ದಲಿತ ಸಂಘರ್ಷ ಸಮಿತಿ ಅಮಿತ್ ಶಾ ಹೇಳಿಕೆಗೆ ಖಂಡನೆ

Dalit Sangharsh Committee condemns Amit Shah's statement

ದಲಿತ ಸಂಘರ್ಷ ಸಮಿತಿ ಅಮಿತ್ ಶಾ ಹೇಳಿಕೆಗೆ ಖಂಡನೆ 

ಹಾವೇರಿ 13: ಇಂದು ಹಾವೇರಿಯಲ್ಲಿ ಅಪಾರ ಜಿಲ್ಲಾಧಿಕಾರಿಗಳು ನಾಗರಾಜ್‌ಎಲ್‌ಇವರ ಮುಖಾಂತರ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕರು ಡಾ. ಸಂಜಯಗಾಂಧಿ ಸಂಜೀವಣ್ಣನವರ, ಮಾತನಾಡಿದದೇಶದ ಮಹಾನ್‌ಜ್ಞಾನಿ ದೇಶದ ಮೊಟ್ಟ ಮೊದಲು ಕಾನೂನು ಮಂತ್ರಿ  ನಮ್ಮದೇಶದ ಸಂವಿಧಾನ ಶಿಲ್ಪಿ ಪಿತಾಮಹರಾಷ್ಟ್ರದ ಧೀಮಂತ ನಾಯಕ ಬಾಬಾ ಸಾಹೇಬ್‌ಅಂಬೇಡ್ಕರ್‌ಅವರಿಗೆ ಎಂಥ ಮಹಾನ್ ನಾಯಕರಿಗೆ ಈ ರೀತಿ ಮಾತನಾಡಿದರೆ ಜನ ಸಾಮಾನ್ಯರಗತಿ ಹೇಗೆ..?ಅವಹೇಳನಕಾರಿ ಹೇಳಿಕೆಯನ್ನು ಮಾತನಾಡಿದ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು, ಕೇಂದ್ರದ ಗೃಹ ಮಂತ್ರಿಗಳಾದ ಅಮಿತ್ ಶಾ ಅವರು ಸಂಸತ್‌ಕಲಾಪದಲ್ಲಿ ಕೆಲವರಿಗೆ ಅಂಬೇಡ್ಕರ್ ಅಂಬೇಡ್ಕರ್‌ಎನ್ನುವುದು ವ್ಯಸನಿ ಫ್ಯಾಶನ್ ನಾಗ್ಬಿಟ್ಟಿದೆ ಅಂಬೇಡ್ಕರ್ ಬದಲು ಯಾವುದಾದರೂ ಒಂದು ದೇವರನ್ನು ಸ್ಮರಿಸಿದ್ದರೆ ಏಳೇಳು ಜನ್ಮಕ್ಕೂ ಸ್ವಾರ್ಥಕವಾಗುತ್ತಿತ್ತು ಎಂದು ಹೇಳಿರುವ ಹೇಳಿಕೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಜಿಲ್ಲಾ ಶಾಖೆ ಹಾವೇರಿ ಅದನ್ನು ಬಲವಾಗಿ ಖಂಡನೆ ಮಾಡುತ್ತದೆ. 

ಡಾಕ್ಟರ್ ಬಾಬಾ ಸಾಹೇಬ್‌ಅಂಬೇಡ್ಕರ್‌ಅವರು ಹಾಕಿಕೊಟ್ಟ ಸಂವಿಧಾನದ ಹಾದಿಯಲ್ಲಿ ತಾವುಗಳು ಇವತ್ತು ಸಂಸತ್ತಿನಲ್ಲಿಕುರ್ಚಿ ಮೇಲೆ ಕೂರಬೇಕಾದರೆಡಾಕ್ಟರ್ ಬಾಬಾ ಸಾಹೇಬ್‌ಅಂಬೇಡ್ಕರ್‌ಅವರ ಬರೆದ ಸಂವಿಧಾನದಅಡಿಯಲ್ಲಿಅಂಬೇಡ್ಕರ್‌ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸಂವಿಧಾನಕ್ಕೂ ಹಾಗೂ ಅಂಬೇಡ್ಕರ್ರಿಗೂ ವಿರುದ್ಧವಾಗಿರುತ್ತದೆ ಕೋಮುವಾದಿಗಳು ಯಾವಾಗಲೂಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆಎನ್ನುವುದಕ್ಕೆ ಬೇರೇನು ಸಾಕ್ಷಿಇಲ್ಲ ಸಮಾಜಿಕಘನತೆಯನ್ನು ಮತ್ತು ಸಮಾನತೆಯನ್ನುತಂದುಕೊಟ್ಟವರುಡಾಕ್ಟರ್ ಬಾಬಾ ಸಾಹೇಬ್‌ಅಂಬೇಡ್ಕರ್‌ಅವರು ಭಾರತದಲ್ಲಿ ಹುಟ್ಟದಿದ್ದರೆ ಭಾರತದ ಸಂವಿಧಾನವನ್ನು ಬರೆಯದಿದ್ದರೆ ನೀವು ಈ ದೇಶದ ಗೃಹ ಮಂತ್ರಿಆಗುತ್ತಿರಲಿಲ್ಲ ನೀವು ಯಾರದೋ ಮನೆಯಲ್ಲಿಜೀತದುಡಿಯ ಬೇಕಾಗುತ್ತಿತ್ತು ನೀವು ಆಡುವ ಮಾತುಗಳು ನೀವಾಡುವ ಪದಗಳು ಗಮನಿಸಿದರೆ ಮನಸ್ಮೃತಿಯನ್ನು ಮತ್ತೊಮ್ಮೆದೇಶದಲ್ಲಿ ಜಾರಿಗೊಳಿಸುವ ಹುನ್ನಾರಇದಾಗಿದಆದ್ದರಿಂದ ಮಾನ್ಯಗಣವೆತ್ತ ಪ್ರಧಾನಮಂತ್ರಿಗಳು ಅಂಬೇಡ್ಕರ್‌ಅವರ ಬಗ್ಗೆ ಗೌರವಇದ್ದರೆತಕ್ಷಣವೇಅಮಿತ್ ಶಾ ರವರನ್ನು ಗೃಹ ಮಂತ್ರಿ ಸ್ಥಾನದಿಂದಕಿತ್ತೆಸೆಯಬೇಕೆಂದುಕರ್ನಾಟಕದಲಿತ ಸಂಘರ್ಷ ಸಮಿತಿಜಿಲ್ಲಾ ಶಾಖೆ ಹಾವೇರಿಒತ್ತಾಯಿಸಲಾಗುತ್ತದೆಒಂದು ವೇಳೆ ಅಮಿತ್ ಶಾ ಅವರನ್ನುಕೇಂದ್ರ ಸಂಪುಟದಿಂದ ಮುಂದುವರಿಸಿದ್ದೆ ಆದರೆದೇಶಾದ್ಯಂತಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಪರಸ್ಥಿತಿ ಹತೋಟಿಗೆತರುವ ಮುನ್ನಅಮಿತ್ ಶಾರವರನ್ನುಕೂಡಲೇ ಸಂಪುಟದಿಂದಕೈಬಿಡಬೇಕೆಂದುಕರ್ನಾಟಕದಲಿತ ಸಂಘರ್ಷ ಸಮಿತಿಆಗ್ರಹಿಸುತ್ತದೆ. 

ಈ ಸಂದರ್ಭದಲ್ಲಿಜಿಲ್ಲಾ ಸಂಚಾಲಕರಾದಡಾ. ಸಂಜಯಗಾಂಧಿ ಸಂಜೀವಣ್ಣನವರ, ಮಹಿಳಾ ಜಿಲ್ಲಾ ಸಂಚಾಲಕಿ ಸುಮಂಗಲ ರಾರಾವಿ, ಹಾವೇರಿತಾಲೂಕ ಸಂಚಾಲಕರಾದ ಶಿವಣ್ಣ ಕನವಳ್ಳಿ ,ಹಾಗೂ ರಮೇಶ್‌ಜಾಲಿಹಾಳ  ,ಶೇಖಪ್ಪ ಹರಿಜನ್ ,ಹಾನಗಲ್‌ತಾಲೂಕ ಸಂಚಾರಕರುಗೌರಮ್ಮ ಹರಿಜನ್ ,ಹಾವೇರಿತಾಲೂಕ ಮಹಿಳಾ ಸಂಚಾಲಕರು ವಿಷ್ಣುಕಾಯಣ್ಣನವರು ,ಇನ್ನೂ ಅನೇಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಇದ್ದರು.