ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರಿಕರಣ ಮಾಡಿದ ರೂವಾರಿ ಎಸ್‌.ಎಂ. ಕೃಷ್ಣಾ: ಪಾಟೀಲ

Decentralized power to panchayats Ruwari S.M. Krishna: Patil

ಪಂಚಾಯಿತಿಗಳಿಗೆ ಅಧಿಕಾರ ವಿಕೇಂದ್ರಿಕರಣ ಮಾಡಿದ ರೂವಾರಿ ಎಸ್‌.ಎಂ. ಕೃಷ್ಣಾ: ಪಾಟೀಲ  

ರಾಣೇಬೆನ್ನೂರು 12: ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರ ಜೊತೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಎಸ್‌.ಸಿ, ಎಸ್‌.ಟಿ ಜನಾಂಗದ ಪ್ರತಿನಿಧಿಗಳಿಗೆ ಅಧಿಕಾರ ಹಂಚಿಕೆಯಾಗಬೇಕೆನ್ನುವ ಅಧಿಕಾರ ವಿಕೇಂದ್ರಿಕರಣ ಮಾಡುವುದಕ್ಕಾಗಿ ಆಗ ಗ್ರಾಮೀಣ ನೀರು ಸರಬರಾಜು ಸಚಿವರಾಗಿದ್ದು ಕೆ.ಬಿ. ಕೋಳಿವಾಡರ ನೇತೃತ್ವದಲ್ಲಿ ಧಾರವಾಡ ತಾಲೂಕಿನ ಬೇಲೂರು ಗ್ರಾ.ಪಂ. ಹದ್ದಿನಲ್ಲಿ ಪರಿಶಿಷ್ಟ ಜಾತಿಯ ಕರಿಯವ್ವ ಎಂಬ ಗ್ರಾ.ಪಂ. ಅಧ್ಯಕ್ಷಿಣಿಯ ಅಧ್ಯಕ್ಷತೆಯಲ್ಲಿ ಎ.ಐ.ಸಿ.ಸಿ. ಆಗಿನ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯರನ್ನು ಕರೆಯಿಸಿ ಆಗ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣಾರವರು ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಅಧಿಕಾರದ ಕೊಡುಗೆ ಅಪಾರ ಎಂದು ರೈತ ಮುಖಂಡ ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು.  

     ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎಸ್‌.ಎಂ. ಕೃಷ್ಣಾರವರು ರಾಜ್ಯಕ್ಕೆ ನೀಡಿದ ಅಪಾರ ಕೊಡುಗೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಬೇಕೆನ್ನುವ ‘ಬೇಲೂರು ಘೋಷಣೆ’ ಘೋಷಣೆ ಕೂಡಾ ಒಂದಾಗಿದೆ. ಕೆ.ಬಿ.ಕೋಳಿವಾಡರು ವಿಧಾನ ಸಭೆಗೆ ಸ್ಪರ್ಧಿಸಿದ್ದ 10 ಚುನಾವಣೆಳಲ್ಲೂ ಪ್ರತಿ ಬಾರಿಯೂ ರಾಣೇಬೆನ್ನೂರಿಗೆ ಬಂದು ಚುನಾವಣಾ ಪ್ರಚಾರ ನಡೆಸಿದ್ದು ಒಂದುಕಡೆಯಾದರೆ ‘ಪಾಂಚಜನ್ಯ’ ಯಾತ್ರೆಯಲ್ಲೂ ಕೂಡಾ ರಾಣೇಬೆನ್ನೂರಿನಲ್ಲಿ ಬೃಹತ್ ರೋಡ್ ಶೋ ಮಾಡಿ ಮತದಾರರ ಗಮನ ಸೆಳೆದಿದ್ದರು ಎಂದು ಹೇಳಿದ ಪಾಟೀಲರು ಅವರ ಜೊತೆಗಿರುವ ಒಂದು ಅಪರೂಪದ ಭಾವಚಿತ್ರವನ್ನು ಹಂಚಿಕೊಂಡು ಎಸ್‌.ಎಂ. ಕೃಷ್ಣಾರವರು ಇಂದು ನಮ್ಮ ಅಗಲಿರಬಹುದು ಆದರೆ ಅವರ ಕೊಡುಗೆಗಳು ಸದಾ ನಮ್ಮ ಜೊತೆಯಲ್ಲಿವೆ ಎಂದರು.