ಅಪರಿಚಿತ ವ್ಯಕ್ತಿ ಸಾವು: ವಾರಸುದಾರರ ಪತ್ತೆಗೆ ಮನವಿ

Death of unknown person: appeal to trace heirs

ಅಪರಿಚಿತ ವ್ಯಕ್ತಿ ಸಾವು: ವಾರಸುದಾರರ ಪತ್ತೆಗೆ ಮನವಿ 

 ಕಾರವಾರ 20:  ಜ.18 ರಂದು ಕಾರವಾರದ ಬಸ್ ನಿಲ್ದಾಣದ ಎದುರುಗಡೆ ಇರುವ ದ್ವಿಚಕ್ರ ವಾಹನ ರಿಪೇರಿ ಮಾಡುವ ಅಂಗಡಿಯ ಹತ್ತಿರ ಯಾವುದೋ ಕಾಯಿಲೆಯಿಂದ ಮೃತಪಟ್ಟ ವ್ಯಕ್ತಿ ಪತ್ತೆಯಾಗಿದ್ದು, ಆತನ  ಪ್ಯಾಂಟ್ ಜೇಬಿನಲ್ಲಿ ಜಿಲ್ಲಾ ಆಸ್ಪತ್ರೆ ಕಾರವಾರದ ಹೊರ ರೋಗಿ ಚೀಟಿ ದೊರಕ್ಕಿದ್ದು, ಅದರಲ್ಲಿ ಮಂಜುನಾಥ ಬಂಡಿ ವಡ್ಡರ ಸಾ: ಕಾರವಾರ ಅಂತಾ ನಮೂದು ಆಗಿರುತ್ತದೆ. 

 ಇತನ ಬಗ್ಗೆ ವಿಚಾರಿಸಿದ್ದು, ಸದ್ರಿ ವ್ಯಕ್ತಿ ಯಾವ ಊರಿನವನು ಅಂತಾ ತಿಳಿದು ಬಂದಿರುವುದಿಲ್ಲಾ ಈ ವ್ಯಕ್ತಿಯ ಪರಿಚಯ ಇದ್ದವರು ಹಾಗೂ ಉತ್ತರಕನ್ನಡ ಜಿಲ್ಲೆಯ ಠಾಣಾ ವ್ಯಾಪ್ತಿಯ ಬೀಡ್ ಸಿಬ್ಬಂದಿಯವರು ಈ ಮೃತ ವ್ಯಕ್ತಿಯ ವಾರಸುದಾರ ಮಾಹಿತಿ ಇದ್ದಲ್ಲಿ ಕಾರವಾರ ಶಹರ ಠಾಣೆ ದೂರವಾಣಿ ಸಂಖ್ಯೆ:08382226333 ಅಥವಾ ಪೊಲೀಸ್ ನೀರಿಕ್ಷಕರು ದೂರವಾಣಿ ಸಂಖ್ಯೆ: 94808805230 ಸಂಪರ್ಕಿಸುವಂತೆ  ಶಹರ ಠಾಣೆಯ ಕಾರವಾರ ಪೊಲೀಸ್ ನೀರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.