ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 14: ಈ ಸಮಾಜದ ಬಲವಂತದ ದೇವದಾಸಿ ಅನಿಷ್ಟ ಪದ್ಧತಿಗೆ ನೂಕಲ್ಪಟ್ಟ ದೇವದಾಸಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದರ ಜೊತೆ ಅವರ ಬದುಕಿಗೆ ಸೂಕ್ತ ಬದ್ರತೆ ಒದಗಿಸಲು, ದೇವದಾಸಿ ಮಹಿಳಾ ಸಹಕಾರ ಸಂಘವನ್ನು ನಿಮರ್ಿಸಲಾಗಿದೆ ಎಂದು ಕನರ್ಾಟಕ ದೇವದಾಸಿ ಮುಕ್ತ ಸಂಘದ ಗೌರವ ಅಧ್ಯಕ್ಷ ಯು. ಬವಸರಾಜ್ ಹೇಳಿದರು.
ಹಗರಿಬೊಮ್ಮನಹಳ್ಳಿಯ ರಾಜ್ಯ ದೇವದಾಸಿ ಮಹಿಳಾ ವಿಮೋಚನ ಸಂಘದ ಕಛೇರಿಯಲ್ಲಿ ನೂತವಾಗಿ ಆರಂಭವಾದ ದೇವದಾಸಿ ಮಹಿಳಾ ಸಹಕಾರಿ ಸಂಘ ನಿಯಮಿತವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇವದಾಸಿ ಮಹಿಳೆಯರ ಬದುಕು ನಿಮರ್ಾಣಕ್ಕಾಗಿ ಹತ್ತು ಹಲವಾರು ಹೋರಾಟಗಳನ್ನು ಮಾಡುತ್ತಲೇ ಬಂದಿದ್ದೇವೆ. ಅವರ ನಿರಂತರ ಜಾಗೃತಿಗಾಗಿ ಕಾರ್ಯಕ್ರಮಗಳು ನಡೆಯುತಿದ್ದು, ಎಲ್ಲಾ ದೇವದಾಸಿ ಮಹಿಳೆಯರು ತಮ್ಮ ಪ್ರಮಾಣಿಕ ದುಡಿಮೆಯಿಂದ ಉಳಿದ ಹಣದಿಂದ ಉದ್ದೇಶಿತ ದೇವದಾಸಿ ಮಹಿಳಾ ಸಹಕಾರಿ ನಿಯಮಿತ ರಚಿಸಿಕೊಂಡಿರುವುದು ಸಂತೋಷದ ಸಂಗತಿ ಎಂದರು.
ಸಂಘಟನೆಯ ರಾಜ್ಯಾಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ ಇದು ರಾಜ್ಯದಲ್ಲಿಯೇ ಮೊದಲಬಾರಿಗೆ ಪಟ್ಟಣದಲ್ಲಿ ದೇವದಾಸಿ ಮಹಿಳಾ ಸಹಕಾರಿ ಸಂಘ ಅಸ್ಥಿತ್ವಕ್ಕೆ ಬರುತ್ತಿರುವುದರಿಂದ ಇತಿಹಾಸ ನಿಮರ್ಾಣ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ಬಲ ಪಡಿಸಲು ಸ್ವಾವಲಂಬನೆಯ ಬದುಕು ನಿಮರ್ಾಣಕ್ಕಾಗಿ ಹಂಗಿನ ಬದುಕಿನಿಂದ ಹೊರಬರಲು ದೇವದಾಸಿ ಮಹಿಳಾ ಸಹಕಾರಿ ಸಂಘ ಸ್ಥಾಪಿಸಲಾಗಿದೆ. ದೇವದಾಸಿ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ್ ಮಾತನಾಡಿ, ದೇವದಾಸಿ ಮಹಿಳೆಯರು ಅಬಲೆಯರಲ್ಲ, ಅವರು ಸಬಲರು ಎಂಬುದನ್ನು ಸಮಾಜಕ್ಕೆ ಸಾಬೀತು ಪಡಿಸಲು ದೇವದಾಸಿ ಮಹಿಳಾ ಸಹಕಾರಿ ಸಂಘ ನಿಯಮಿತ ಸ್ಥಾಪಿಸಲಾಗಿದೆ. ಇದರ ಮೂಲಕ ಅವರ ಹೋರಾಟಗಳು ಇನ್ನಷ್ಟು ತೀವ್ರಗೊಳ್ಳಲಿವೆ. ಸ್ವಾವಲಂಭಿಗಳಾಗಿ ಮಹಿಳೆಯರು ತಮ್ಮ ಕಾಲಮೇಲೆ ನಿಲ್ಲಲು ಇಂತಹ ಸಹಕಾರಿ ಸಂಘಗಳು ಅತ್ಯವಶ್ಯಕ ಎಂದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್ ಮಾತನಾಡಿ ದೇವದಾಸಿ ಅನಿಷ್ಠ ಪದ್ದತಿಯನ್ನು ಅಳಿಸಿ ಹಾಕಬೇಕಿದೆ , ದೇವದಾಸಿ ಮಹಿಳೆಯರ ಮಕ್ಕಳ ವಿವಾಹದ ಸಲುವಾಗಿ ಯಾವೊಂದು ಬ್ಯಾಂಕ್ ಅಥವಾ ಯಾರೊಬ್ಬರೂ ಧನ ಸಹಾಯ ಮಾಡದೇ ಸ್ವಾಭಿಮಾನದ ಹಂಗು ತೊರೆದು ಪ್ರಮುಖ ವ್ಯೆಕ್ತಿಗಳ ಮುಂದೆ ಕೈಚಾಚುವ ಕೆಲಸಕ್ಕೆ ವಿರಾಮ ಹಾಡುವಂತೆ ಮಾಡಲು ದೇವದಾಸಿ ಸಹಕಾರಿ ಸಂಘವು ಪ್ರಮುಖ ಪಾತ್ರ ವಹಿಸುತ್ತವೆಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಬಾಸ್ಕರರೆಡ್ಡಿ, ಜಿಲ್ಲಾ ಸಂಚಾಲಕ ಜಂಬಯ್ಯ ನಾಯಕ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಜೆ.ಸತ್ಯಬಾಬು, ಎಚ್.ತಿಪ್ಪಯ್ಯ, ಗಾಳಿ ಬಸವರಾಜ್, ಎಸ್.ಜಗನ್ನಾಥ್, ಆರ್.ಬಸವರಾಜ್, ಸಾಹಿತಿ ಹುರುಕಡ್ಲಿ ಶವಕುಮಾರ್, ಎ.ಸ್ವಾಮಿ, ಬಿ.ಮೈಲಮ್ಮ, ಕೊಟುಗಿ ಮಲ್ಲಿಕಾಜರ್ುನ, ಪಿ.ಚಾಂದ್ಬೀ, ಜಿ.ಸರೋಜಮ್ಮ, ಕೆ.ಅಂಜಿನಮ್ಮ, ಕೆ.ಗಾಳೆಪ್ಪ, ಹೆಚ್.ಮಂಜುನಾಥ, ದೊಡ್ಡಬಸಮ್ಮ, ಹನುಮಕ್ಕ, ತಟ್ಟೆಮ್ಮ, ಜ್ಯೋತಿ, ಹೆಚ್.ಬಸಮ್ಮ, ಈರಮ್ಮ ಹಾಗೂ ಕಮಲಮ್ಮ ಉಪಸ್ಥಿತರಿದ್ದರು. ಸಿ.ಎಂ.ಮಹೇಶ್ವರ ಸ್ವಾಗತಿಸಿದರು. ಜಿ.ಆರ್.ಮಲ್ಲಮ್ಮ ನಿರ್ವಹಿಸಿದರು.