ಬೆಂಗಳೂರು 5: ಕೇಂದ್ರದಲ್ಲಿ ರಾಜ್ಯದ ದಲಿತ ಸಂಸದರನ್ನು ಮಂತ್ರಿ ಮಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ, ತಾಕತ್ತಿದ್ದರೆ ದಲಿತ ವ್ಯಕ್ತಿಯನ್ನು ರಾಜ್ಯದಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ನೂತನವಾಗಿ ಆಯ್ಕೆಯಾದ ಬಿಜೆಪಿಯ 25 ಸಂಸದರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಏಳಕ್ಕೆ ಏಳು ಮೀಸಲು ಕ್ಷೇತ್ರವನ್ನು ಗೆದ್ದರೂ ಒಬ್ಬರನ್ನೂ ಮಂತ್ರಿ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಕೇಂದ್ರದಲ್ಲಿ ದಲಿತ ಮುಖಂಡರನ್ನು ಮಂತ್ರಿ ಮಾಡುವ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ. ತಾಕತ್ತಿದ್ದರೆ ದಲಿತ ಮುಖ್ಯಮಂತ್ರಿ ಮಾಡಿ ತೋರಿಸಿ ಎಂದು ಸಿದ್ದರಾಮಯ್ಯಗೆ ಸವಾಲೆಸಿದಿದ್ದಾರೆ.
ರಾಜ್ಯದಲ್ಲಿ ಬರ ಇದೆ. ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಅಲ್ಲಿಗೆ ಹೋಗಲಿಲ್ಲ. ವಿಧಾನಸೌಧ ಖಾಲಿ ಖಾಲಿ ಇದೆ. ಇಂತಹ ಸ್ಥಿತಿಯಲ್ಲಿ ನಾವು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ.ಈ ಸರಕಾರ ಜಿಂದಾಲ್ ಗೆ 3667 ಎಕರೆ ಭೂಮಿ ನೀಡಿ ಲೂಟಿ ಮಾಡುವ ಕೆಲಸ ಮಾಡುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ. ಯಾವ ಕಾರಣಕ್ಕೂ 15-20 ಕೋಟಿ ಪ್ರತಿ ಎಕರೆ ಮೌಲ್ಯದ ಭೂಮಿ ಮಾರಾಟ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ಶಾಸಕಾಂಗ ಸಭೆಯಲ್ಲಿ ಇಂದು ತೀಮರ್ಾನ ಮಾಡುತ್ತೇವೆ ಎಂದರು.
ರಾಜ್ಯದ ಮತದಾರರು ಜಾಗೃತರಾಗಿದ್ದಾರೆ. ಕುಮಾರಸ್ವಾಮಿ ಅವರ ಕುಟುಂಬದ ಬುಡುಬುಡಿಕೆ ನಾಟಕವನ್ನು ಒಪ್ಪಲ್ಲ. ಇದರಿಂದ ನಮ್ಮ ಶಾಸಕರು, ಸಂಸದರಿಗೆ ಒಂದೊಂದು ದಿನವೂ ಅಗ್ನಿ ಪರೀಕ್ಷೆಯ ಕಾಲವಾಗಿದೆ. ಬರಗಾಲವನ್ನು ನೋಡಲು ಇಷ್ಟವಿಲ್ಲದ ಈ ಮುಖ್ಯಮಂತ್ರಿ ಒಂದು ವರ್ಷದ ಕಾಲ ಪಂಚತಾರ ಹೊಟೇಲ್ ನಲ್ಲಿ ಇದ್ದರು. ಈಗ ಶಾಲೆಗೆ ಹೋಗಿ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಹಿಂದೆ ಇವರು ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳ ಉದ್ಧಾರ ಆಗಿದೆಯೇ? ಆ ಗ್ರಾಮಗಳ ಅಭಿವೃದ್ದಿಗೆ ಹಣ ಕೊಡುವುದಾಗಿ ಬುರುಡೆ ಬಿಟ್ಟರಲ್ಲಾ ಅದು ಆಗಿದೆಯೇ? ಈ ಸುಳ್ಳಿನ ಕಾರಣಕ್ಕೆ ಅಪ್ಪ-ಮಗ ಇಬ್ಬರೂ ಹೀನಾಯವಾಗಿ ಸೋತಿದ್ದಾರೆ ಎಂದು ಛೇಡಿಸಿದ್ದಾರೆ.
ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಾತನಾಡಿ, ರಾಜ್ಯದ ಮುಂದಿನ ಎಲ್ಲಾ ಆಗು ಹೋಗುಗಳಿಗೆ ನೀವು ಜವಾಬ್ದಾರಿ ಎನ್ನುವ ಸಂದೇಶವನ್ನು ರಾಜ್ಯದ ಜನರು ನೀಡಿದ್ದಾರೆ.ಇಂದಿಲ್ಲಿ ಸನ್ಮಾನದ ಮೂಲಕವೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.
ರಾಜ್ಯ ಸರಕಾರದ ಜೊತೆ ಬಿಜೆಪಿ ರಾಜಕೀಯ ಸಂಘರ್ಷ ಮಾಡುವುದಿಲ್ಲ. ರಾಜ್ಯ ಸಕರ್ಾರ ಸಕಾರಾತ್ಮಕವಾಗಿ ಹೆಜ್ಜೆ ಇಟ್ಟರೆ ಅದಕ್ಕೆ ಪೂರಕವಾಗಿ ಕೇಂದ್ರ ಸ್ಪಂದಿಸಲಿದೆ. ನಾವು ಅದಕ್ಕೆ ಸಹಕಾರ ನೀಡಲಿದ್ದೇವೆ ಎಂದು ರಾಜ್ಯ ಸಕರ್ಾರಕ್ಕೆ ಪರೋಕ್ಷ ಸಂದೇಶ ರವಾನಿಸಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾತನಾಡಿ, ಅಮೆರಿಕ ಅಧ್ಯಕ್ಷರು ಯಾರಾಗ್ತಾರೆ ಎಂದು ಜಗತ್ತು ಕಾತುರದಿಂದ ನೋಡುತ್ತಿತ್ತು. ಆದರೆ ಈ ಬಾರಿ ಭಾರತದ ಪ್ರಧಾನಿ ಯಾರಾಗಲಿದ್ದಾರೆ ಎಂದು ಕುತೂಹಲ ಹಾಗೂ ಕಾತುರದಿಂದ ವಿಶ್ವವೇ ನೋಡುವ ಸ್ಥಿತಿ ನಿಮರ್ಾಣವಾಗಿತ್ತು ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಅರವಿಂದ ಲಿಂಬಾವಳಿ ಮಾತನಾಡಿ, ಈಗ ನಮ್ಮ ಜವಾಬ್ದಾರಿ ಹೆಚ್ಚಿದೆ. ಕನರ್ಾಟಕದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ನಮ್ಮ ಸಂಸದರು ಈಗಾಗಲೇ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯದ ಏಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯಥರ್ಿಗಳು ಗೆದ್ದಿದ್ದಾರೆ.ಅಂದರೆ ದಲಿತರೂ ಸಹ ಬಿಜೆಪಿ ಪರವಾಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಮಂಡ್ಯದಲ್ಲಿ ನಮ್ಮ ಪಕ್ಷದ ಅಭ್ಯಥರ್ಿಯನ್ನೇ ನಿಲ್ಲಿಸಬೇಕು ಎಂಬ ಒತ್ತಾಯವಿತ್ತು. ಆದರೆ ಪಕ್ಷೇತರ ಅಭ್ಯಥರ್ಿಯನ್ನು ಬೆಂಬಲಿಸಬೇಕು ಎಂದು ಪಕ್ಷದ ವರಿಷ್ಠರು ನಿರ್ಧರಿಸಿದರು. ಪರಿಣಾಮ ನಮ್ಮ ಬೆಂಬಲಿತ ಅಭ್ಯಥರ್ಿ ಗೆದಿದ್ದಾರೆ. ರಾಜ್ಯದಲ್ಲಿ ನಾವು ಇಷ್ಟೊಂದು ಪ್ರಮಾಣದ ಗೆಲುವು ನಿರೀಕ್ಷಿಸಿರಲಿಲ್ಲ. ಮೋದಿ ಅಲೆ ಇಷ್ಟೊಂದು ಪ್ರಮಾಣದಲ್ಲಿದೆ ಎಂದು ಆರಂಭದಲ್ಲಿ ಗೊತ್ತೇ ಆಗಿರಲಿಲ್ಲ. ಮಾಧ್ಯಮಗಳ ಸಮೀಕ್ಷೆ ಕೂಡ 18ಕ್ಕೆ ನಿಂತು ಹೋಗಿತ್ತು. ಅವೆಲ್ಲವನ್ನೂ ಮೀರಿ 25 ಸ್ಥಾನಗಳಲ್ಲಿ ಗೆದ್ದಿದ್ದೇವೆ ಅದಕ್ಕೆ ಜನತೆ ಪ್ರಧಾನಿ ಮೋದಿ ಅವರ ಮೇಲಿಟ್ಟಿರುವ ನಂಬಿಕೆಯೇ ಕಾರಣವೆಂದರು.
ರಾಜ್ಯದಲ್ಲಿ ಮೈತ್ರಿ ಸಕರ್ಾರ ಇವತ್ತು ಇರುತ್ತದೆ ಅಥವಾ ಹೋಗುತ್ತದೆ ಗೊತ್ತಿಲ್ಲ .ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ಬರಬಹುದು. ಚುನಾವಣೆ ಎಂದಾದರೂ ಬರಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು , ವಿಶೇಷ ಸಂಸ್ಕೃತಿ ಉಳಿಸುವ ಸಕರ್ಾರ ರಚನೆ ಮಾಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಲೋಕಸಭಾ ಚುನಾವಣಾ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರರಾವ್ , ಅರವಿಂದ ಲಿಂಬಾವಳಿ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ 25 ಸಂಸದರು, ಉಪ ಚುನಾವಣೆಯಲ್ಲಿ ಗೆದ್ದ ಶಾಸಕ ಡಾ.ಅವಿನಾಶ್ ಜಾಧವ್ ಅವರನ್ನು ರಾಜ್ಯ ಬಿಜೆಪಿ ವತಿಯಿಂದ ಸನ್ಮಾನಿಸಿದರು. ಸನ್ಮಾನಿತರಿಗೆ ವಿಶ್ವ ಪರಿಸರ ದಿನದ ಹಿನ್ನಲೆಯಲ್ಲಿ ಒಂದೊಂದು ಸಸಿ ಹಾಗು ಸಂವಿಧಾನದ ಪ್ರತಿ ನೀಡಲಾಯಿತು. ರಾಜ್ಯ ಪದಾಧಿಕಾರಿಗಳು ಸಂಸದರಿಗೆ ಪುಷ್ಪಮಳೆಗೈದು ಗೌರವ ಸಲ್ಲಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಲೋಕಸಭೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ಕಾರ್ಯಕರ್ತರಿಗೆ ಸತ್ಕಾರ ಮಾಡಲಾಯಿತು. ಲೋಕಸಭೆ ಚುನಾವಣೆ ಯಶಸ್ವಿಗೆ ಕಾರಣರಾದ ಕಾರ್ಯಕರ್ತರಿಗೆ ರಾಜ್ಯ ಘಟಕ ವಿಶೇಷ ಗೌರವ ಸಲ್ಲಿಕೆ ಮಾಡಿತು.
ಕಾರ್ಯಕರ್ತರು ಕುಳಿತ ಸ್ಥಳಗಳಿಗೆ ತೆರಳಿದ ಬಿ.ಎಸ್ ಯಡಿಯೂರಪ್ಪ ಹಾಗು ಮುಖಂಡರಿಗೆ ಪುಷ್ಪವೃಷ್ಠಿ ಮಾಡುವುದರ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಅನಂತಕುಮಾರ್ ಹೆಗಡೆ ಮಾತ್ರ ಗೈರು ಹಾಜರಾಗಿದ್ದರೆ, ಉಳಿದ ಎಲ್ಲಾ ಸಂಸದರು ಹಾಜರಿದ್ದರು.