ಸಂಗೊಳ್ಳಿ ರಾಯಣ್ಣ ವೃತ್ತ ಸ್ಥಾಪನೆಗೆ ಆಗ್ರಹ
ಕಂಪ್ಲಿ 12: ಪಟ್ಟಣದ ಪುರಸಭೆ ಕಛೇರಿಯಲ್ಲಿ ನೂತನ ಅಧ್ಯಕ್ಷ ಭಟ್ಟ ಪ್ರಸಾದ್ ಇವರಿಗೆ ತಾಲೂಕು ಹಾಲುಮತ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು. ಹಾಲುಮತ ಸಮಾಜದ ಖಜಾಂಚಿ ಬಿ.ಶೇಖರ ಮಾತನಾಡಿ, ಕಂಪ್ಲಿ ಪಟ್ಟಣದ ಅಭಿವೃದ್ಧಿಗೆ ಹಾಲುಮತ ಸಮಾಜವು ಸಂಪೂರ್ಣವಾಗಿ ಕೈಜೋಡಿಸಲಾಗುತ್ತದೆ. ಇಲ್ಲಿನ 5ನೇ ವಾರ್ಡಿನ ಭೀರಲಿಂಗೇಶ್ವರ ದೇವಸ್ಥಾನದಲ್ಲಿರುವ ಕಾಲೋನಿಗೆ ಭೀರಲಿಂಗೇಶ್ವರ ನಗರವೆಂದು ನಾಮಕರಣ ಮಾಡಬೇಕು. ಮತ್ತು ಸಮಾಜಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಸಮಾಜವು ಆರ್ಥಿಕ, ಶೈಕ್ಷಣಿಕ. ಸಾಮಾಜಿಕವಾಗಿ ಹಿಂದುಳಿದಿದ್ದು, ಸೌಲಭ್ಯಗಳನ್ನು ಕಲ್ಪಿಸಿದ್ದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಹಳೆ ಬಸ್ ನಿಲ್ದಾಣ ಬಳಿಯ ಕುರುಗೋಡ್ ರಸ್ತೆ ಬಳಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಿಸಿ, ಮೂರ್ತಿ ಸ್ಥಾಪಿಸಬೇಕು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕುರಿಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ, ಶಿಕ್ಷಕ ಭೀರಲಿಂಗಪ್ಪ, ಮುಖಂಡರಾದ ಕುರಿ ಹುಸೇನಪ್ಪ, ಕೆ.ಯಮನೂರ್ಪ, ಕುರಿ ಮಂಜುನಾಥ, ಮೂಲೆಮನೆ ಮಂಜುನಾಥ, ಬಿಂಗಿ ಸೀನಪ್ಪ, ಷಣ್ಮುಕಪ್ಪ ಸೇರಿದಂತೆ ಇತರರು ಇದ್ದರು. ಫೆ.001: ಪಟ್ಟಣದ ಪುರಸಭೆ ಕಛೇರಿಯಲ್ಲಿ ನೂತನ ಅಧ್ಯಕ್ಷ ಭಟ್ಟ ಪ್ರಸಾದ್ ಇವರಿಗೆ ತಾಲೂಕು ಹಾಲುಮತ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು.