ಶಿಥಿಲಗೊಂಡ ಶಾಲಾ ಕಟ್ಟಡ ನೆಲಸಮಗೊಳಿಸಿ: ಮೇಜರ್ ಸಿದ್ದಲಿಂಗಯ್ಯ ಆದೇಶ


ಧಾರವಾಡ, ನ.20 : ವಿದ್ಯಾಥರ್ಿಗಳ ಪ್ರಾಣ ರಕ್ಷಣೆಯ ಮುನ್ನಚ್ಚರಿಕೆಯ ಕ್ರಮವಾಗಿ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿಮರ್ಾಣಕ್ಕೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಓ) ಅವರು ಅಗತ್ಯ ಕ್ರಮಕೈಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಆದೇಶಿಸಿದರು.

ಅವರು ನಗರದ ಕನರ್ಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದಶರ್ಿಗಳು ಈಗಾಗಲೇ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದಶರ್ಿಗಳಿಗೆ ಪತ್ರ ಬರೆದು, ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ತಕ್ಷಣ ನೆಲಸಮಗೊಳಿಸಿ ಅಲ್ಲಿ ಹೊಸ ಕಟ್ಟಡಗಳ ನಿಮರ್ಾಣಕ್ಕೆ ಮುಂದಾಗುವಂತೆ ಸೂಚಿಸಿದ್ದಾರೆ. ಹಾಗಾಗಿ ಅಧಿಕಾರಿಗಳು ಶಾಲಾ ಕಟ್ಟಡಗಳ ರಕ್ಷಣಾತ್ಮಕ ಸವರ್ೆ ನಡೆಸಿ ಪೂರಕ ಕ್ರಮಗಳನ್ನು ಕೈಕೊಳ್ಳಬೇಕೆಂದು ಸೂಚಿಸಿದರು.

ವೈಚಾರಿಕ ನೆಲೆಯ ಪ್ರವಾಸಗಳಿರಲಿ : ಶಾಲಾ ವಿದ್ಯಾಥರ್ಿಗಳಿಗೆ ಏರ್ಪಡಿಸುವ ಶೈಕ್ಷಣಿಕ ಪ್ರವಾಸಗಳು ಶಾಲಾ ಮಕ್ಕಳಲ್ಲಿ ವೈಚಾರಿಕತೆ, ವೈಜ್ಞಾನಿಕ ಅನ್ವೇಷಣೆ, ಸಂಶೋಧನೆ, ಕಲೆ-ವಾಸ್ತುಶಿಲ್ಪ ವೀಕ್ಷಣೆ, ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿ ನಡೆಯಬೇಕು. ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಂತಹ ಕಲಿಕಾ ಪೂರಕ ಸ್ಥಳಗಳಿಗೆ, ವಿಶ್ವವಿದ್ಯಾಲಯಗಳಿಗೆ, ಸಂಶೋಧನಾ ಕೇಂದ್ರಗಳಿಗೆ ವಿದ್ಯಾಥರ್ಿಗಳನ್ನು ಕರೆದೊಯ್ದು ಅವರ ಜ್ಞಾನಾರ್ಜನೆಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು ಎಂದರು.

'ಸಕಾಲ' ಸೇವೆಗಳ ಅಡಿ ದಾಖಲಾದ ಪ್ರಕರಣಗಳು ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ನರೇಗಾ ಯೋಜನೆಯಡಿ ಸರಕಾರಿ ಶಾಲೆಗಳಿಗೆ ಅಗತ್ಯ ಆಟದ ಮೈದಾನ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಪಂಚಾಯತಿಗೆ ಸಲ್ಲಿಸಬೇಕು. ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಸರಕಾರ ವಿಧಿಸಿರುವ ನಿಯಮಗಳು ಉಲ್ಲಂಘನೆಯಾಗದಂತೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು. ನಿಯಮ ಉಲ್ಲಂಘನೆಯಾದರೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಕೊಳ್ಳಲಾಗುವುದೆಂದು ಮೇಜರ್ ಸಿದ್ದಲಿಂಗಯ್ಯ ಎಚ್ಚರಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ರಾಜ್ಯ ಸಮಗ್ರ ಶಿಕ್ಷಣ ಅಭಿಯಾನದ ಗುಣಮಟ್ಟ ನಿದರ್ೆಶಕ ನಾಗೇಂದ್ರ ಮಧ್ಯಸ್ಥ ಮಾತನಾಡಿ, ಎಲ್ಲ ಸರಕಾರಿ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ರಚನೆಯಾಗುವಂತೆ ಕ್ರಮಕೈಕೊಂಡು ವರದಿ ಸಲ್ಲಿಸಬೇಕು. 2019ರ ಜನವರಿ ಮತ್ತು ಫೆಬ್ರ್ರುವರಿಯಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಿಗೆ ತರಬೇತಿ ನೀಡಲಾಗುವುದು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ವಿದ್ಯಾಥರ್ಿಗಳ ಕಲಿಕಾ ಗುಣಮಟ್ಟ ವಧರ್ಿಸಲು ವ್ಯಾಪಕ ಚಿಂತನೆ ಎಲ್ಲೆಡೆ ನಡೆಯಬೇಕು ಎಂದರು.

ಸಿಸ್ಲೆಪ್-ಕನರ್ಾಟಕ ಸಂಸ್ಥೆಯ ನಿದರ್ೆಶಕ ಬಿ.ಎಸ್. ರಘುವೀರ, ಇಲಾಖೆಯ ಜಂಟಿ ನಿದರ್ೆಶಕ ಡಾ. ಬಿ.ಕೆ.ಎಸ್. ವರ್ಧನ್, ಬೆಳಗಾವಿ ಸಿಟಿಇ ಪ್ರಿನ್ಸಿಪಾಲ್ ಮಮತಾ ನಾಯಕ, ಜಮಖಂಡಿ ಸಿಟಿಇ ಪ್ರಿನ್ಸಿಪಾಲ್ ರಾಜು ನಾಯಕ, ವಿಜಯಪೂರ, ಬಾಗಲಕೋಟ, ಉತ್ತರಕನ್ನಡ, ಗದಗ, ಧಾರವಾಡ, ಹಾವೇರಿ, ಬೆಳಗಾವಿ, ಚಿಕ್ಕೋಡಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳ ಎಲ್ಲ ಆಡಳಿತ ಹಾಗೂ ಅಭಿವೃದ್ಧಿ ಉಪನಿದರ್ೆಶಕರು, 59 ಜನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಗ್ರ ಶಿಕ್ಷಣ ಅಭಿಯಾನದ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.

ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿದರು. ರಾಜ್ಯ ಸಮಗ್ರ ಶಿಕ್ಷಣ ಅಭಿಯಾನದ ಗುಣಮಟ್ಟ ನಿದರ್ೆಶಕ ನಾಗೇಂದ್ರ ಮಧ್ಯಸ್ಥ ಹಾಗೂ ಇಲಾಖೆಯ ಜಂಟಿ ನಿದರ್ೆಶಕ ಡಾ. ಬಿ.ಕೆ.ಎಸ್. ವರ್ಧನ್ ಇದ್ದಾರೆ.