ದಾಂಡೇಲಿ ತಾಲೂಕು ಕಾರ್ಯರೂಪಕ್ಕೆ ಮೊದಲ ಪ್ರಯತ್ನ

ದಾಂಡೇಲಿ27: ಶುಕ್ರವಾರ ದಿ.26 ರಂದು ದಾಂಡೇಲಿ ನಗರಕ್ಕೆ ಹಳಿಯಾಳ ತಹಶೀಲದಾರ ರತ್ನಾಕರ, ತಾಲೂಕು ಪಂಚಾಯತ ಅಧಿಕಾರಿ ಮಹೇಶ, ಜೋಯಿಡಾ ತಾಲೂಕು ಪಂಚಾಯತ ಅಧಿಕಾರಿ ಪ್ರಕಾಶ ಹಾಲನ್ನವರ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ದಾಂಡೇಲಿ ನಗರಸಭೆಯ ಪೌರಾಯುಕ್ತ ಆರ್.ವಿ.ಜತ್ತಣ್ಣಾ, ದಾಂಡೇಲಿಯ ವಿಶೇಷ ತಹಶೀಲದಾರ ಶ್ರೀಶೈಲ್ ಪರಮಾನಂದ ಹಾಗೂ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಚಚರ್ಿಸಿ ದಾಂಡೇಲಿ ತಾಲೂಕಿಗೆ ಬರಬೇಕಾದ ವಿವಿಧ ಇಲಾಖೆಗಳ ಕಛೇರಿಗಳಿಗಾಗಿ ಪ್ರಮುಖ ನಿಧರ್ಾರಗಳನ್ನು ಕೈಗೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಬಂಗೂರನಗರ ಶಾಲೆ ಆವರಣದಲ್ಲಿ ಪ್ರಾರಂಭಿಸಲು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಛೇರಿಯ ಮತ್ತು ಕೃಷಿ ಇಲಾಖೆಯ ಕಛೇರಿಯನ್ನು ಹಳೇ ನಗರಸಭೆಯ ಕಟ್ಟಡದಲ್ಲಿ ಪ್ರಾರಂಭಿಸಲು ತಿಮರ್ಾನಿಸಲಾಯಿತು, ಸಮಾಜ ಕಲ್ಯಾಣ ಇಲಾಖೆ ಕಛೇರಿಯು ಅವರ ಇಲಾಖೆಯಿಂದ ನಡೆಸುತ್ತಿರುವ ಹಾಸ್ಟೆಲ್ನಲ್ಲಿ ಪ್ರಾರಂಭಿಸುವದು, ಪಿ.ಡಬ್ಲೂ.ಡಿ ಕಛೇರಿಯು ಪಿ.ಡಬ್ಲೂ.ಡಿ ಇಲಾಖೆಯ ಐ.ಬಿ.ಯಲ್ಲಿ ಪ್ರಾರಂಭಿಸುವುದೆಂದು ನಿಧರ್ಾರ ಕೈಗೊಳ್ಳಲಾಯಿತು.  ಉಪ ನೊಂದಣಾಧಿಕಾರಿ ಮತ್ತು ಸವರ್ೆ ಇಲಾಖೆಯ ಕಛೇರಿಗಳನ್ನು ಪ್ರಾರಂಭಿಸಲು ಕಟ್ಟಡಗಳನ್ನು ವೀಕ್ಷಿಸಲಾಗುತ್ತಿದೆ. ಅಲ್ಲದೇ ಶನಿವಾರ ಅಕ್ಟೋಬರ.20 ರಂದು ಎಮ್.ಎಲ್.ಸಿ ಘೋಟ್ನೇಕರವರ ಜೊತೆ ಚಚರ್ಿಸಿದ ಪ್ರಕಾರ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಆಹಾರ ನೀರಿಕ್ಷಕರು ದಾಂಡೇಲಿಗೆ ಬರುವ ಕೆಲಸ ಈಗಾಗಲೇ ಪ್ರಾರಂಭಿಸಲಾಗಿದೆ. ಇನ್ನೂ ಬೇರೆ ಬೇರೆ ಇಲಾಖೆಗಳ ಕಛೇರಿಗಳನ್ನು ಆದಷ್ಟು ಬೇಗನೆ ಪ್ರಾರಂಭಿಸುವಂತೆ ಬಂದಂತಹ ಅಧಿಕಾರಿಗಳಿಗೆ ಕೇಳಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಮ್ ಖಾನ್, ಅಶೋಕ ಪಾಟೀಲ, ಅಬ್ದುಲ್ ವಾಹಬ ಬಾಂಸರಿ, ಎಸ್.ಎ. ಕೋನಾಪುರಿ, ಅಬ್ದುಲ್ ರಜಾಕ್ ಜುಂಜುವಾಡಕರ, ಎಮ್.ಎಸ್.ನಾಯ್ಕ ಉಪಸ್ಥಿತರಿದ್ದರು.