಾಡಿಸಿ, ಹಾಸ್ಟೆಲ್ ನಿರ್ಮಿಸಿ, ವಸತಿ ವ್ಯವಸ್ಥೆ ಕಲ್ಪಿಸುವ ಜತೆಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ವೀರಶೈವ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ವೀರಶೈವ ಸಮಾಜದ ಮುಖಂಡ ಅರವಿ ಬಸವನಗೌಡ ಅವರು ಅಧ್ಯಕ್ಷತೆವಹಿಸಿದ್ದರು. ತದನಂತರ ನೂತನ ಜನಪ್ರತಿನಿಧಿಗಳಿಗೆ ಪ್ರಶಸ್ತಿ ಪ್ರಮಾಣ ಹಾಗೂ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಪಂ ಎಡಿ ಕೆ.ಎಸ್.ಮಲ್ಲನಗೌಡ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಹೆಚ್.ಶಿವಶಂಕರಗೌಡ, ಡಿ.ವೀರ್ಪ, ಮಾವಿನಹಳ್ಳಿ ಬಸವರಾಜ, ಇಟಗಿ ಬಸವರಾಜಗೌಡ, ಮುಕ್ಕುಂದಿ ಶಿವಗಂಗಮ್ಮ, ಎಸ್.ಬಿ.ಪಾಟೀಲ್, ಸದಾಶಿವಪ್ಪ, ಜಿ.ಲಿಂಗನಗೌಡ, ಬಿ.ಚಂದ್ರಶೇಖರಗೌಡ, ಕೆ.ರೇಣುಕಾಗೌಡ, ಬಿ.ವಿ.ಗೌಡ, ಅಮರಗೌಡ, ಹೊಸಕೋಟೆ ಜಗದೀಶ, ಚಟ್ನಳ್ಳಿ ಶರಣ, ಬಳೆ ಮಲ್ಲಿಕಾರ್ಜುನ, ವಿಜಯಲಕ್ಷ್ಮಿ ಮರಿಶೆಟ್ರು ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.
ಜ.001: ಕಂಪ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಟ್ಟೂರು ಮಹಾಸ್ವಾಮಿ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿ ಅವರು ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.