ಹಳೆ ಪಿಂಚಣಿಗಾಗಿ ಒತ್ತಾಯಿಸಿ, ರಾಜ್ಯ ಅ.ನೌಕರರ ಸಂಘದ ಪದಾಧಿಕಾರಿ ಶಿಕ್ಷಣ ಸಚಿವ ಮಧು ಬಂಗಾರ್ಪ ಮನವಿ ಪತ್ರ ಸಲ್ಲಿಕೆ
ಕಂಪ್ಲಿ:19 ಬೆಳಗಾವಿಯ ಸುವರ್ಣಸೌಧ ಅಧೀವೇಶನ ಮುಂಭಾಗದಲ್ಲಿ ಹಳೆ ಪಿಂಚಣಿಗಾಗಿ ಒತ್ತಾಯಿಸಿ, ರಾಜ್ಯ ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಶಿಕ್ಷಣ ಸಚಿವ ಮಧು ಬಂಗಾರ್ಪಗೆ ಮನವಿ ಸಲ್ಲಿಸಿದ್ದೇವೆ ಎಂದು ಇಲ್ಲಿನ ಸಂಘದ ರಾಜ್ಯ ಸಹ ಕಾರ್ಯದರ್ಶಿ ಅಂಬಿಗರ ಮಂಜುನಾಥ ತಿಳಿಸಿದರು. ನಂತರ ಮಾತನಾಡಿ, ರಾಜ್ಯ ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಪಿಂಚಣಿ ನೀಡುವ ಕುರಿತು ಪ್ರಣಾಳಿಕೆಯಲ್ಲಿ ಸರ್ಕಾರ ಪ್ರಕಟಿಸಿದ್ದು ಪಿಂಚಣಿ ನೀಡುವುದು ನಮ್ಮ ಹಕ್ಕಾಗಿದೆ. ಅನುದಾನಿತ ಶಾಲೆಗಳ ಶಿಕ್ಷಕರಿಗೆ ಪಿಂಚಣಿ ಕೊಡುವ ಕುರಿತು ಚರ್ಚೆ ಅಧಿವೇಶನದಲ್ಲಿ ಬಹುದೀರ್ಘ ನಡೆದಿದ್ದು ಪರೀಶೀಲಿಸಿ ಬೇಡಿಕೆ ಈಡೇರಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.80ರಷ್ಟು ಶಿಕ್ಷಕರ ನೇಮಕ ಮಾಡಲಾಗುವುದು. ಪಿಂಚಣಿ ಕೊಡುವುದು ಒಳ್ಳೆಯದಾಗಿದ್ದು ಕ್ಯಾಬಿನೇಟ್‌ನಲ್ಲಿ ಒತ್ತಾಯಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರ್ಪ ತಿಳಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಎಂಎಲ್‌ಸಿ ಶಶೀಲ್ ನಮೋಶಿ,ಸಿಂಧಗಿ ಶಾಸಕ ಅಶೋಕ ಮನಗುಳಿ, ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ, ರಾಜ್ಯ ಗೌರವಾಧ್ಯಕ್ಷ ಎಚ್.ನಾಗರಾಜಪ್ಪ ಬುಕ್ಕಾಂಬುದಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟಾಚಲ, ಪ್ರಧಾನ ಕಾರ್ಯದರ್ಶಿ ಮುತ್ತುರಾಜ್ ಮತ್ತಿಕೊಪ್ಪ, ಕಾರ್ಯದರ್ಶಿ ಲಕ್ಷ್ಮಿಪುತ್ರ ಕೀರನಹಳ್ಳಿ ಸೇರಿ ಪದಾಧಿಕಾರಿಗಳು ಇದ್ದರು.