ನೀರಾವರಿ ಯೋಜನೆಗೆ ಅನುದಾನ ನೀಡಲು ಆಗ್ರಹ
ಹೂವಿನಹಡಗಲಿ 18: ತಾಲೂಕಿನ ರಾಜವಾಳ ಸಮೀಪ ನಿರ್ಮಿಸಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸರ್ಕಾರ ಸಮರ್ಕ ಅನುದಾನ ನೀಡದ ಕಾರಣ ಸರಿಯಾಗಿ ನಿರ್ವಹಣೆ ಇಲ್ಲದೆ ರೈತರ ಭೂಮಿಗಳಿಗೆ ನೀರು ದೊರಕುತ್ತಿಲ್ಲ ಎಂದು ಶಾಸಕ ಕೃಷ್ಣನಾಯ್ಕ ಆರೋಪಿಸಿದರು.ದಲ್ಲಿ ಮಂಗಳವಾರ ವಿಷಯ ಪ್ರಸ್ತಾಪಿದ ಅವರು, ಯೋಜನೆಯ ಬಲದಂಡೆ ಯಲ್ಲಿ ಸುಮಾರು 35,795 ಎಕರೆ ಪ್ರದೇಶಕ್ಕೆ ನೀರು ಪೂರೈಸುವ ಗುರಿ ಇದೆ. ಆದರೆ, ಪೂರ್ಣಪ್ರಮಾಣದಲ್ಲಿ ನೀರು ಹರಿಸಿಲ್ಲ. ಕಾಲುವೆಗಳ ಹೂಳು ತೆರವು ಹಾಗೂ ದುರಸ್ತಿಗೆ ಅನುದಾನವಿಲ್ಲ.
ಗುತ್ತಿಗೆದಾರರನ್ನು ಕಾಡಿಬೇಡಿ ಕೆಲಸ ಮಾಡಿಸಿಕೊಳ್ಳಬೇಕು. ಯೋಜನೆ ಕಾಮಗಾರಿ ಪೂರ್ಣ ಗೊಂಡು 12 ವರ್ಷ ಕಳೆದರೂ ರೈತರ ಹೊಲಗಳಿಗೆ ನೀರು ತಲುಪುತ್ತಿಲ್ಲ. ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದ್ದರೂ ಪೈಪ್ ಲೈನ್ ಸೋರಿಕೆಯಿಂದ ಕೆರೆಗಳಿಗೆ ನೀರು ಸೇರುತ್ತಿಲ್ಲ. ಆದರೆ, ರೈತರೇ ಸ್ವಂತ ಖರ್ಚಿನಲ್ಲಿ ಕೆಲ ಕೆಲಸ ಮಾಡಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಗುಂಡಿ ಬಿದ್ದರಸ್ತೆಗಳು, ಸೋರುತ್ತಿರುವ ಶಾಲೆಗಳ ಕಟ್ಟಡ, ಪೂರ್ಣ ಗೊಳದ ಬಸ್ನಿಲ್ದಾಣ ಕಾಮಗಾರಿಗಳಿಗೆ ಅನುದಾನವೇ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೇವಾಲಾಲ್ ಭವನದ ಹಣ ದುರ್ಬಳಕೆ: ಹೂವಿನಹಡಗಲಿ ಪಟ್ಟಣದ ಸೇವಾಲಾಲ್ ಭವನ ನಿರ್ಮಾಣವಾಗಿದೆ. ಅದರ ಬಾಡಿಗೆ ಹಣವನ್ನು ಖಾಸಗಿ ಟ್ರಸ್ಟ್ಗೆ ಜಮಾ ಮಾಡಲಾಗಿದೆ. ಮದುವೆ ಹಾಗೂ ಇತರ ಕಾರ್ಯಕ್ರಮಗಳು ನಿರಂತರವಾಗಿ ನಡೆದರೂ ಬಾಡಿಗೆ ಲೆಕ್ಕವನ್ನು ಸರಿಯಾಗಿ ತೋರಿಸಿಲ್ಲ. ಹೀಗಾಗಿ ಬಾಡಿಗೆ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಆರೋಪಿಸಿದಾಗ ಸಮಾಜ ಕಲ್ಯಾಣ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿ, ಸರ್ಕಾರದ ಪ್ರತಿನಿಧಿ ಇರುವ ಹೊಸ ಸಮಿತಿ ರಚಿಸಿ ಹಣಕಾಸಿನ ಜವಾಬ್ದಾರಿಗಳನ್ನು ವಹಿಸಲಾಗುವುದು ಎಂದು ತಿಳಿಸಿದರು