ಗದಗ 7: ಎಪ್ರಿಲ್ದಿಂದ ಡಿಸೆಂಬರ್ 2018 ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 656 ಮಿ.ಮೀಟರ್ ಇದ್ದು ಆ ಪೈಕಿ 456 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ . ಗದಗ ತಾಲೂಕಿನಲ್ಲಿ 518 ಮೀ ಮೀ, ಮುಂಡರಗಿ ತಾಲೂಕಿನಲ್ಲಿ 405 ಮಿ.ಮೀ, ನರಗುಂದದಲ್ಲಿ 411 ಮಿ.ಮೀ, ರೋಣದಲ್ಲಿ 409 ಮಿ.ಮೀ ಹಾಗೂ ಶಿರಹಟ್ಟಿಯಲ್ಲಿ 517 ಮಿ.ಮೀ ಮಳೆಯಾಗಿದೆ. ಶೇ, 30 ರಷ್ಟು ಮಳೆಯ ಕೊರತೆಯಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಭೆಗೆ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಬೆಳಗಾವಿ ವಿಭಾಗದ ಬರ ಪೀಡಿತ ಪ್ರದೇಶದ ಅಧ್ಯಯನ ಪರಿಹಾರ ಹಾಗೂ ನಿರ್ವಹಣೆ ಕುರಿತು ರಾಜ್ಯ ಸಚಿವ ಸಂಪುಟದ ಉಪಸಮಿತಿಯು ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆಯವರ ನೇತೃತ್ವದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಸ್ತೃತ ಮಾಹಿತಿ ನೀಡಿ ಮಾತನಾಡಿದರು.
ಗದಗ ಜಿಲ್ಲೆಯ ಎಲ್ಲ 5 ತಾಲ್ಲೂಕುಗಳನ್ನು ಸಕರ್ಾರದ ಆದೇಶ ರೀತ್ಯ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲ್ಪಟ್ಟಿರುತ್ತದೆ. ಮುಂಗಾರು ಹಂಗಾಮಿನ ಜೂನ-ಸೆಪ್ಟಂಬರ ವರೆಗಿನ ವಾಡಿಕೆ ಮಳೆ 368.3 ಮಿಮಿ.ಗೆ 209.6 ಮಿ.ಮೀ.ನಷ್ಟು ಮಾತ್ರ ಮಳೆಯಾಗಿ ಶೇ.43% ರಷ್ಟು ಮಳೆ ಕೊರತೆಯಾಗಿರುತ್ತದೆ.
ಮುಂಗಾರಿನ ಮಳೆ ಕೊರತೆಯಿಂದ ಕೃಷಿ ಬೆಳಗಳಲ್ಲಿ ಬಿತ್ತನೆ ಗುರಿ 2,40,700 ಹೆಕ್ಟೇರ್ ಪ್ರದೇಶವಿದ್ದು ಆ ಪೈಕಿ 211752 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ . ಕೃಷಿ 1,73,472 ಹೆಕ್ಟೇರ್ ಬೆಳೆ ಹಾನಿ ಆಗಿದೆ.
ಬರ ಪರಿಹಾರ ಕುರಿತು ಕೃಷಿ ಬೆಳೆ ಹಾನಿ, ತೋಟಗಾರಿಕೆ ಬೆಳೆ ಹಾನಿ , ಗೋಶಾಲೆ, ಮೇವುಬ್ಯಾಂಕ್ , ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಟ್ಯಾಂಕರ ಮೂಲಕ ಕುಡಿಯುವ ನೀರು ಸರಬರಾಜಿಗಾಗಿ 160.91 ಕೋಟಿ ರೂ. ಕ್ಲೇಮು ಸಕರ್ಾರಕ್ಕೆ ಸಲ್ಲಿಸಲಾಗಿದೆ. ಹಿಂಗಾರು 263900 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿಯಿದ್ದು ಆ ಪೈಕಿ 229842 ಹೆಕ್ಟೇರ್ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳಾದ ಈರುಳ್ಳಿ, 25186 ಹೆ. ಪ್ರದೇಶ, ಮೆಣಸಿನಕಾಯಿ 13817 ಹೆ.ಪ್ರದೇಶ ಒಟ್ಟು 39003 ಹೆ.ಪ್ರದೇಶ ಮಳೆ ಕೊರತೆಯಿಂದ ಹಾನಿಗೊಳಗಾಗಿದೆ . ಎನ್.ಆರ್.ಡಿ.ಎಫ್. ಮಾರ್ಗಸೂಚಿಅನ್ವಯ ಕೃಷಿ ಬೆಳೆಗಳಿಗೆ 11859.97 ಲಕ್ಷ ರೂ ಹಾಗೂ ತೋಟಗಾರಿಕೆ ಬೆಳೆಗಳಿಗೆ 2852.46 ಲಕ್ಷ ರೂ. ಕ್ಲೇಮು ಸಲ್ಲಿಸಲಾಗಿದೆ. ಪ್ರಸಕ್ತ ಸಾಲಿಗೆ ಅತೀವೃಷ್ಟಿಯಿಂದ ಉಂಟಾದ ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ 284.02 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದ್ದು ಆ ಪೈಕಿ 315 ರೈತರಿಗೆ ಒಟ್ಟು 44,53,380 ರೂ. ಪರಿಹಾರ ವಿತರಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಮುಂಬರುವ ಬೇಸಿಗೆ ದಿನಗಳಲ್ಲಿ ಜಿಲ್ಲೆಯಲ್ಲಿ ಗದಗ ತಾಲೂಕಿನ 6, ಮುಂಡರಗಿಯ 4, ನರಗುಂದದ 2 , ರೋಣದ 9 ಹಾಗೂ ಶಿರಹಟ್ಟಿಯ 10 ಗ್ರಾಮಗಳನ್ನು ಒಟ್ಟಾರೆ 31 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 1629 ಕೊಳವೆ ಬಾವಿಗಳು ಕಾರ್ಯಾಚರಣೆಯಲ್ಲಿರುತ್ತವೆ. ಮಳೆ ಕೊರತೆಯಿಂದಾಗಿ ಕೊಳವೆಬಾವಿಗಳಲ್ಲಿ, ಕುಡಿಯುವ ನೀರಿನ ಕೆರೆಗಳಲ್ಲಿ ಅಂತರ್ಜಲ ಬತ್ತಿಹೋಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾಗಿದೆ. ಈ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಇನ್ನೂ ಹತ್ತು ವಾರದದವರೆಗೆ ಸಾಕಾಗುವಷ್ಟು ಮೇವು ಲಭ್ಯತೆ ಇದ್ದು, ಮುಂಬರುವ ಬೇಸಿಗೆ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಪೂರೈಕೆ, ಲಸಿಕೆ ರಸಾಯನಗಳು ಮುಂತಾದವು ಗಳಿಗೆ ಪಶು ಸಂಗೋಪನ ಇಲಾಖೆಯವರು ರೂ.11.78 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಿರುತ್ತಾರೆ..
ಡಿಬಿಓಟಿ ಯೋಜನೆಯಡಿ ತುಂಗಭದ್ರಾ ಹಾಗೂ ಮಲಪ್ರಭಾ ಜಲಾಶಯಗಳಿಂದ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಹಾಗೂ ಮುಂಡರಗಿ ಪಟ್ಟಣಕ್ಕೆ ನೀರು ಒದಗಿಸಲಾಗುತ್ತಿದೆ. ನರೇಗಲ್ , ರೋಣ, ಗಜೇಂದ್ರಗಡ ಪಟ್ಟಣಗಳಿಗೆ ಬರ ಪರಿಸ್ಥಿತಿಯನ್ನು ನಿಭಾಯಿಸಲು ಡಿಬಿಓಟಿ ಪೈಪ್ ಲೈನ ದಿಂದ ಯೋಜನೆ ಪೈಪ್ ಲೈನ್ ದಿಂದ ನೀರು ಪಡೆಯಲು ಕ್ರಮ ಜರುಗಿಸಲಾಗುತ್ತಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಾಷರ್ಿಕ ಗುರಿ 25.88 ಲಕ್ಷ ಮಾನವ ದಿನಗಳ ಗುರಿ ಇದ್ದು ಆ ಪೈಕಿ ಡಿಸೆಂಬರ್ 18 ರವರೆಗೆ 18.37 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು 79.75 ಕೋಟಿ ರೂ. ವೆಚ್ಚಮಾಡಲಾಗಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.
ರೈತರ ಆತ್ಮ ಹತ್ಯೆ : ಡಿಸೆಂಬರ್ 2018 ರವರೆಗೆ ಗದಗ ತಾಲೂಕಿನ 4 , ಮುಂಡರಗಿಯ 1 , ನರಗುಂದದ 4 , ರೋಣದ 2, ಶಿರಹಟ್ಟಿ 8 ಜನ ಹೀಗೆ ಒಟ್ಟು 19 ರೈತರ ಆತ್ಮ ಹತ್ಯ ಪ್ರಕರಣಗಳು ವರದಿಯಾಗಿದ್ದು ಆ ಪೈಕಿ 12 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ.
ಸಭೆಯಲ್ಲಿ ತೋಟಗಾರಿಕೆ ಸಚಿವ ಎಂ.ಸಿ ಮನಗೂಳಿ, ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದಶರ್ಿ ಗಂಗಾರಾಮ್ ಬಡೇರಿಯಾ, ಶಾಸಕರುಗಳಾದ ಸಿ.ಸಿ.ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ , ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಗದಗ ತಾಲೂಕು ಪಂಚಾಯತ್ ಅಧ್ಯಕ್ಷ ಮೋಹನ ದುರಗಣ್ಣವರ, ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು, ಸದಸ್ಯರು, ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.