ಲೈಫ್ ಗಾರ್ಡ ಸಿಬ್ಬಂದಿ ಮೇಲೆ ಉಪ ನಿರ್ದೇಶಕ ಜಯಂತ ಹಲ್ಲೆ ಪ್ರಕರಣ: ಡಿಸಿಗೆ ದೂರು
ಕಾರವಾರ 30 : ಇಕೋ ಬೀಚ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈಫ್ ಗಾರ್ಡ ಮೇಲೆ ಪ್ರವಾಸೋದ್ಯಮ ಪ್ರಭಾರ ಉಪ ನಿರ್ದೇಶಕ ಹಲ್ಲೆ ನಡೆಸಿರುವುದನ್ನು ಖಂಡಿಸಿ,ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಲೈಫ್‌ಗಾರ್ಡ ಸಿಬ್ಬಂದಿ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.ರವಿವಾರ ಹೊನ್ನಾವರದ ಇಕೋ ಕಡಲ ತೀರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲೈಫ್‌ಗಾರ್ಡ ಸಿಬ್ಬಂದಿ ಒಬ್ಬರಿಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಜಯಂತ ಅವರು ನಿಂದಿಸಿ, ಏಕಾಏಕಿ ಹಲ್ಲೆ ಮಾಡಿದ್ದಾರೆ. ಅಧಿಕಾರಿಗಳೇ ಈ ರೀತಿ ನೆಡದು ಕೊಂಡರೆ ಹೇಗೆ? ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಲೈಫ್ ಗಾರ್ಡ್ಸ್ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.ಅಧಿಕಾರಿ ಹೀಗೆ ಮಾಡಿದರೆ, ಪ್ರವಾಸಿಗರು ಏನು ಬೇಕಾದರೂ ಮಾಡಬಹುದು. 2016 ರಿಂದ ಲೈಫ್ ಗಾರ್ಡ್ಸ್ ಸಿಬ್ಬಂದಿಯನ್ನು ಪ್ರವಾಸಿ ತಾಣಗಳಲ್ಲಿ ನಿಯೋಜಿಸಲಾಗಿದ್ದು, ಯಾರೂ ಕೂಡಾ ಹಲ್ಲೆ ಮಾಡಿರಲಿಲ್ಲ.ಮಳೆ, ಚಳಿ, ಬಿಸಿಲು ಎನ್ನದೇ ನಮ್ಮ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರ ರಕ್ಷಣೆ ಮಾಡಿದ್ದೇವೆ. ಇದುವರೆಗೂ 350ಕ್ಕೂ ಹೆಚ್ಚು ಪ್ರವಾಸಿಗರ ಜೀವ ರಕ್ಷಣೆ ಮಾಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದೇವೆ. ಆದಾಗ್ಯೂ ನಮಗೆ ಯಾವುದೇ ರೀತಿಯ ಆರೋಗ್ಯ ವಿಮೆಯಾಗಲೀ ಭತ್ಯೆಯಾಗಲೀ ಮೂಲ ಸೌಕರ್ಯಗಳಾಗಲೀ ದೊರಕುತ್ತಿಲ್ಲ. ಸಂಬಳ ಹೆಚ್ಚಳದ ಕುರಿತು ಅಧಿಕಾರಿಗಳಲ್ಲಿ ತಿಳಿಸಿದಾಗಲೂ ಯಾವುದೇ ರೀತಿಯ ಧನಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಲೈಫ್ ಗಾರ್ಡ್ ಶಿವಪ್ರಸಾದ್ ಜಿಲ್ಲಾಧಿಕಾರಿಗೆ ವಿವರಿಸಿದರು.ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ರಕ್ಷಣೆಯನ್ನು ಅವಿರತವಾಗಿ ಮಾಡುತ್ತಾ ಬಂದಿರುತ್ತೇವೆ. ಆದರೂವಿನಾ ಕಾರಣ ಅಧಿಕಾರಿ ಜಯಂತ ಅವರು ಹಲ್ಲೆ ಮಾಡಿರುವುದು, ನಿಂದಿಸುವುದು ಸರಿಯಲ್ಲ. ಇಕೊ ಕಡಲತೀರದಲ್ಲಿ ಹಲ್ಲೆಗೊಳಗಾದ ಸಿಬ್ಬಂಗಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರ ಬಳಿ ಮನವಿ ಮಾಡಿ ದರು.ಪ್ರತಿಕ್ರಿಯೆ: ಮನವಿ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ ಘಟನೆಯ ಬಗ್ಗೆ ವಿಚಾರಿಸುವೆ. ಹಲ್ಲೆಗೆ ತುತ್ತಾದ ಸಿಬ್ಬಂದಿ, ಹಾಗೂ ಜಯಂತರನ್ನು ಕರೆಯಿಸಿ ವಿವರಣೆ ಕೇಳುವೆ ಎಂದರು.ಮಾಧ್ಯಮದವರ ಆಕ್ಷೇಪ:ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ತಪ್ಪು ಮಾಹಿತಿ ನೀಡಿ ಅಡ್ಡಿಪಡಿಸಿದ ಜಿಲ್ಲಾಧಿಕಾರಿ ಅಪ್ತಸಹಾಯಕನ ವಿರುದ್ಧ ಮಾಧ್ಯಮದ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ದೂರು ನೀಡಿದರು.