ಹಾನಿಗೊಳಗಾದ ತೊಗರಿಗೆ ಪರಿಹಾರ ಹಣ ಬಿಡುಗಡೆಗೆ ಆಗ್ರಹ
ವಿಜಯಪುರ, 18 : ಹಾನಿಗೊಳಗಾದ ತೊಗರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಗೆ ಮುಖ್ಯ ಮಂತ್ರಿಗಳ ಬಳಿ ಇರುವ ಕಡತಗಳಿಗೆ ಸಹಿ ಹಾಕಿ ಪರಿಹಾರ ಹಣ ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿ ಹಾಗೂ ಹೂವಿನ ಹಿಪ್ಪರಗಿ ಹೋಬಳಿ ವ್ಯಾಪ್ತಿಗೆ ಬರುವ 10 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆ ಸಂಕನಾಳ ಶಾಖಾ ಕಾಲುವೆಯಿಂದ ಅಂದಾಜು 2 ಕಿ.ಲೋ ಮೀಟರ್ ವರೆಗೆ ವಿತರಣೆ ಕಾಲುವೆ ನಿರ್ಮಿಸಿ ಕಾಲುವೆಗೆ ನೀರು ಹರಿಸಿ ಸುತ್ತ ಮುತ್ತಲಿನ ಹಳ್ಳಿಗಳಾದ ಕಾನ್ನಾಳ, ಅಗಸಬಾಳ, ಸಂಕನಾಳ, ಸೋಲವಾಡಗಿ, ಕಣಕಾಲ ಸೇರಿದಂತೆ ಒಟ್ಟು 8 ಹಳ್ಳಿಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವಿಜಯಪುರ ಇವರ ವತಿಯಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರಿಗೆ ಮಂಗಳವಾರ ವಿಜಯಪುರದ ಮನೆಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ಹವಾಮಾನದ ವೈಪರಿತ್ಯ ಹಾಗೂ ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ 811 ತಳಿಯ ಕಳಪೆ ಬೀಜದಿಂದಾಗಿ ಶೇಕಡಾ 90 ರಷ್ಟು ತೊಗರಿ ಬೇಳೆ ಹಾಳಾಗಿದ್ದು ಇಲ್ಲಿಯವರೆಗೂ ಮದ್ಯಂತರ ಪರಿಹಾರ ಹಣ ಬಿಡುಗಡೆ ಗೊಳಿಸಿಲ್ಲ ಈ ಕುರಿತು ಹಲವಾರು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೆ ಮದ್ಯಂತರ ಪರಿಹಾರ ಹಣ ಬಿಡುಗಡೆ ಗೊಳಿಸಲು ಕಡತಗಳನ್ನು ಮುಖ್ಯಮಂತ್ರಿಗಳಿಗೆ ರವಾನಿಸಲಾಗಿದೆಯೆಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸದ್ಯ ಕಡತಗಳು ಮುಖ್ಯಮಂತ್ರಿಗಳ ಬಳಿ ಇದ್ದು ಅದಕ್ಕೆ ಸಹಿ ಹಾಕಿ ಅನುಮೋದನೆ ಮಾಡಬೇಕು. ಈಗಾಗಲೆ ಮದ್ಯಂತರ ಪರಿಹಾರ ಹಣ ಕಲಬುರಗಿ ಜಿಲ್ಲೆಯ ರೈತರಿಗೆ ಬಂದಿದೆ ಆದರೆ ವಿಜಯಪುರ ಜಿಲ್ಲೆಯ ರೈತರಿಗೆ ಬಿಡಿಗಾಸು ಪರಿಹಾರ ಹಣ ಬಂದಿಲ್ಲ ವಿಜಯಪುರ ಜಿಲ್ಲೆಯ ರೈತರು ಪ್ರತಿ ವರ್ಷ ಒಂದಿಲ್ಲ ಒಂದು ರೀತಿಯಿಂದ ಬೆಳೆ ಹಾನಿ ಅನುಭವಿಸುತ್ತಿದ್ದಾರೆ ಇದರಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿ ರೈತರು ಸಂಪೂರ್ಣ ಹತಾಶಯಗೊಂಡಿದ್ದಾರೆ ಕಾರಣ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ ಬಿತ್ತನೆ ಮಾಡಿ ಹಾನಿಗೊಳಗಾದ ರೈತರಿಗೆ ಕೂಡಲೆ ಮದ್ಯಂತರ ಪರಿಹಾರ ಹಣ ಬಿಡುಗಡೆಗೊಳಿಸಬೇಕು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಡತಗಳಿಗೆ ಸಹಿ ಹಾಕಿ ಅನುಮೋದನೆ ನೀಡಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕೆಂದು ಮಾನ್ಯ ಸಚಿವರಲ್ಲಿ ಒತ್ತಾಯಿಸಿದರು ಹಾಗೂ ಫಸಲ್ ಭಿಮಾ ಯೋಜನೆಯಡಿಯಲ್ಲಿ ವಿಮಾ ತುಂಬಿದ ಜಿಲ್ಲೆಯ ರೈತರಿಗೆ 85 ಕೋಟಿ ಹಣ ಬಿಡುಗಡೆಗೊಳಿಸಲಾಗುವದೆಂದು ಹೇಳಿ ಅದರಲ್ಲಿ ಕೇವಲ 14 ಕೋಟಿ ಮಾತ್ರ ಬಂದಿದೆ. ಬಾಕಿ 71 ಕೋಟಿ ಪರಿಹಾರ ಹಣ ಇನ್ನು ಬಿಡುಗಡೆ ಗೊಳಿಸಿಲ್ಲ. ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ. ಮತ್ತು 85 ಕೋಟಿಯಲ್ಲಿ ಶೇಕಡಾ 90 ರಷ್ಟು ತೊಗರಿ ಪರಿಹಾರಕ್ಕಾಗಿ ಉಳಿದ ಶೇಕಡಾ 10 ರಷ್ಟು ಪರಿಹಾರ ಮೆಕ್ಕೇಜೋಳ ಪರಿಹಾರಕ್ಕೆ ಸರ್ಕಾರ ಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಆದ್ದರಿಂದ ಕೂಡಲೆ ಸರ್ಕಾರ ಪರಿಹಾರ ಹಣವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕೆಂದು ಮಾನ್ಯ ಎಂ.ಬಿ. ಪಾಟೀಲರಿಗೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ ಮಾತನಾಡಿ, 8 ಹಳ್ಳಿಗಳಿಗೆ ನೀರಿನಲ್ಲದೆ ಜಾನುವಾರುಗಳನ್ನು ಮೂರಾ್ನಲ್ಕು ಕಿ.ಲೋ. ಮೀಟರ್ ವರೆಗೆ ನೀರು ಹುಡುಕಿಕೊಂಡು ಹೋಗಬೇಕು. ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ಕೇಳೀದರೆ ಈಗಾಗಲೇ ಅನುಮೋದನೆ ಆಗಿದ್ದು ಟೆಂಡರ್ ಕೂಡಾ ಆಗಿದ್ದು ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ. ಕೂಡಲೇ ಕಾಮಗಾರಿ ಪ್ರಾರಂಭಿಸಿ ಹೂ.ಹಿಪ್ಪರಗಿ ಹೋಬಳಿ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಕೊಡಬೇಕು ಇಲ್ಲದಿದ್ದರೆ ಕೆಬಿಜೆಎನ್‌ಎಲ್ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಾಲಪ್ಪಗೌಡ ಲಿಂಗದಳ್ಳಿ, ಉಮೇಶ ವಾಲೀಕಾರ, ಮಾರುತಿ ಹೂಗಾರ, ಪರಶುರಾಮ ಮುತ್ತಣ್ಣ, ಶಿವಪ್ಪ ವಾಲೀಕಾರ, ಹಣಮಂತ ಕಲಬುರ್ಗಿ, ಶಿವಶರಣ ನಾಗಶೆಟ್ಟಿ, ಬಸವರಾಜ ನಾಗರೆಡ್ಡಿ, ಸೋಮೇಶ ನಾಗರೆಡ್ಡಿ, ಬಸವರಾಜ ನಾಟೀಕಾರ, ಆನಂದ ನಾಗರೆಡ್ಡಿ, ಸಿದ್ಲಿಂಗಪ್ಪ ನಾಗರೆಡ್ಡಿ, ಮಡಿವಾಳಪ್ಪ ನಾಗರೆಡ್ಡಿ, ಸಾಹೇಬಗೌಡ ಹೊಸೂರ, ಯಮನಪ್ಪ ಸರೂರ, ಹೊನ್ನಪ್ಪ ನಾಟೀಕಾರ, ಗುರಲಿಂಗಯ್ಯ ಹಳ್ಳಿಮಠ, ಜೀವಯ್ಯ ತೆಗ್ಗಿನಮಠ, ಹಣಮಂತ ಹಡಪದ, ಬಸವರಾಜ ಹಡಪದ, ಅಶೋಕ ಹಡಪದ, ಮಲ್ಲು ಭಜಂತ್ರಿ, ಸಂಗಮೇಶ ಮೇಟಿ ಮುಂತಾದವರು ಇದ್ದರು.