ಕನ್ನಡಕ್ಕೆ ಭದ್ರ ಬುನಾದಿ ಹಾಕಿದವರು ಡೆಪ್ಯೂಟಿ ಚನ್ನಬಸಪ್ಪನವರು

Deputy Channabasappa laid a solid foundation for Kannada

ಕನ್ನಡಕ್ಕೆ ಭದ್ರ ಬುನಾದಿ ಹಾಕಿದವರು ಡೆಪ್ಯೂಟಿ ಚನ್ನಬಸಪ್ಪನವರು 

ಧಾರವಾಡ 05:ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಅಧಿಕಾರ ಹೊಂದಿದ್ದ ‘ಡೆಪ್ಯೂಟಿ ಎಜ್ಯುಕೇಷನಲ್ ಇನ್‌ಸ್ಪೆಕ್ಟರ್‌’ ಹುದ್ದೆಯಲ್ಲಿದ್ದುಕೊಂಡು ಡೆಪ್ಯೂಟಿ ಚನ್ನಬಸಪ್ಪನವರು ಕನ್ನಡ ಭಾಷೆಯ ಬೆಳವಣಿಗೆಗಾಗಿ, ಜೊತೆಗೆ ಎಲ್ಲ ವಿಷಯಗಳನ್ನು ಕನ್ನಡದಲ್ಲಿ ಬೋಧಿಸಲು ಕನ್ನಡ ಪಂಡಿತರಿಂದ ಪಠ್ಯ ಪೂರಕ ಸಾಮಗ್ರಿ ರಚಿಸಿ ಪ್ರಾಥಮಿಕ ಶಾಲೆಗಳಿಗೆ ಪೂರೈಸಿ ಕನ್ನಡ ಕಲಿಕೆಗೆ ಭದ್ರ ಬುನಾದಿ ಹಾಕುವುದರ ಜೊತೆಗೆ ಆಡಳಿತದಲ್ಲಿ ಕನ್ನಡ ಭಾಷಾ ಅನುಷ್ಠಾನ ಸಹಿತ ಹಲವಾರು ಸುಧಾರಣೆಗಳನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದನ್ನು ಸಮಸ್ತ ಕನ್ನಡಿಗರು ಎಂದೂ ಮರೆಯುವಂತಿಲ್ಲ ಎಂದು ಶಾಲಾ ಶಿಕ್ಷಣ  ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ ಅಭಿಪ್ರಾಯಪಟ್ಟರು. 

  ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಏರಿ​‍್ಡಸಿದ್ದ ಧಾರವಾಡದ ಶಾಲಾಶಿಕ್ಷಣ ಸಂಕಥನ ಪುಸ್ತಕ ಲೋಕಾರೆ​‍್ಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.  ಧಾರವಾಡದ ಗಂಡು ಮಕ್ಕಳ ಸರಕಾರಿ ಟ್ರೇನಿಂಗ್ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರಾಗಿ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸುದ್ದಿ, ಸಮಾಚಾರಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೆಂಬ ಮಹದಾಸೆಯಿಂದ ಅಂದಿನ ದಿನಮಾನದಲ್ಲಿ ಇನ್ನೂ ಯವುದೇ ಮುದ್ರಣ ಯಂತ್ರಗಳಾಗಲಿ, ಇಂಟರ್‌ನೆಟ್, ಕಂಪ್ಯೂಟರ್‌ನಂತಹ ವ್ಯವಸ್ಥೆಯಾಗಲಿ ಇದ್ಯಾವುದು ಇಲ್ಲದ ಸಂದರ್ಭದಲ್ಲಿಯೇ ಕೇವಲ ಕಲ್ಲಚ್ಚಿನ ಪದ್ಧತಿಯಂತೆ ಕೈಯಿಂದಲೇ ಬರೆದು 1865ರಲ್ಲಿಯೇ ‘ಮಠಪತ್ರಿಕೆ’ಯನ್ನು ಆರಂಭಿಸಿದರು. ಈ ರೀತಿಯ ಹಲವಾರು ಐತಿಹಾಸಿಕ ಘಟನೆಗಳು ಧಾರವಾಡದ ಶಾಲಾಶಿಕ್ಷಣ ಸಂಕಥನ ಪುಸ್ತಕದಲ್ಲಿ ಅಡಕವಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. 

   ಪುಸ್ತಕ ಲೋಕಾರೆ​‍್ಣ ಮಾಡಿದ ಐಐಟಿ ಡೀನ್ ಮತ್ತು ಹಿರಿಯ ವಿಜ್ಞಾನಿ ಪ್ರೊ.ಎಸ್‌.ಎಂ ಶಿವಪ್ರಸಾದ್ ಮಾತನಾಡಿ, ಇಂದಿನ ವಿಜ್ಞಾನ ಯುಗದಲ್ಲಿ ನ್ಯಾನೋ ಟೆಕ್ನಾಲಜಿ, ಬಯೋಟೆಕ್ನಾಲಜಿ, ಕೃತಕಬುದ್ಧಿಮತ್ತೆ ತುಂಬಾ ನಿರ್ಣಾಯಕ ಪಾತ್ರವನ್ನು ಹೊಂದಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕು ಎಂದರು. ಪುಸ್ತಕ ಪರಿಚಯ ಮಾಡಿದ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಮಾತನಾಡಿ ಶಿವಶಂಕರ ಹಿರೇಮಠ ಅವರ 1961 ರಿಂದ 2020ರವರೆಗಿನ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು ಕೇಂದ್ರಿತ ಸೇವಾ ನೆನಪುಗಳ ಸರಮಾಲೆಯನ್ನು ಈ ಪುಸ್ತಕ ಒಳಗೊಂಡಿರುವುದು ವಿಶೇಷವಾಗಿದೆ. ಇದರಲ್ಲಿ ಲೇಖನಗಳು, ಉಸಿರಾಗಿರುವ ಹಸಿರು, ಬಯಲಾಗಿರುವ ಬೆಳಕು, ಆಯ್ದ ಶಿಹಿ ಬರಹ, ಜೋಡಿ ದೀಪಗಳು ಧಾರವಾಡದ ನೆರಳು ನೀಡುವ ಮರಗಳು, ಶಿಕ್ಷಣ ಸೇವಾಯಾತ್ರೆ, ಶಿಹಿ ಕವನಗಳು ಎಂಬ ಪ್ರಮುಖ ಭಾಗಗಳನ್ನು ಒಳಗೊಂಡಿದ್ದು, ಹಲವಾರು ಚಾರಿತ್ರಿಕ ಅಂಶಗಳು ದಾಖಲಿಸಲ್ಪಟ್ಟಿವೆ ಎಂದರು.  ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಹಾಗೂ ಡಾ.ಎಚ್‌.ಎಫ್‌.ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಸಂಸ್ಥಾಪಕ ಸದಸ್ಯ ಶಿವಶಂಕರ ಹಿರೇಮಠ ಮಾತನಾಡಿ ಪುಸ್ತಕ ರಚನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ​‍್ಿಸಿದರು. 

   ಸಾನಿಧ್ಯವಹಿಸಿದ್ದ ಗದಗ-ಡಂಬಳ ತೋಂಟದಾರ್ಯ ಮಠದ ಶ್ರೀ ಜಗದ್ಗುರು ಡಾ.ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ ಕನ್ನಡಕ್ಕೆ  ಡೆಪ್ಯೂಟಿ ಚನ್ನಬಸಪ್ಪನವರ ಕೊಡುಗೆಗಳನ್ನು ಹಾಗೂ ಶಿವಶಂಕರ ಹಿರೇಮಠ ಅವರು ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾಯಕವೇ ಕೈಲಾಸವೆಂಬ ಆದರ್ಶವನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಿದವರು ಎಂದು ಸ್ಮರಿಸಿದರು. 

  ಶಾಂತಲಾ ಹಿರೇಮಠ, ಎಂ.ಎಂ.ಚಿಕ್ಕಮಠ, ಉಪನಿರ್ದೇಶಕರು (ಅ) ಜಯಶ್ರೀ ಕಾರೇಕರ, ಡಯಟ್‌ನ ಹಿರಿಯ ಮತ್ತು ಕಿರಿಯ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂಧಿ ಉಪಸ್ಥಿತರಿದ್ದರು. ಹೇಮಂತ ಲಮಾಣಿ ಪ್ರಾರ್ಥಿಸಿದರು. ಎಸ್‌.ಬಿ.ಕೊಡ್ಲಿ ಸ್ವಾಗತಿಸಿದರು. ಡಾ.ರೇಣುಕಾ ಅಮಲಝರಿ ನಿರೂಪಿಸಿದರು. ವಿಜಯಲಕ್ಷ್ಮೀ ಅರ್ಕಸಾಲಿ ವಂದಿಸಿದರು.