ತಾಳಿಕೋಟೆ27: ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಾ.ಎನ್.ಆರ್.ಮೂತರ್ಿ ಸ್ಥಾಪಿತ) ಸಂಘಟನೆಯ ತಾಳಿಕೋಟೆ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಮಿಣಜಗಿ ಗ್ರಾಮದ ಕುಮಾರಿ ಮೀನಾಕ್ಷೀ ಹಣಮಂತ ಮಾದರ ಅವರನ್ನು ನೇಮಕ ಮಾಡಿ ತಾಲೂಕಾ ಅಧ್ಯಕ್ಷ ಮಲ್ಲಪ್ಪ ದೊಡಮನಿ ಅವರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ತಾಳಿಕೋಟೆಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸವರ್ಾನುಮತದಿಂದ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಮೀನಾಕ್ಷೀ ಮಾದರ ಅವರನ್ನು ಆಯ್ಕೆ ಮಾಡಿ ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಮಲ್ಲಪ್ಪ ದೊಡಮನಿ ಅವರು ತಿಳಿಸಿದ್ದಾರೆ.
ಈ ಸಮಯದಲ್ಲಿ ಬೆಳಗಾವಿ ವಿಭಾಗದ ಅಧ್ಯಕ್ಷರಾದ ಅಶೋಕ ನಂದಿ, ಜಿಲ್ಲಾ ಸಂಘಟನಾ ಸಂಚಾಲಕ ಶಿಡ್ಲಪ್ಪ ಮಾದರ, ಬಸವನ ಬಾಗೇವಾಡಿ ತಾಲೂಕಾ ಅಧ್ಯಕ್ಷ ಸೈದಪ್ಪ ಮಾದರ, ಸಂಘಟನಾ ಸಂಚಾಲಕ ಯುವರಾಜ ಮಿಣಜಗಿ, ಹಣಮಂತ ಮಾದರ, ತಾಲೂಕಾ ಪ್ರಧಾನ ಕಾರ್ಯದಶರ್ಿ ಸಂಗಮೇಶ ದೊಡಮನಿ, ಉಪಾಧ್ಯಕ್ಷ ದೇವಪ್ಪ ಮಾದರ, ಮೊದಲಾದವರು ಇದ್ದರು.