ಲೋಕದರ್ಶನ ವರದಿ
ಶಿಗ್ಗಾವಿ 27: ಶ್ರೇಷ್ಠ ಸಂವಿಧಾನವನ್ನು ಹೊಂದಿದ ಭಾರತ ಇಡೀ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವವನ್ನು ಹೊಂದಿದ ರಾಷ್ಟ್ರವಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾ ಸಕರ್ಾರ ಎಂಬ ಹಿನ್ನೆಲೆಯಲ್ಲಿ ಇವತ್ತು ನೈಜ ಪ್ರಜಾಸಕರ್ಾರ ಸ್ಥಾಪನೆಯತ್ತ ನಾವೆಲ್ಲರೂ ಹೆಜ್ಜೆಹಾಕಬೇಕಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅದ್ಭುತ ಯಶಸ್ಸನ್ನು ಪಡೆದಿದೆ ಎಂದು ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಕಾರ್ಯದಶರ್ಿ ರಾಜು ಎಂ. ಕುನ್ನೂರ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಯಡಿಯಲ್ಲಿ ಆಯೋಜಿಸಿದ್ದ 70ನೇಯ ಪ್ರಜಾರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇವತ್ತು ಪ್ರತಿಯೊಬ್ಬರು ದೇಶಪ್ರೇಮವನ್ನು ಬೆಳೆಸಿಕೊಂಡು ಸಂವಿಧಾನ ರಕ್ಷಿಸಿ ದೇಶ ಉಳಿಸಬೇಕಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಮಧುಮತಿ ದೇಸಾಯಿ ಮಾತನಾಡಿ ರಾಷ್ಟ್ರದ ಸವರ್ಾಂಗೀಣ ಅಭಿವೃದ್ಧಿಯಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅವರು ಇವತ್ತು ವಿದ್ಯಾಥರ್ಿಗಳಲ್ಲಿ ರಾಷ್ಟ್ರಪ್ರೇಮ ತುಂಬಬೇಕಾದ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರುಗಳಾದ ಜಿ. ಎಂ. ಅರಗೋಳ, ಸಿ. ಟಿ. ಪಾಟೀಲ, ಎಂ. ಬಿ. ನೀರಲಗಿ, ಮುಖಂಡರುಗಳಾದ ಶಿವಪುತ್ರಪ್ಪ ಜಕ್ಕಣ್ಣವರ, ಅಕ್ಷಯ ಹೊಂಬಾಳಿಮಠ ಮುಂತಾದವರು ಇದ್ದರು ವಿದ್ಯಾಥರ್ಿಗಳಿಂದ ಭಾಷಣ, ನೃತ್ಯರೂಪಕಗಳು ಜರುಗಿದವು. ಪ್ರಾರಂಭದಲ್ಲಿ ಕೆ. ಬಸಣ್ಣ ಸ್ವಾಗತಿಸಿದರು, ಅನಿಲ ನಾಯ್ಕರ ವಂದಿಸಿದರು, ಕೆ. ಜಿ. ಮಲ್ಲೂರ ಕಾರ್ಯಕ್ರಮ ನಿರೂಪಿಸಿದರು.