ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ

ಲೋಕದರ್ಶನ ವರದಿ

ವಿಜಯಪುರ: ದಲಿತ ಸಂಘರ್ಷ ಸಮಿತಿ ಸಮತಾವಾದ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ರಂದು ಹಳೆಯ ಪ್ರವಾಸಿ ಮಂದಿರದಲ್ಲಿ ಜರುಗಿತು.

ಸಭೆಯ ಅದ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಯಮನಪ್ಪ ಸಿದರಡ್ಡಿಯವರು ವಹಿಸಿದ್ದರು. ಮಹಿಳಾ ಘಟಕದ ಅದ್ಯಕ್ಷ ಆಶಾ ಕಟ್ಟಿಮನಿ, ಹಾಗೂ ಸುಭಾಸ ಹೊನಕಂಠಿ, ಚಿಕ್ಕಯ್ಯ ಮಂಡರ, ಧರ್ಮರಾಜ ಯಂಟಮಾನ, ದೇವೇಂದ್ರ ದೊಡಮನಿ, ಭೀಮು ಮ್ಯಾಕೇರಿ ಇನ್ನಿತರರು ಇದ್ದರು. ಇದೇ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. 

ಜಿಲ್ಲಾ ಕಾಯರ್ಾಧ್ಯಕ್ಷ ಶ್ರೀಶೈಲ ದೊಡಮನಿ, ಜಿಲ್ಲಾ ಉಪಾಧ್ಯಕ್ಷರಾಗಿ ಮಹಾಂತೇಶ ಮಿಲ್ಟ್ರಿ, ಜಿಲ್ಲಾ ಖಜಾಂಚಿಯಾಗಿ ರಮೇಶ ಮಂಗಳೂರ, ತಿಕೋಟಾ ತಾಲೂಕಾ ಅಧ್ಯಕ್ಷರಾಗಿ ಗೌಥಮ ಸಿಂದೆ,  ಜಿಲ್ಲಾ ಕಲಾವಿದರ ಒಕ್ಕೂಟದ ಅಧ್ಯಕ್ಷರನ್ನಾಗಿ ಹಣಮಂತ ಹತ್ತರಕಾಳ ಹಾಗೂ ಬಬಲೇಶ್ವರ ತಾಲೂಕಿನ ವಿದ್ಯಾಥರ್ಿ ಘಟಕದ ಅದ್ಯಕ್ಷರನ್ನಾಗಿ ಜಾವೀದ ಜಮಾದಾರ ಇವರನ್ನು ಆಯ್ಕೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀನಿವಾಶ ಕೋಣೆಗೋಳ, ಮಹೇಶ ಮಾದರ, ರಾಜು ಪಿಂಜಾರೆ, ಈಶ್ವರ ಮಾದರ, ಸದಾಶಿವ ಸಿಂದೆ, ಇನ್ನಿತರ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.